ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ 41 ವರ್ಷಗಳ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳು (Ind vs Pak Team) ಮೊದಲ ಸಲ ಫೈನಲ್‌ನಲ್ಲಿ ಎದುರಾಗುವ ಕಾಲ ಸನ್ನಿಹಿತವಾಗಿದೆ.
ಸೂಪರ್ ಸಂಡೇ ಯಾದ ಇಂದು ಕ್ರಿಕೆಟ್ ಅಭಿಮಾನಿಗಳಿಗೆ (Cricket Fans) ನಿಜಕ್ಕೂ ಹಬ್ಬವಾಗಿದೆ. ರಾತ್ರಿ 8 ಗಂಟೆಗೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಶುರುವಾಗಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಪಾಕ್ ಭಾರತದ (Team India) ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಇತ್ತ ಭಾರತ ಕೂಡ ಮೂರನೇ ಪಂದ್ಯದಲ್ಲೂ ಮಣ್ಣು ಮುಕ್ಕಿಸಿ ಪಾಕ್ ಬಗ್ಗು ಬಡಿಯಲು ಸಜ್ಜಾಗಿದೆ. ಇದನ್ನೂ ಓದಿ: ಪಹಲ್ಗಾಮ್ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ ಸೂರ್ಯ, ಪ್ಲೇನ್ ಕ್ರ್ಯಾಶ್ ಸನ್ನೆ ಮಾಡಿದ ರೌಫ್‌ಗೆ ಬಿತ್ತು ದಂಡ
ಹ್ಯಾಂಡ್ ಶೇಕ್ ಇಲ್ಲದೇ, ಮೈದಾನದಲ್ಲಿ ಕಿರಿಕಿರಿಗಳಿಂದ ಕೂಡಿದ್ದ ಹಿಂದಿನ ಎರಡೂ ಪಂದ್ಯಗಳು ಅನೇಕ ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದವು. ಈ ನಡುವೆ ಐಸಿಸಿ ಕೆಲವು ಆಟಗಾರರಿಗೆ ದಂಡವನ್ನೂ ವಿಧಿಸಿ ಎಚ್ಚರಿಸಿತು. ಹೀಗಾಗಿ ಹೀಗಾಗಿ ಮೂರನೇ ಪಂದ್ಯದ ತೀವ್ರತೆ ಜೋರಾಗಿಯೇ ಇದೆ. ಮತ್ತೆ ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆಗಳೂ ಇವೆ.
ಭಾರತದ ವಿರುದ್ಧ ಸದಾ ಒತ್ತಡದಲ್ಲೇ ಆಡುವ, ಈ ಟೂರ್ನಿಯಲ್ಲೇ ಈವರೆಗೆ ಎರಡು ಸಲ ಸೋತ ಪಾಕಿಸ್ಥಾನಕ್ಕೆ ಇದು ಪ್ರತಿಷ್ಠೆಯ ಫೈನಲ್. ಮತ್ತೂಂದು ಸೋಲನುಭವಿಸಿ ತವರಿಗೆ ತೆರಳಿದ್ರೆ ಅಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುವುದು ನಿಶ್ಚಿತ. ಒಂದೇ ಸರಣಿಯಲ್ಲಿ ಭಾರತದಿಂದ ಮೂರು ಮುಖಭಂಗ ಕಲ್ಪಿಸಿಕೊಳ್ಳಲು ಪಾಕಿಗಳಿಂದ ಖಂಡಿತ ಸಾಧ್ಯವಿಲ್ಲ. ಇದನ್ನೂ ಓದಿ: ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್ – ಸೂಪರ್ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ
ಈ ಕೂಟದಲ್ಲಿ ಭಾರತದೆದುರು ಪಾಕಿಸ್ತಾನಿಗಳ ಯಾವ ಆಟವೂ ನಡೆಯಲಿಲ್ಲ. ಮೈದಾನದಲ್ಲೂ ಅಷ್ಟೇ, ಮೈದಾನದಾಚೆಯೂ ಅಷ್ಟೇ, ಬಹುಶಃ ಫೈನಲ್‌ನಲ್ಲೂ ಇದಕ್ಕಿಂತ ಭಿನ್ನ ಫಲಿತಾಂಶ ದಾಖಲಾಗಲಿಕ್ಕಿಲ್ಲ ಎಂಬ ದೃಢ ನಂಬಿಕೆ ಭಾರತದ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ. ಇದನ್ನೂ ಓದಿ: ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ