ಬ್ಯಾಂಕಾಕ್: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ 2019ರಲ್ಲಿ ಭಾರತೀಯ ಬಾಕ್ಸರ್ ಅಮಿತ್ ಪಂಗಲ್ ಪುರುಷರ 52 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಥೈಲಾಂಡ್‍ನ ಬ್ಯಾಂಕಾಕ್‍ನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ನಡೆಯುತ್ತಿದ್ದು, 23 ವರ್ಷದ ಪಶ್ಚಿಮ ಬಂಗಾಳದ ಅಮಿತ್ ಪಂಗಲ್ ಅವರು ಚಿನ್ನದ ಪದಕದ ಖಾತೆಯನ್ನು ತೆರೆದಿದ್ದಾರೆ.
Advertisement
Advertisement
ಅಮಿತ್ ಪಂಗಲ್ ಅವರು ಗುರುವಾರ ನಡೆದ ಸೆಮಿಫೈನಲ್‍ನಲ್ಲಿ ಚೀನಾದ ಜಿಯಾಂಗು ಅವರನ್ನು 4-1 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶ ಮಾಡಿದ್ದರು. ಫೈನಲ್‍ನಲ್ಲಿ ಕಳೆದ ವರ್ಷ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದ ಕೊರಿಯಾದ ಕಿಮ್ ಇನ್ಕ್ಯೂ ಕೊರುಇಯಾ ಅವರ ವಿರುದ್ಧ ಸೆಣಸಿದ್ದಾರೆ. ಭಾರೀ ಪೈಪೋಟಿಯಿಂದ ನಡೆದಿದ್ದ ಪಂದ್ಯದಲ್ಲಿ ಅಮಿತ್ ಪಂಗಲ್ ಭರ್ಜರಿ ಜಯಗಳಿಸಿದ್ದಾರೆ.
Advertisement
ಅಮಿತ್ ಪಂಗಲ್ ಅವರು ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಸ್ಟ್ರಾಂಡ್ಜಾ ಮೆಮೋರಿಯಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಅವರು 49 ಕೆಜಿ ನಿಂದ 52 ಕೆಜಿಗೆ ಭಡ್ತಿ ಪಡೆದ ನಂತರ ನಡೆದ ಮುಖ್ಯ ಕ್ರೀಡಾಕೂಟವಾದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
Advertisement
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 49 ಕೆ.ಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ದೀಪಕ್ ಸಿಂಗ್ ಅವರು ಉಜ್ಬೇಕಿಸ್ತಾನ್ ಬಾಕ್ಸರ್ ಅವರಿಂದ ಪರಜಯಗೊಂಡು ಬೆಳ್ಳಿ ಪದಕ ಗಳಿಸಿದ್ದಾರೆ.
What a fabulous show by @Boxerpanghal at????AsianChampionship ‘19!
Amit clinches a ????for India in #AsianBoxingChampionship #Bangkok outclassing Kim Inkyu of #SouthKorea by 5-0 in the finals.
India is very proud of you champion!???????????????????? pic.twitter.com/CzWZLcB1eH
— Dept of Sports MYAS (@IndiaSports) April 26, 2019