Asia Cup: ಪಾಕ್‌ಗೆ ಕೈತಪ್ಪಿದ ಏಷ್ಯಾಕಪ್‌ ಆತಿಥ್ಯ – ಲಂಕಾದಲ್ಲಿ ಟೂರ್ನಿ ನಡೆಯುವ ಸಾಧ್ಯತೆ

Public TV
2 Min Read
India

ದುಬೈ: ಏಷ್ಯಾಕಪ್‌ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB)ಯ ಪ್ರಸ್ತಾವನೆಯನ್ನ ಸದಸ್ಯ ರಾಷ್ಟ್ರಗಳು ತಿರಸ್ಕರಿಸಿದ ನಂತರ ಏಷ್ಯಾಕಪ್‌ ಟೂರ್ನಿಯನ್ನ ದೇಶದಿಂದಲೇ ಸ್ಥಳಾಂತರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ.‌

INDvsPAK

ಸೆಪ್ಟೆಂಬರ್‌ 2 ರಿಂದ 17ರ ವರೆಗೆ ನಡೆಯಲಿರುವ ಏಕದಿನ ಏಷ್ಯಾಕಪ್‌ನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಅಫ್ಘಾನಿಸ್ತಾನ, ಶ್ರೀಲಂಕಾ (SriLanka) ಹಾಗೂ ಬಾಂಗ್ಲಾದೇಶ ಸೇರಿ 6 ದೇಶಗಳು ಸ್ಪರ್ಧಿಸಲಿವೆ. ಸದ್ಯ 6 ರಾಷ್ಟ್ರಗಳ ಕ್ರಿಕೆಟ್‌ ಟೂರ್ನಿ ಆಯೋಜಿಸಲು ಶ್ರೀಲಂಕಾ ಮುಂಚೂಣಿಯಲ್ಲಿದ್ದು, ಈ ಬಾರಿ ಆತಿಥ್ಯ ವಹಿಸಿಕೊಳ್ಳುವ ಸಾಧ್ಯತೆಯಿದೆ. ಆದ್ರೆ ಆತಿಥ್ಯ ಕೈತಪ್ಪಿದಲ್ಲಿ ಪಾಕಿಸ್ತಾನ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತದೆಯೇ ಇಲ್ಲವೇ ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

IND vs PAK 2

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲು ನಿರಾಕರಿಸಿದ ನಂತರ ಪಿಸಿಬಿ ಹೈಬ್ರಿಡ್‌ ಮಾದರಿಯ ಪ್ರಸ್ತಾವನೆಯನ್ನು ಐಸಿಸಿ ಮುಂದಿಟ್ಟಿತ್ತು. ಪಾಕಿಸ್ತಾನವು ಆತಿಥೇಯ ದೇಶಗಳೊಂದಿಗೆ ತವರಿನಲ್ಲಿ ಹಾಗೂ ಭಾರತ ಪ್ರತಿಸ್ಪರ್ಧಿ ದೇಶಗಳೊಂದಿಗೆ ಆಡುವಾಗ ತಟಸ್ಥ ಸ್ಥಳದಲ್ಲಿ ಆಡಬಹುದು ಎಂದು ಹೇಳಿತ್ತು. ಆದ್ರೆ ಸದಸ್ಯ ರಾಷ್ಟ್ರಗಳು ಈ ಪ್ರಸ್ತಾಪವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಪಾಕ್‌ನಿಂದ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಸಿಲಾಗುತ್ತಿದೆ. ಈ ಬಗ್ಗೆ ಮತತೊಂದು ಸುತ್ತಿನಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: AisaCup ಕ್ರಿಕೆಟ್‌ಗೆ ಭಾರತ ಪಾಕಿಸ್ತಾನಕ್ಕೆ ಹೋಗಲ್ಲ: BCCI ಅಧಿಕೃತ ಪ್ರಕಟ

IND VS PAK 1

ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ?:
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಟಿ20 ಏಷ್ಯಾಕಪ್‌ ಹಾಗೂ ಟಿ20 ವಿಶ್ವಕಪ್‌ನಲ್ಲಿ ಇತ್ತಂಡಗಳು ಭಾಗಿಯಾಗಿದ್ದವು. ನಂತರ ಏಷ್ಯಾಕಪ್‌ ಆಡಲು ಭಾರತ ತಂಡವನ್ನು ತನ್ನ ದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಮನವಿಯನ್ನು ನಿರಾಕರಿಸಿದ್ದರು.

Share This Article