ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಜಿದ್ದಾಜಿದ್ದಿನ ಏಷ್ಯಾಕಪ್ ಸೂಪರ್-4 (Asia Cup Super Four) ಇಂಡೋ ಪಾಕ್ ಕನದಕ್ಕೆ ಮಳೆ ಅಡ್ಡಿಯಾಗಿದ್ದು ಸೋಮವಾರ ಪಂದ್ಯ ನಡೆಯಲಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನ (Pakistan), ಬ್ಯಾಟಿಂಗ್ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ (Team India) ಬಿಟ್ಟುಕೊಟ್ಟಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಶುಭಮನ್ ಗಿಲ್ ಪಾಕ್ ಬೌಲರ್ಗಳನ್ನ ಹಿಗ್ಗಾಮುಗ್ಗ ಚೆಂಡಾಡಿ ಉತ್ತಮ ರನ್ ಕಲೆಹಾಕಿದರು. ಇದನ್ನೂ ಓದಿ: KL ರಾಹುಲ್ ಈಸ್ ಬ್ಯಾಕ್ – ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಕನ್ನಡಿಗನ ವಿಶೇಷ ಸಾಧನೆ
Advertisement
Asia Cup, Super Four: Weather plays spoiler again as India-Pakistan clash stopped due to rain
Read @ANI Story | https://t.co/AVAQT3xIJX#indvspak #rain #AsiaCup2023 pic.twitter.com/H494hyAV21
— ANI Digital (@ani_digital) September 10, 2023
Advertisement
ಮೊದಲ ವಿಕೆಟ್ಗೆ ರೋಹಿತ್ ಮತ್ತು ಗಿಲ್ ಜೋಡಿ 16.4 ಓವರ್ಗಳಲ್ಲಿ 121 ರನ್ ಬಾರಿಸಿತ್ತು. ರೋಹಿತ್ ಶರ್ಮಾ 49 ಎಸೆತಗಳಲ್ಲಿ 56 ರನ್ (6 ಬೌಂಡರಿ, 4 ಸಿಕ್ಸರ್) ಚಚ್ಚಿ ಔಟಾಗುತ್ತಿದ್ದಂತೆ, 52 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 58 ರನ್ ಗಳಿಸಿದ್ದ ಶುಭಮನ್ ಗಿಲ್ ಸಹ ವಿಕೆಟ್ ಕೈಚೆಲ್ಲಿದರು. ಇದನ್ನೂ ಓದಿ: ಭಾರತ ಪಾಕ್ ಪಂದ್ಯಕ್ಕೆ ವರುಣನ ಅಡ್ಡಗಾಲು: ಮ್ಯಾಚ್ ರದ್ದಾದರೆ ಗತಿ ಏನು?
Advertisement
Advertisement
ಆ ನಂತರ ಕಣಕ್ಕಿಳಿದ ಕೆ.ಎಲ್ ರಾಹುಲ್ (KL Rahul) ಹಾಗೂ ವಿರಾಟ್ ಕೊಹ್ಲಿ ಸಹ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದರು. 24.1 ಓವರ್ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಈ ವೇಳೆ ಭಾರೀ ಮಳೆ ಸುರಿದಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆ.ಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರೀ ಮಳೆಯಿಂದ ಪಂದ್ಯವನ್ನು ರದ್ದು ಮಾಡಿದ್ದು, ಎಲ್ಲಿ ಆಟ ನಿಂತಿದೆಯೋ ಅಲ್ಲಿಂದಲೇ ಪಂದ್ಯ ನಡೆಯಲಿದೆ.
ಕಳೆದ ವಾರ ಗ್ರೂಪ್ ಹಂತದಲ್ಲು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.
Web Stories