ಜಕಾರ್ತ: ಇಂಡೋನೇಷ್ಯಾದಲ್ಲಿನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಚಿನ್ನದ ಖಾತೆಯನ್ನು ತೆರೆದಿದ್ದು, ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ ಪೂನಿಯಾ ಸ್ವರ್ಣದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಜಪಾನ್ ದೇಶದ ಟಕಟಾನಿ ಡೈಚಿ ವಿರುದ್ಧ ನಡೆದ ಅಂತಿಮ ಸುತ್ತಿನಲ್ಲಿ 11-8 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಖಸನೋವಾ ಸಿರೋಜಿದ್ದಿನ್ (ಉಝಬೇಕಿಸ್ತಾನ), ಫಯಾಝೀವ್ ಅಬ್ದುಲ್‍ಖಾಸೀಮ್ (ತಜಕೀಸ್ತಾನ್) ಮತ್ತಿ ಬಚ್ಚೂಲೂನ್ ಬತಮಗನೈ(ಮಂಗೋಲಿಯಾ) ವಿರುದ್ಧ ಗೆಲುವು ಸಾಧಿಸಿ ಪೂನಿಯಾ ಫೈನಲ್ ಗೆ ಪ್ರವೇಶ ಪಡೆದಿದ್ದರು.
Advertisement
Advertisement
2014ರಲ್ಲಿ ಇಂಚೇನ್ ಏಷ್ಯನ್ ಕ್ರೀಡಾ ಕೂಟದಲ್ಲಿ ಉಸ್ತಾದ ಯೋಗೇಶ್ವರ್ ದತ್ ಪುರಷರ ಫ್ರೀ ಸ್ಟೈಲ್ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. ಯೋಗೇಶ್ವರ್ ಗರಡಿಯಲ್ಲಿ ಪಳಗಿರುವ ಪೂನಿಯಾ ಗುರುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. ಆಸ್ಟೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿಯೂ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. 2014 ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
Advertisement
ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಜಯಿಸುವ ಮೂಲಕ ಭಾರತದ ಖಾತೆಯನ್ನು ತೆರೆದಿದ್ದರು. ಇಬ್ಬರ ಜೋಡಿ 429.9 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲವಾದರು.