ಇಸ್ಲಾಮಾಬಾದ್/ಕೊಲಂಬೊ: ಬಹುನಿರೀಕ್ಷಿತ ಏಕದಿನ ಏಷ್ಯಾಕಪ್ (AsiaCup 2023) ಟೂರ್ನಿ ಆರಂಭವಾಗಿದೆ. ರಣರೋಚಕ ಇಂಡೋ-ಪಾಕ್ ಕದನಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ನಂ.1 ಬ್ಯಾಟ್ಸ್‌ಮ್ಯಾನ್ ಆಗಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ (Babar Azam) ಶನಿವಾರ (ಸೆ.2) ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಹೊಸ ದಾಖಲೆ ಬರೆಯಲು ಎದುರು ನೋಡ್ತಿದ್ದಾರೆ.
Advertisement
877 ಶ್ರೇಯಾಂಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್ ಆಗಿರುವ ಬಾಬರ್ ಆಜಂ 6 ಸಾವಿರ ರನ್ ಪೂರೈಸುವ ಸನಿಹದಲ್ಲಿದ್ದಾರೆ. 121 ಪಂದ್ಯಗಳಿಂದ 49.30 ಸರಾಸರಿಯಲ್ಲಿ 5,916 ರನ್ ಗಳಿಸಿರುವ ಬಾಬರ್ ಇನ್ನು 84 ರನ್ ಗಳಿಸಿದ್ರೆ 6 ಸಾವಿರ ರನ್ ಪೂರೈಸಲಿದ್ದಾರೆ. ಈ ಮೂಲಕ ದಿಗ್ಗಜರ ದಾಖಲೆ ಪಟ್ಟಿ ಸೇರಲು ಬಾಬರ್ ಸಜ್ಜಾಗಿದ್ದಾರೆ.
Advertisement
121 ಪಂದ್ಯಗಳಿಂದ 49.30 ಸರಾಸರಿಯಲ್ಲಿ 5,916 ರನ್‌ಗಳಿಸಿರುವ ಬಾಬರ್ ಆಜಂ ಇದೀಗ ಟೀಂ ಇಂಡಿಯಾ ವಿರುದ್ಧ ಬೃಹತ್ ಮೊತ್ತ ದಾಖಲಿಸಲು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ಭಾರತೀಯರು ಎಲ್ಲಿ ಬೇಕಾದ್ರೂ ಜಯಿಸ್ತಾರೆ ಅನ್ನೋದಕ್ಕೆ ನೀವು ಮಾದರಿ – ಪ್ರಜ್ಞಾನಂದ ಕುಟುಂಬ ಭೇಟಿ ಮಾಡಿದ ಮೋದಿ
Advertisement
Advertisement
2023ರ ಏಷ್ಯಾಕಪ್ ಟೂರ್ನಿ ಉದ್ಘಾಟನಾ ಪಂದ್ಯದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಬಾಬರ್ ಆಜಂ ತಮ್ಮ ವೃತ್ತಿ ಜೀವನದ 19ನೇ ಏಕದಿನ ಶತಕ ಪೂರ್ಣಗೊಳಿಸಿದರು. ಈ ಮೂಲಕ ಪಾಕಿಸ್ತಾನ ಪರ ಅತಿ ಹೆಚ್ಚು ಏಕದಿನ ಶತಕ ಸಿಡಿಸಿರುವ 2ನೇ ಆಟಗಾರ ಸಹ ಎನಿಸಿಕೊಂಡಿದ್ದಾರೆ. 20 ಶತಕಗಳನ್ನು ಸಿಡಿಸಿದ್ದ ಸಯಿದ್ ಅನ್ವರ್ ಮೊದಲ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: AsiaCup 2023: ಬಾಬರ್, ಇಫ್ತಿಕಾರ್ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್ ಶುಭಾರಂಭ
ಅಲ್ಲದೇ ಬಾಬರ್ ಏಷ್ಯಾ ಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ 3ನೇ ಬ್ಯಾಟ್ಸ್‌ಮ್ಯಾನ್ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಬಾಬರ್ 1 ಶತಕ ಸಿಡಿಸಿದ್ರೆ, ಶಾಹಿದ್ ಅಫ್ರಿದಿ 2 ಶತಕಗಳು ಹಾಗೂ ಶೋಯೆಬ್ ಮಲಿಕ್ 1 ಶತಕ ಸಿಡಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲು ಇದೀಗ ಸಮರಾಭ್ಯಾಸ ನಡೆಸುತ್ತಿದ್ದಾರೆ.
Web Stories