ನವದೆಹಲಿ: ಬಹು ನಿರೀಕ್ಷಿತ ಏಷ್ಯಾ ಕಪ್ 2023 (Asia Cup 2023) ಬುಧವಾರದಿಂದ ಆರಂಭವಾಗಲಿದೆ. ಸಹ ಆತಿಥೇಯ ದೇಶವಾದ ಪಾಕಿಸ್ತಾನವು (Pakistan) ಮುಲ್ತಾನ್‍ನಲ್ಲಿ ನೇಪಾಳ ವಿರುದ್ಧ ಸೆಣಸಲಿದೆ. ಪಂದ್ಯದ ಮೊದಲು ಮುಲ್ತಾನ್‍ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಒಂದು ವರ್ಷದ ಹಿಂದೆ ಟಿ20 ಮಾದರಿಯಲ್ಲಿ ಶ್ರೀಲಂಕಾ ಗೆದ್ದಿತ್ತು. ಈ ವರ್ಷ ಏಷ್ಯಾಕಪ್ 50 ಓವರ್‌ಗಳಿಗೆ ನಿಗದಿಪಡಿಸಲಾಗಿದೆ. ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‍ಗೆ (World Cup) ಮೊದಲು ಏಷ್ಯಾದ ಕ್ರಿಕೆಟ್ ಆಟಗಾರರ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ. ಇದನ್ನೂ ಓದಿ: Asia Cup – ಉದ್ಘಾಟನಾ ಸಮಾರಂಭಕ್ಕೆ ಪಾಕ್‍ಗೆ ತೆರಳಲಿರುವ ಬಿಸಿಸಿಐ ಅಧ್ಯಕ್ಷ
ಏಷ್ಯಾ ಕಪ್ 2023 ರ ಉದ್ಘಾಟನಾ ಸಮಾರಂಭ ಆಗಸ್ಟ್ 30 ರಂದು ಮಧ್ಯಾಹ್ನ 3 ಗಂಟೆಗೆ ಪಾಕಿಸ್ತಾನದ ಮುಲ್ತಾನ್ ಸ್ಟೇಡಿಯಂ ನಡೆಯಲಿದೆ. ಇದರ ಉದ್ಘಾಟನಾ ಸಮಾರಂಭವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‍ವರ್ಕ್‍ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಅಲ್ಲದೇ ಏಷ್ಯಾ ಕಪ್ 2023ರ ಉದ್ಘಾಟನಾ ಸಮಾರಂಭ ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್‍ನಲ್ಲಿ ಲೈವ್ ಪ್ರಸಾರ ಮಾಡಲಾಗುತ್ತದೆ. ಇದನ್ನೂ ಓದಿ: AsiaCup 2023, ವಿಶ್ವಕಪ್ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್ ಲುಕ್‌ನಲ್ಲಿ ಪಾಕ್ ತಂಡ
Web Stories