ಕ್ಯಾಂಡಿ: ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಏಷ್ಯಾಕಪ್ (Asia Cup 2023) ಟೂರ್ನಿಯ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಪಂದ್ಯ ಭಾರೀ ಮಳೆಯಿಂದಾಗಿ ಫಲಿತಾಂಶವಿಲ್ಲದೇ ರದ್ದಾಯಿತು. ಆದ್ರೆ 267 ರನ್‌ಗಳ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡದಿದ್ದರೂ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ.
Advertisement
ಶನಿವಾರ ಟೀಂ ಇಂಡಿಯಾ (Team India) ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್ ತಂಡದ ವೇಗಿಗಳಾದ ಶಾಹೀನ್ ಶಾ ಅಫ್ರಿದಿ (Shaheen Shah Afridi), ನಸೀಮ್ ಶಾ (Naseem Shah) ಹಾಗೂ ಹ್ಯಾರಿಸ್ ರೌಫ್ ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಉರುಳಿಸಿ 266 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ವಿರುದ್ಧ ವೇಗಿಗಳೇ 10 ವಿಕೆಟ್ ಪಡೆದ ಸಾಧನೆ ಮಾಡಿದರು.
Advertisement
ಶಾಹೀನ್ ಶಾ ಅಫ್ರಿದಿ 10 ಓವರ್‌ಗಳಲ್ಲಿ 35 ರನ್ ಬಿಟ್ಟುಕೊಟ್ಟು 4 ವಿಕೆಟ್, ನಸೀಮ್ ಶಾ 8.5 ಓವರ್‌ಗಳಲ್ಲಿ 36 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ 9 ಓವರ್‌ಗಳಲ್ಲಿ 58 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು. ಇದನ್ನೂ ಓದಿ: Asia Cup 2023: ಮಳೆಗೆ ಜಯ, ಭಾರತ-ಪಾಕ್ ಪಂದ್ಯ ರದ್ದು – ಸೂಪರ್-4ಗೆ ಹಾರಿದ ಪಾಕ್
Advertisement
Advertisement
ಪಾಕ್ ಸೂಪರ್-4 ತಲುಪಿದ್ದೇಗೆ?
ಮೊದಲ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧ 238 ರನ್‌ಗಳ ಸುಲಭ ಜಯ ಸಾಧಿಸಿದ್ದ ಪಾಕಿಸ್ತಾನ ಟೀಂ ಇಂಡಿಯಾ ವಿರುದ್ಧವೂ ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿತ್ತು. ಆದ್ರೆ ಟೀಂ ಇಂಡಿಯಾ ಬ್ಯಾಟಿಂಗ್ ಬಳಿಕ ಎಡಬಿಡದೇ ಮಳೆ ಸುರಿಯತೊಡಗಿತು. ರಾತ್ರಿ 10 ಗಂಟೆಯೊಳಗೆ ಮಳೆ ನಿಂತರೇ ಡಕ್ವರ್ತ್ ಲೂಯಿಸ್ ನಿಯಮದಂತೆ ಓವರ್ ಕಡಿತಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೆ ಮಳೆಯ ಆರ್ಭಟ ಮುಂದುವರಿದಿದ್ದರಿಂದ ಪಂದ್ಯವನ್ನ ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು. ಪಾಕಿಸ್ತಾನ ಹಾಗೂ ಭಾರತ ತಲಾ ಒಂದೊಂದು ಅಂಕ ಪಡೆದುಕೊಂಡಿತು. ಮೊದಲ ಪಂದ್ಯದ ಜಯದ ಬಳಿಕ 2 ಅಂಕ ಪಡೆದಿದ್ದ ಪಾಕಿಸ್ತಾನ, ಟೀಂ ಇಂಡಿಯಾ ವಿರುದ್ಧದ ಪಂದ್ಯ ರದ್ದಾದ ಬಳಿಕ 1 ಅಂಕ ಪಡೆದು ಮೂರು ಅಂಕಗಳೊಂದಿಗೆ ಸೂಪರ್ ಫೋರ್‌ಗೆ ತಲುಪಿತು. ಇದನ್ನೂ ಓದಿ: Asia Cup 2023: ಕೈಕೊಟ್ಟ ಕೊಹ್ಲಿ, ರೋಹಿತ್, ಗಿಲ್ – ಪಾಕಿಸ್ತಾನಕ್ಕೆ 267 ರನ್ ಗುರಿ ನೀಡಿದ ಭಾರತ
ನಾಳೆ ಭಾರತ, ನೇಪಾಳ ವಿರುದ್ಧ ಕಣಕ್ಕಿಳಿಯಲಿದ್ದು, ಸೂಪರ್ ಫೋರ್ ಹಂತ ತಲುಪಲು ಎದುರಾಳಿ ತಂಡವನ್ನು ಸೋಲಿಸಲೇಬೇಕಿದೆ.
Web Stories