Asia Cup 2023 – ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್‌ಗಳ ಜಯ

Public TV
1 Min Read
Haris Rauf Shaheen Shah Afridi

ಲಾಹೋರ್‌: ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಸೂಪರ್‌ 4 ಪಂದ್ಯದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ಪಾಕಿಸ್ತಾನ (Pakistan) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 193 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಪಡೆದ ಪಾಕಿಸ್ತಾನ 39.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 194 ರನ್‌ ಹೊಡೆಯಿತು.

ಪಾಕ್‌ ಪರ ಇಮಾಮ್‌-ಉಲ್‌-ಹಕ್‌ 78 ರನ್‌‌ (84 ಎಸೆತ, 5 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರೆ ಮೊಹಮ್ಮದ್‌ ರಿಜ್ವಾನ್‌ ಔಟಾಗದೇ 63 ರನ್‌ (79 ಎಸೆತ, 7 ಬೌಂಡರಿ, 1 ಸಿಕ್ಸರ್) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಆರಂಭದಿಂದಲೇ ಕುಸಿತ:
ಆರಂಭದಿಂದಲೇ ಕುಸಿತ ಕಂಡ ಬಾಂಗ್ಲಾದೇಶ 47 ರನ್‌ಗಳಿಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತ್ತು. ನಾಯಕ ಶಕಿಬ್‌ ಉಲ್‌ ಹಸನ್‌ 53 ರನ್‌(57 ಎಸೆತ,7 ಬೌಂಡರಿ), ಮುಷ್ಫಿಕರ್‌ ರೆಹಮನ್‌ 64 ರನ್(‌ 114 ಎಸೆತ, 5 ಬೌಂಡರಿ) ನಿಂತು ಸ್ವಲ್ಪ ಪ್ರತಿರೋಧ ತೋರಿದ ಪರಿಣಾಮ ಬಾಂಗ್ಲಾ ಸ್ಕೋರ್‌ 190ರ ಗಡಿ ದಾಟಿತ್ತು.

ಹ್ಯಾರಿಸ್‌ ರೌಫ್‌ 4 ವಿಕೆಟ್‌ ಕಿತ್ತರೆ ನಸೀಮ್‌ ಶಾ 3 ವಿಕೆಟ್‌ ಪಡೆದರು. ಶಾಹಿನ್‌ ಶಾ ಅಫ್ರಿದಿ , ಅಶ್ರಫ್‌, ಆಗ ಸಲ್ಮಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು. 4 ವಿಕೆಟ್‌ ಪಡೆದ ಹಾರಿಸ್ ರೌಫ್ ಅವರಿಗೆ ಪಂದ್ಯ ಶ್ರೇಷ್ಠ ಗೌರವ ನೀಡಲಾಯಿತು.  ಇದನ್ನೂ ಓದಿ: ಟೀಂ ಭಾರತ್ ಅಂತಾ ಜೆರ್ಸಿ ಬದಲಿಸಿ – ಬಿಸಿಸಿಐಗೆ ಸೆಹ್ವಾಗ್ ಆಗ್ರಹ

ಈ ಶನಿವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಮಧ್ಯೆ, ಭಾನುವಾರ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಕ್ರಿಕೆಟ್‌ ಪಂದ್ಯ ನಡೆಯಲಿದೆ.

 

Web Stories

Share This Article