ಜಕಾರ್ತ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಹಿಮಾ ದಾಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 14 ವರ್ಷಗಳ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆಮಾಡಿದ್ದಾರೆ. ಈ ಮೂಲಕ ಭಾರತದ 14 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ
Advertisement
????NEW NATIONAL RECORD ????@HimaDas8 set new Indian 400 national Record with a performance of 51.00s at the #AsianGames2018 #HimaDas #monjai pic.twitter.com/nr6OO1NStf
— INDIAN ATHLETES (@indian_athletes) August 25, 2018
Advertisement
ಈ ಮೊದಲು 2004 ರ ಚೆನ್ನೈನಲ್ಲಿ ನಡೆದಿದ್ದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಕೌರ್ ಈ ದಾಖಲೆಯನ್ನು ಮಾಡಿದ್ದರು. ಅರ್ಹತಾ ಸುತ್ತಿನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ರವರು ಅಂತಿಮ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.
Advertisement
ಅರ್ಹತಾ ಸುತ್ತಿನ ಓಟದಲ್ಲಿ ಬಹರೇನ್‍ನ ಸಲ್ವಾ ನಸರ್ ಜೊತೆ ಹಿಮಾ ದಾಸ್ ಓಡಿದ್ದು, ಸಲ್ವಾ ನಸರ್ ಸಹ ಸ್ಪರ್ಧೆ ಗೆಲ್ಲುವ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಇದನ್ನೂ ಓದಿ: ಹಿಮಾ ದಾಸ್ ಸಾಧನೆಗಿಂತ, ಜಾತಿಯನ್ನೇ ಹೆಚ್ಚಾಗಿ ಹುಡುಕಿದ ಜಾಲತಾಣಿಗರು!
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv