ದುಬೈ: ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್ ಹಂತದ ಪಾಕಿಸ್ತಾನ (Pakistan) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮ್ಯಾನ್ ಆಸಿಫ್ ಅಲಿ (Asif Ali) ಮತ್ತು ಅಫ್ಘಾನಿಸ್ತಾನ ಬೌಲರ್ ಅಹ್ಮದ್ ಮಲಿಕ್ (Ahmad Malik) ನಡುವಿನ ಗುದ್ದಾಟ ಇದೀಗ ಬಾರಿ ಚರ್ಚೆ ಆಗುತ್ತಿದೆ.
Advertisement
ತೀವ್ರ ರೋಚಕ ಪಂದ್ಯದಲ್ಲಿ ಅಹ್ಮದ್ ಮಲಿಕ್ ಪಾಕಿಸ್ತಾನದ ಫಿನಿಶರ್ ಆಸಿಫ್ ಅಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ಅಹ್ಮದ್ ಮಲಿಕ್ ವಿಕೆಟ್ ಪಡೆದ ಸಂಭ್ರಮಾಚರಣೆಯನ್ನು ಆಸಿಫ್ ಅಲಿ ಮುಂದೆ ತೋರ್ಪಡಿಸಿದರು. ಇದರಿಂದ ರೊಚ್ಚಿಗೆದ್ದ ಆಸಿಫ್ ಅಲಿ ಕೈಯಲ್ಲಿದ್ದ ಬ್ಯಾಟ್ ಮೇಲೆತ್ತಿ ಹೊಡೆಯಲು ಮುಂದಾದರು. ಬಳಿಕ ಇತರ ಆಟಗಾರರ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಗೊಂಡಿತು. ಇದನ್ನೂ ಓದಿ: ಸೋತಿದ್ದಕ್ಕೆ ಕ್ರೀಡಾಂಗಣದಲ್ಲಿ ಅಫ್ಘಾನ್ ಅಭಿಮಾನಿಗಳ ಹುಚ್ಚಾಟ – ಚಯರ್‌ನಲ್ಲೇ ಪಾಕಿಗಳ ಮೇಲೆ ಹಲ್ಲೆ
Advertisement
Advertisement
ಇದೀಗ ಇವರಿಬ್ಬರ ಮುಸುಕಿನ ಗುದ್ದಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಸಿಫ್ ಅಲಿಯನ್ನು ಟೂರ್ನಿಯ ಮುಂದಿನ ಪಂದ್ಯಗಳಿಂದ ಬ್ಯಾನ್ ಮಾಡುವಂತೆ ಅಭಿಮಾನಿಗಳ ಕೂಗು ಜೋರಾಗುತ್ತಿದೆ. ಇದನ್ನೂ ಓದಿ: ಏಷ್ಯಾಕಪ್ ಸೋಲು, ರೊಚ್ಚಿಗೆದ್ದ ಅಭಿಮಾನಿಗಳು – #BoycottIPL ಟ್ರೆಂಡ್
Advertisement
https://twitter.com/thakurabhi112/status/1567568114514280450
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತು. ಪಾಕಿಸ್ತಾನ 19.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ರೋಚಕ ಜಯಗಳಿಸಿತು. ಈ ಮೂಲಕ ಭಾನುವಾರ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಫೈನಲ್ ಪಂದ್ಯವಾಡಲಿದೆ.