– ಕೈ ಹಿಡಿಯುತ್ತಾರಾ ಗಿಲ್, ಕೊಹ್ಲಿ, ರೋಹಿತ್
ಕ್ಯಾಂಡಿ: ಏಕದಿನ ಏಷ್ಯಾಕಪ್ (AsiaCup 2023) ಟೂರ್ನಿ ಆರಂಭವಾಗಿದ್ದು, ಇಂದು ʻAʼ ಗುಂಪಿನಲ್ಲಿರುವ ಭಾರತ ಮತ್ತು ನೇಪಾಳ ನಡುವೆ ಪಂದ್ಯ ನಡೆಯಲಿದೆ. ಗೆದ್ದ ತಂಡ ಸೂಪರ್ ಫೋರ್ ಹಂತ ಪ್ರವೇಶಿಸಲಿದೆ.
ಸಹಜವಾಗಿಯೇ ಟೀಂ ಇಂಡಿಯಾ (Team India) ಗೆಲ್ಲುವ ಫೇವರಿಟ್ ಆಗಿದ್ದು, ದೈತ್ಯ ಭಾರತ ತಂಡಕ್ಕೆ ಪೈಪೋಟಿ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ರೋಹಿತ್ ಪೌದೆಲ್ (Rohit Paudel) ಸಾರಥ್ಯದ ನೇಪಾಳ ತಂಡ ಎದುರು ನೋಡುತ್ತಿದೆ. ಈ ನಡುವೆ ಶ್ರೀಲಂಕಾದ (SriLanka) ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡಿರುವ ನೇಪಾಳ ತಂಡ ಕ್ಯಾಪ್ಟನ್, ಟೀಂ ಇಂಡಿಯಾ ಬ್ಯಾಟರ್ ಹಾಗೂ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ನೇಪಾಳ ತಂಡದ ನಾಯಕ ರೋಹಿತ್ ಪೌದೆಲ್, ಟೀಂ ಇಂಡಿಯಾ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ (Virat Kohli), ಶುಭಮನ್ ಗಿಲ್ (Shubhman Gill), ರೋಹಿತ್ ಶರ್ಮಾ (Rohit Sharma) ಅವರನ್ನ ಔಟ್ ಮಾಡಲು ವಿಶೇಷ ರಣತಂತ್ರ ರಚಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: Asia Cup 2023: ಮಳೆಗೆ ಜಯ, ಭಾರತ-ಪಾಕ್ ಪಂದ್ಯ ರದ್ದು – ಸೂಪರ್-4ಗೆ ಹಾರಿದ ಪಾಕ್
Advertisement
Advertisement
ಟೀಂ ಇಂಡಿಯಾ ವಿರುದ್ಧ ಆಡಲು ಕಾತುರರಾಗಿದ್ದೇವೆ. ಭಾರತ ದೊಡ್ಡ ದೇಶ, ಭಾರತದ ಎದುರು ನೇಪಾಳವನ್ನ ಪ್ರತಿನಿಧಿಸುತ್ತಿರುವುದಕ್ಕೆ ಬಹಳ ಹೆಮ್ಮೆಯಿದೆ. ಕಳೆದ 10 ವರ್ಷಗಳಲ್ಲಿ ವಿರಾಟ್ ಮತ್ತು ರೋಹಿತ್ ಭಾರತ ತಂಡದ ಪರ ಬೃಹತ್ ತಾರೆಗಳಾಗಿದ್ದಾರೆ. ಆದರೆ ಅವರನ್ನ ಕಟ್ಟಿಹಾಕಲು ನಾವು ನಮ್ಮದೇ ವಿಶೇಷ ರಣತಂತ್ರ ರಚಿಸಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತರುತ್ತೇವೆ. ಈ ಪಂದ್ಯದಲ್ಲಿ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ ಹೇಳಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನೇಪಾಳ ತಂಡದ ಆಟಗಾರಿಗೆ ಸ್ಪೂರ್ತಿ ಎಂದು ಪೌದೆಲ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: AsiaCup 2023: ಬಾಬರ್, ಇಫ್ತಿಕಾರ್ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್ ಶುಭಾರಂಭ
ಕೈ ಹಿಡಿಯುತ್ತಾರಾ ಕಿಂಗ್ ಕೊಹ್ಲಿ, ಗಿಲ್:
ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಅಕ್ರಮಾಂಕದ ಬ್ಯಾಟರ್‌ಗಳಾದ ಗಿಲ್, ರೋಹಿತ್ ಹಾಗೂ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ರೋಹಿತ್ ಶರ್ಮಾ 22 ಎಸೆತಗಳಲ್ಲಿ 11 ರನ್‌ಗಳಿಸಿದ್ರೆ ಮಂದಗತಿಯ ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ 30 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಈ ಬೆನ್ನಲ್ಲೇ ಭರವಸೆ ಆಟಗಾರ ವಿರಾಟ್ ಕೊಹ್ಲಿ (Virat Kohli) ಸಹ 4 ರನ್ ಹಾಗೂ ಸ್ಫೋಟಕ ಆರಂಭ ನೀಡಿದ್ದ ಶ್ರೇಯಸ್ ಅಯ್ಯರ್ 14 ರನ್ ಗಳಿಗೆ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ಇದೀಗ ಯುವ ಆಟಗಾರರ ಬಲ ಹೊಂದಿರುವ ನೇಪಾಳ ತಂಡದ ವಿರುದ್ಧವಾದರೂ ಇವರು ಕೈಹಿಡಿಯುತ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.
Web Stories