ಭಾರತೀಯ ಆಟಗಾರರು ಹ್ಯಾಂಡ್ ಶೇಕ್ ಮಾಡದ ವಿವಾದದಿಂದ ಪಾಕ್ (Pakistan) ಇದ್ದ ಅಲ್ಪಸ್ವಲ್ಪ ಮಾನವನ್ನೂ ಈಗ ಕಳೆದುಕೊಂಡಿದೆ. ಇಂದು ಏಷ್ಯಾಕಪ್ (Asia Cup 2025) ಟೂರ್ನಿಯ ಗುಂಪು ಹಂತದಲ್ಲಿ ಯುಎಇ (UAE) ವಿರುದ್ಧ ನಿಗದಿಯಾಗಿದ್ದ ಕೊನೆಯ ಪಂದ್ಯ ಆಡುವುದಿಲ್ಲ ಎಂದು ಮೊಂಡುತನ ಮಾಡಿತ್ತು. ಜೊತೆಗೆ ಪಾಕ್ ಆಟಗಾರರನ್ನು ಕ್ರೀಡಾಂಗಣಕ್ಕೆ ಬಿಡದೇ ಹೋಟೆಲ್‌ನಲ್ಲೇ ಇರಿಸಿತ್ತು. ಆದರೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪಿಸಿಬಿ ಏಷ್ಯಾಕಪ್ ಕೊನೆಯ ಪಂದ್ಯವನ್ನ ಆಡಲು ನಿರ್ಧರಿಸಿದೆ.
ಸೂಪರ್ ಫೋರ್ ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ಏಷ್ಯಾ ಕಪ್ 2025 ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಲೇ ಇತ್ತು. ಪಿಸಿಬಿ ಪಾಕಿಸ್ತಾನ ತಂಡವನ್ನು ತಮ್ಮ ಹೋಟೆಲ್‌ನಲ್ಲಿಯೇ ಇರಲು ಆದೇಶಿಸಿ ಟಾಸ್ ವಿಳಂಬ ಮಾಡಿತು. ಭಾರೀ ಹೈಡ್ರಾಮಾ ಬಳಿಕ ಈ ಬಗ್ಗೆ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನೆಲೆ 7 ಗಂಟೆಯ ವೇಳೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರ ಬದಲಾಯಿಸಿತು. ಟಾಸ್ ಅನಗತ್ಯವಾಗಿ ಅರ್ಧ ಗಂಟೆ ವಿಳಂಬಗೊಂಡಿತು.
ಪೈಕ್ರಾಫ್ಟ್ ಕ್ಷಮೆಯಾಚನೆಗೆ ಬೇಡಿಕೆ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಕ್ಕೂ ಮುನ್ನ ಪೈಕ್ರಾಫ್ಟ್ ಅವರನ್ನು ಸಮಿತಿಯಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಬಳಿಕ ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿತ್ತು. ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಪಿಸಿಬಿ ಸಭೆ ನಡೆಸಿ, ಉದ್ದೇಶಪೂರ್ವಕವಾಗಿ ಪಂದ್ಯವನ್ನು ವಿಳಂಬಗೊಳಿಸಿತು. ಇದರ ನಂತರ, ಅಂತಿಮವಾಗಿ ಆಡಲು ನಿರ್ಧರಿಸಿತು.
ಒಂದು ಗಂಟೆ ಪಂದ್ಯ ವಿಳಂಬ:
ಪಾಕಿಸ್ತಾನ ಮತ್ತು ಯುಎಇ ನಡುವಿನ ಪಂದ್ಯದ ಟಾಸ್ ಸಂಜೆ 7:30ಕ್ಕೆ ನಡೆಯಬೇಕಿತ್ತು, ಪಂದ್ಯವು ರಾತ್ರಿ 8 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ, ಪಂದ್ಯವು ಒಂದು ಗಂಟೆ ವಿಳಂಬವಾಗಿದೆ. ಈ ಪಂದ್ಯವು ಪಾಕಿಸ್ತಾನಕ್ಕೆ ಮಾಡು-ಇಲ್ಲ-ಮಡಿ ಪರಿಸ್ಥಿತಿಯಾಗಿದ್ದು, ಪಾಕಿಸ್ತಾನ ಸೋತರೆ, ಸೂಪರ್ ಫೋರ್‌ನಿಂದ ಹೊರಗುಳಿಯುತ್ತಾರೆ.