ಲಾಹೋರ್: ಮೆಹ್ದಿ, ನಜ್ಮಲ್ ಶತಕದ ಆಟದಿಂದ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ (Asia Cup Cricket) ಅಫ್ಘಾನಿಸ್ತಾನದ (Afghanistan) ವಿರುದ್ಧ ಬಾಂಗ್ಲಾದೇಶ (Bangladesh) 89 ರನ್‌ಗಳ ಭರ್ಜರಿ ಜಯಗಳಿಸಿದೆ.
ಗೆಲ್ಲಲು 335 ರನ್‌ಗಳ ಕಠಿಣ ಗುರಿಯನ್ನು ಪಡೆದ ಅಫ್ಘಾನಿಸ್ತಾನ 44.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್ ಆಯ್ತು. ಇದನ್ನೂ ಓದಿ: Asia Cup ಭಾರತ Vs ನೇಪಾಳ ಪಂದ್ಯಕ್ಕೂ ಮಳೆ ಕಾಟ – ರದ್ದಾದ್ರೆ ಏನು?
Advertisement
ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ 75 ರನ್ (74 ಎಸೆತ, 10 ಬೌಂಡರಿ, 1 ಸಿಕ್ಸರ್), ಹಶ್ಮತುಲ್ಲಾ ಶಾಹಿದಿ 51 ರನ್ (60 ಎಸೆತ, 6 ಬೌಂಡರಿ), ರಹ್ಮತ್ ಶಾ 33 ರನ್ ( 51 ರನ್, 60 ಎಸೆತ, 6 ಬೌಂಡರಿ) ಕೊನೆಯಲ್ಲಿ ರಶೀದ್ ಖಾನ್ 24 ರನ್ (15 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು ಪ್ರತಿರೋಧ ತೋರಿದರು. ಬಾಂಗ್ಲಾ ಪರ ತಸ್ಕಿನ್ ಅಹ್ಮದ್ 4 ವಿಕೆಟ್, ಶರಿಫುಲ್ ಇಸ್ಲಾಂ 3 ವಿಕೆಟ್ ಕಿತ್ತರು.
Advertisement
Advertisement
ಮೆಹ್ದಿ, ನಜ್ಮಲ್ ಶತಕದ ಆಟ:
63 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಮೆಹ್ದಿ ಹಸನ್ (Mehidy Hasan Miraz ) ಮತ್ತು ನಜ್ಮಲ್ ಹಸನ್ (Najmul Hossain Shanto) ಮೂರನೇ ವಿಕೆಟಿಗೆ 190 ಎಸೆತಗಳಲ್ಲಿ 194 ರನ್ ಜೊತೆಯಾಟವಾಡಿದರು.
Advertisement
ಮೆಹ್ದಿ ಹಸನ್ 112 ರನ್(119 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ ನಜ್ಮಲ್ 104 ರನ್ (105 ಎಸೆತ, 9 ಬೌಂಡರಿ, 2 ಸಿಕ್ಸರ್) ಸಿಡಿಸಿ ರನೌಟ್ ಆದರು. ಇದನ್ನೂ ಓದಿ: ನೇಪಾಳ ಪಂದ್ಯಕ್ಕೆ ಗೈರು – ಭಾರತಕ್ಕೆ ಮರಳಿದ ಬುಮ್ರಾ
ಕೊನೆಯಲ್ಲಿ ಮುಶ್ಫಿಕರ್ ರಹೀಮ್ 25 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸರ್) , ನಾಯಕ ಶಕಿಬ್ ಉಲ್ ಹಸನ್ 32 ರನ್( 18 ಎಸೆತ, 4 ಬೌಂಡರಿ, 1 ಸಿಕ್ಸರ್) ಚಚ್ಚಿದ ಪರಿಣಾಮ ತಂಡದ ಮೊತ್ತ 330 ರನ್‌ಗಳ ಗಡಿದಾಟಿತು.
ಗುಂಪು ಬಿಯಲ್ಲಿ ಬಾಂಗ್ಲಾ ಎರಡು ಪಂದ್ಯವಾಡಿ ಲಂಕಾ ವಿರುದ್ಧ ಸೋತಿರುವ ಹಿನ್ನೆಲೆಯಲ್ಲಿ 2 ಅಂಕ ಗಳಿಸಿದೆ. ಶ್ರೀಲಂಕಾ ಬಾಂಗ್ಲಾವನ್ನು ಸೋಲಿಸಿದ ಪರಿಣಾಮ 2 ಅಂಕ ಪಡೆದುಕೊಂಡಿದೆ. ಅಫ್ಘಾನಿಸ್ತಾನದ ನೆಟ್ ರನ್ ರೇಟ್ -1.780 ಇದ್ದು ಲಂಕಾ ವಿರುದ್ಧ ಭಾರೀ ಅಂತರದಿಂದ ಜಯಗಳಿಸಿದರೆ ಮಾತ್ರ ಸೂಪರ್ 4 ಪ್ರವೇಶಿಸಬಹುದು.
Web Stories