ಢಾಕಾ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಂಚಿನ ಪದಕ್ಕಾಗಿ ನಡೆದ ಹೋರಾಟದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ 4-3 ಗೋಲ್‍ಗಳ ರೋಚಕ ಜಯದೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.
Advertisement
ಪಂದ್ಯ ಆರಂಭವಾಗಿ ಮೊದಲ ಕ್ವಾರ್ಟರ್‌ನ 5ನೇ ನಿಮಿಷದಲ್ಲಿ ಅಮ್ಜದ್ ಅಲಿ ಸಿಡಿಸಿದ ಗೋಲ್‍ನಿಂದ ಭಾರತ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿತು. 11ನೇ ನಿಮಿಷದಲ್ಲಿ ಅಫ್ರ್ರಾಜ್ ಗೋಲ್ ಸಿಡಿಸಲು ಸಫಲರಾದರು ಈ ಮೂಲಕ ಪಾಕಿಸ್ತಾನ 1-1 ಸಮಬಲ ಸಾಧಿಸಿತು. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್
Advertisement
ಜಿದ್ದಾ ಜಿದ್ದಿನಿಂದ ನಡೆದ ಎರಡನೇ ಕ್ವಾರ್ಟರ್‌ನಲ್ಲಿ ಎರಡು ತಂಡಗಳಿಂದ ಯಾವುದೇ ಗೋಲ್ ಸಿಡಿಯಲಿಲ್ಲ. 3ನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನದ ಯುವ ಆಟಗಾರ ಅಬ್ದುಲ್ ರಾಣಾ ಸಿಡಿಸಿದ ಭರ್ಜರಿ ಗೋಲ್‍ನಿಂದ ಪಾಕಿಸ್ತಾನ ತಂಡ 2-1 ಗೋಲ್‍ಗಳ ಮುನ್ನಡೆ ಪಡೆದುಕೊಂಡಿತು. ಇದಾದ ಕೆಲಹೊತ್ತಿನಲ್ಲೇ ಭಾರತ ಪರ ಸುಮಿತ್ ಸಿಡಿಸಿದ ಗೋಲ್‍ನಿಂದ 2-2 ಸಮಬಲ ಸಾಧಿಸಿತು. ಇದೇ ಲಯ ಮುಂದುವರಿಸಿದ ಭಾರತ ತಂಡ 4ನೇ ಕ್ವಾರ್ಟರ್‌ನಲ್ಲಿ ವರುಣ್ ಕುಮಾರ್ ಸಿಡಿಸಿದ ಗೋಲ್‍ನಿಂದ 3-2 ಗೋಲ್‍ಗಳ ಮುನ್ನಡೆ ಕಾಯ್ದುಕೊಂಡಿತು.
Advertisement
Indian Men's Hockey team making us proud! ????????????
Congratulations to Team India for winning Bronze medal at Asian Champions Trophy 2021 beating Pakistan 4-3 #INDvPAK pic.twitter.com/JGAMYA85dl
— Piyush Goyal (@PiyushGoyal) December 22, 2021
Advertisement
ಭಾರತಕ್ಕೆ ಪ್ರಬಲ ಪೈಪೋಟಿ ನೀಡಿದ ಪಾಕಿಸ್ತಾನ ಉತ್ತಮ ಹೋರಾಟ ನಡೆಸಿತು. ಈ ನಡುವೆ ಆಕಾಶ್‍ದೀಪ್ ಸಿಂಗ್ ಸಿಡಿಸಿದ ಗೋಲ್ ಭಾರತಕ್ಕೆ ಮುನ್ನಡೆಯನ್ನು 4-2 ಹಿಗ್ಗಿಸಿತು. ಇನ್ನೇನು ಪಂದ್ಯ ಮುಗಿಯಲು ಕೆಲಕಾಲ ಇರುವಂತೆ ಪಾಕಿಸ್ತಾನ ಪರ ನದೀಮ್ ಗೋಲ್ ಸಿಡಿಸಿದರು ಅದು ಪಾಕಿಸ್ತಾನದ ಕಂಚಿನ ಆಸೆಗೆ ಬಲ ತುಂಬಿದರೂ ಕೂಡ ಭಾರತದ ಅತ್ಯುತ್ತಮ ಆಟದ ಮುಂದೆ 1 ಗೋಲ್ ಅಂತರದ ಸೋಲು ಅನುಭವಿಸಿತು. ಈ ಮೂಲಕ ಭಾರತ ತಂಡ 4-3 ಗೋಲ್‍ಗಳಿಂದ ಗೆದ್ದು ಕಂಚಿನ ಪದಕ ಪಡೆಯಿತು. ಇದನ್ನೂ ಓದಿ: ಮತ್ತೆ ಪ್ರೋ ಕಬಡ್ಡಿ ಹಬ್ಬ – ಇಂದಿನಿಂದ ಬೆಂಗಳೂರು ಬುಲ್ಸ್ ಅಭಿಯಾನ ಶುರು
What A Victory #TeamIndia ???? #India beat #Pakistan 4-3 to win bronze medal in #Hockey #AsianChampionsTrophy pic.twitter.com/qCBqm3ON2D
— Sunil Singh (@SunilSingh_0007) December 22, 2021
ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ ತಂಡ 3-5 ಗೋಲ್‍ಗಳ ಅಂತರದಿಂದ ಸೋತು ಸೆಮಿಫೈನಲ್‍ನಿಂದ ಹೊರಬಿದ್ದು, ಮೂರನೇ ಸ್ಥಾನಕ್ಕಾಗಿ ಪಾಕಿಸ್ತಾನ ಜೊತೆ ಇಂದು ಆಡಿತ್ತು.