CricketLatestLeading NewsMain PostSports

ಕಿರಿಯರ ಏಷ್ಯಾಕಪ್‌, 9 ವಿಕೆಟ್‌ಗಳ ಭರ್ಜರಿ ಜಯ – ಭಾರತ ಚಾಂಪಿಯನ್‌

ದುಬೈ: 19 ವರ್ಷದ ಒಳಗಿನವರ ಏಷ್ಯಾಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಕಿರಿಯರ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಟ್ರೋಫಿ ಗೆದ್ದುಕೊಂಡಿದೆ.

ಮಳೆಯಿಂದ ಅಡಚಣೆಯಾದ ಹಿನ್ನೆಲೆಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 38 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿತ್ತು.

ಡಕ್‌ವರ್ತ್‌ ಲೂಯಿಸ್‌ ನಿಯಮದ ಅನ್ವಯ ಭಾರತ 32 ಓವರ್‌ಗಳಲ್ಲಿ 102 ರನ್‌ ಗಳಿಸಬೇಕಿತ್ತು. ಆದರೆ ಭಾರತ 21.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 104 ರನ್‌ಗಳಿಸಿ ಜಯವನ್ನು ಗಳಿಸಿತು. ಇದನ್ನೂ ಓದಿ: ಕುಟುಂಬವನ್ನು ಸಾಕಲು ಮಗಳನ್ನೇ ಮಾರಿದ ತಂದೆ – ಗಂಡನಿಗೆ ವಿಚ್ಛೇದನ ನೀಡಿದ ಅಫ್ಘಾನ್‌ ಮಹಿಳೆ

ಭಾರತದ ಪರ ರಘುವಂಶಿ ಔಟಾಗದೇ 56 ರನ್‌(67 ಎಸೆತ, 7 ಬೌಂಡರಿ) ಹೊಡೆದರೆ ಶೇಖ್‌ ರಶೀದ್‌ ಔಟಾಗದೇ 31 ರನ್‌(49 ಎಸೆತ, 2 ಬೌಂಡರಿ) ಹೊಡೆದರು. ವಿಕಿ ಓಸ್ಟ್ವಾಲ್ 3, ಕೌಶಲ್‌ ತಾಂಬೆ 2, ರಾಜ್ಯವರ್ಧನ್‌, ರವಿಕುಮಾರ್‌, ರಾಜ್‌ ಭಾವ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಟೀಂ ಇಂಡಿಯಾ ಪರ ನೂತನ ಮೈಲಿಗಲ್ಲು ನೆಟ್ಟ ಶಮಿ, ಪಂತ್ ಸಂಭ್ರಮ

ಲಂಕಾ ಪರ 8 ಮಂದಿ ಬೌಲರ್‌ಗಳು ಬೌಲ್‌ ಮಾಡಿ ಕಟ್ಟಿ ಹಾಕಲು ಪ್ರಯತ್ನಿಸಿದರು. ಆದರೆ ಮುರಿಯದ 2ನೇ ವಿಕೆಟಿಗೆ ರಘುವಂಶಿ ಮತ್ತು ಶೇಖ್‌ ರಶೀದ್‌ 96 ರನ್‌ ಜೊತೆಯಾಟವಾಡಿ ಗೆಲುವು ತಂದುಕೊಟ್ಟರು.

Leave a Reply

Your email address will not be published.

Back to top button