ಗೋಕಾಕ್‌ ಗ್ರಾಮದೇವಿ ಜಾತ್ರೆ ಕರ್ತವ್ಯದಲ್ಲಿದ್ದ ಎಎಸ್ಐ ಹೃದಯಾಘಾತದಿಂದ ಸಾವು

Public TV
1 Min Read
asi on duty at gokak gramdevi fair dies of heart attack

ಬೆಳಗಾವಿ: ಗೋಕಾಕ್ (Gokak) ಗ್ರಾಮದೇವಿ ಜಾತ್ರೆಗೆ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಎಎಸ್ಐ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ.‌

ಮೃತರನ್ನು ಮೀರಾ ನಾಯಕ್ (55) ಎಂದು ಗುರುತಿಸಲಾಗಿದೆ. ಅವರು ಹುಬ್ಬಳ್ಳಿ (Hubballi) ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಗೋಕಾಕ್‌ನ ಗ್ರಾಮದೇವಿ ಜಾತ್ರೆಗೆ ಅವರನ್ನು ಕರ್ತವ್ಯಕ್ಕೆಂದು ನಿಯೋಜನೆ ಮಾಡಲಾಗಿತ್ತು. ಪಟ್ಟಣದ ಎಸ್‌ಸಿ,‌ ಎಸ್‌ಟಿ ಬಾಲಕರ ಹಾಸ್ಟೇಲ್‌ನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಇಂದು ಮುಂಜಾನೆ ಅವರಿಗೆ ಹೃದಯಾಘಾತವಾಗಿದೆ. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಕೇಸ್ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

ತಕ್ಷಣವೇ ಜೊತೆಗಿದ್ದವರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ ಸಹ ಫಲಕಾರಿಯಾಗಿಲ್ಲ. ಅವರ ಮೃತದೇಹವನ್ನು ಗೋಕಾಕ್ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದು ಕುಟುಂಬಸ್ಥರು ಆಗಮಿಸಿದ ನಂತರ ಅವರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೊಸೆಯನ್ನು ಮನೆಯಿಂದ ಹೊರಹಾಕಿದ ಅತ್ತೆ, ಮಾವ – 20 ದಿನದಿಂದ ಮನೆಯ ಹೊರಗೆ ಮಹಿಳೆಯ ವಾಸ

Share This Article