ಕೊಲಂಬೋ: ಏಷ್ಯಾ ಕಪ್ ಕ್ರಿಕೆಟ್ (Asia Cup Cricket) ಟೂರ್ನಿಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಶ್ರೀಲಂಕಾ (Sri Lanka) ರೋಚಕ 2 ವಿಕೆಟ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಶಾದಾಬ್ ಖಾನ್ (Shadab Khan) ವಿರುದ್ಧ ನಾಯಕ ಬಾಬರ್ ಅಜಂ ಮತ್ತು ಬೌಲರ್ ಶಾಹಿನ್ ಅಫ್ರಿದಿ ಸಿಟ್ಟಾಗಿರುವ ವಿಡಿಯೋ ವೈರಲ್ ಆಗಿದೆ.
ನಡೆದಿದ್ದು ಏನು?
36 ಎಸೆತಗಳಲ್ಲಿ 36 ರನ್ ಬೇಕಿದ್ದಾಗ 37ನೇ ಓವರ್ ಎಸೆಯಲು ಶಾಹಿನ್ ಅಫ್ರಿದಿ ಬಂದಿದ್ದರು. ಎರಡನೇ ಎಸೆತವನ್ನು ಅಸಲಂಕಾ ಪಾಯಿಂಟ್ ಕಡೆಗೆ ಹೊಡೆದಿದ್ದರು. ಈ ವೇಳೆ ಅಲ್ಲಿದ್ದ ಶಾದಾಬ್ ಅವರು ಫೀಲ್ಡ್ ಮಾಡಿ ಕೀಪರ್ ಕಡೆಗೆ ಥ್ರೋ ಮಾಡಿದರು. ಇದನ್ನೂ ಓದಿ: ಕೇವಲ 10 ರನ್ ಜೊತೆಯಾಟವಾಡಿ ಹೊಸ ದಾಖಲೆ ಬರೆದ ಕೊಹ್ಲಿ-ಹಿಟ್‌ಮ್ಯಾನ್
Advertisement
— No-No-Crix (@Hanji_CricDekho) September 14, 2023
Advertisement
ಕೂಡಲೇ ಥ್ರೋ ಮಾಡಿದ ಕಾರಣ ಕೀಪರ್ ವಿಕೆಟ್ ಬಳಿ ಬಂದಿರಲಿಲ್ಲ. ಹೀಗಾಗಿ ಚೆಂಡು ಬೌಂಡರಿ ಬಳಿ ಹೋಯ್ತು. ಅಸಲಂಕಾ ಈ ಎಸೆತಕ್ಕೆ ರನ್ ಗಳಿಸುವ ಉದ್ದೇಶ ಇರಲಿಲ್ಲ. ಆದರೆ ಚೆಂಡನ್ನು ಯಾರು ಹಿಡಿಯದ ಕಾರಣ ಲಂಕಾ ಎರಡು ರನ್ ಗಳಿಸಿತು. ಸುಮ್ಮನೇ ಚೆಂಡನ್ನು ಎಸೆದದ್ದಕ್ಕೆ ಬಾಬರ್ ಅಜಂ ಎರಡು ಕೈಯನ್ನು ಅಗಲಿಸಿ ಸಿಟ್ಟು ಹೊರ ಹಾಕಿದರು. ಶಾಹಿನ್ ಆಫ್ರಿದಿ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.
Advertisement
ಲಂಕಾಗೆ ರೋಚಕ ಜಯ
ಮಳೆಯಿಂದಾಗಿ 2 ಗಂಟೆ 15 ನಿಮಿಷಗಳ ಕಾಲ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 45 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮತ್ತೆ ಮಳೆ ಅಡ್ಡಿಪಡಿಸಿದ ಪರಿಣಾಮ ಓವರ್ ಕಡಿತಗೊಳಿಸಲಾಗಿತ್ತು.
Advertisement
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 42 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಹೊಡೆಯಿತು. ಡಕ್‌ವರ್ತ್ ನಿಯಮದ ಅನ್ವಯ ಲಂಕಾಗೆ 42 ಓವರ್‌ಗಳಲ್ಲಿ 252 ರನ್ ನೀಡಲಾಯಿತು.
Look at the reaction of babar azam after last ball ????????#AsiaCup2023 pic.twitter.com/cate2stPgp
— Shehzad Ahmad (@CEShehzad123) September 14, 2023
ಕೊನೆಯ ಓವರಲ್ಲಿ ಲಂಕಾಕ್ಕೆ ಗೆಲ್ಲಲು 8 ರನ್ ಬೇಕಿತ್ತು. ಜಮಾನ್ ಖಾನ್ ಎಸೆದ ಮೊದಲ ಎಸೆತದಲ್ಲಿ ಲೆಗ್‌ಬೈ ಮೂಲಕ ಪ್ರಮೋದ್ ಮದುಶನ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. 3ನೇ ಎಸೆತದಲ್ಲಿ ಅಸಲಂಕಾ 1 ರನ್ ಪಡೆದರು. 4ನೇ ಎಸೆತದಲ್ಲಿ ಮಧುಶಾನ್ ರನೌಟ್ ಆದರೂ ಅಸಲಂಕಾ ಸ್ಟ್ರೈಕ್‌ಗೆ ಬಂದರು. ಕೊನೆಯ 2 ಎಸೆತದಲ್ಲಿ 6 ರನ್ ಅಗತ್ಯವಿತ್ತು. 5ನೇ ಎಸೆತವನ್ನು ಅಸಲಂಕಾ ಬೌಂಡರಿಗಟ್ಟಿದರೆ ಕೊನೆಯ ಎಸೆತದಲ್ಲಿ 2 ರನ್ ಓಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಶ್ರೀಲಂಕಾ ಪರ ಮೆಂಡಿಸ್ 91 ರನ್(87 ಎಸೆತ, 8 ಬೌಂಡರಿ, 1 ಸಿಕ್ಸರ್), ಸಮರ ವಿಕ್ರಮ 48 ರನ್(51 ಎಸೆತ, 4 ಬೌಂಡರಿ) ಗಳಿಸಿ ಔಟಾದರೆ ಅಸಲಂಕ ಔಟಾಗದೇ 49 ರನ್ ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು.
Web Stories