– ಮಾಜಿ ಸೈನಿಕನ ವಿರುದ್ಧವೂ ಎಫ್‌ಐಆರ್
ಧಾರವಾಡ: ಮಾಜಿ ಸೈನಿಕನ (Former Soldier) ಮೇಲೆ ಹಲ್ಲೆ ಪ್ರಕರಣಕ್ಕೆ ಎಎಸ್‌ಐ ಮತ್ತು ಓರ್ವ ಪೊಲೀಸ್ ಕಾನ್ಸ್ಟೇಬಲ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ ಇದೀಗ ಮಾಜಿ ಸೈನಿಕನ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
ಅಮಾನತು ಮಾಡಿ ಆದೇಶ ಮಾಡಲಾಗಿದೆ. ಅಲ್ಲದೇ ಎಎಸ್‌ಐ ಮತ್ತು ಕಾನ್ಸ್ಟೇಬಲ್‌ಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಈ ಇಬ್ಬರನ್ನೂ ಕರ್ತವ್ಯದಿಂದ ವಜಾ ಮಾಡಬೇಕು ಎಂದು ಒತ್ತಾಯ ಮಾಡಲಾಗಿದೆ. ಇದನ್ನೂ ಓದಿ: ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ, ಬೆಂಬಲಿಗರಿಗೆ ಏನು ಮಾಡ್ಬೇಡಿ: ಸ್ಟಾಲಿನ್ ವಿರುದ್ಧ ವಿಜಯ್ ಕಿಡಿ
ಧಾರವಾಡ (Dharwad) ಸಪ್ತಾಪುರದಲ್ಲಿರುವ ಸೈನಿಕ ಮೆಸ್ ಮಾಲೀಕ ರಾಮಪ್ಪ ನಿಪ್ಪಾಣಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಎಸ್‌ಐ ವಿದ್ಯಾನಂದ ಸುಬೇದಾರ ಹಾಗೂ ಪೊಲೀಸ್ ಕಾನ್ಸ್ಟೇಬಲ್ ರಾಚಪ್ಪ ಕಣಬೂರರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಜೊತೆಗೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು
ಪೊಲೀಸರು ಕೂಡ ಆ ಮಾಜಿ ಸೈನಿಕ ನಿಪ್ಪಾಣಿ ಮೇಲೆ ದೂರು ದಾಖಲಿಸಿದ್ದಾರೆ. ಕರ್ತವ್ಯದ ಮೇಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಆತ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆ ರೀತಿ ಹಲ್ಲೆ ನಡೆಸಿದ್ದರೆ ಆ ಮಾಜಿ ಸೈನಿಕನ ಮೇಲೂ ಕ್ರಮ ಆಗಲಿದೆ. ಸದ್ಯ ಸಿಸಿಟಿವಿ ಡಿವಿಆರ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?
ಭಾನುವಾರ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯಾವಳಿ ನಡೆದಿತ್ತು. ಈ ವೇಳೆ ಯಾವುದೇ ಗಲಾಟೆಗಳು ಆಗದಂತೆ ಪೊಲೀಸರು ಗಸ್ತು ತಿರುಗುತ್ತಿದ್ದರು. ರಾತ್ರಿ 12 ಗಂಟೆಯಾದರೂ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ತಮ್ಮ ಮೆಸ್ ತೆಗೆದು ಊಟ ಕೊಡುತ್ತಿದ್ದರು. ಈ ವೇಳೆ ಮೆಸ್ ಬಂದ್ ಮಾಡುವಂತೆ ಹೇಳಲು ಹೋದ ಪೊಲೀಸರ ಮೇಲೆ ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದರು ಆರೋಪಿಲಾಗಿದೆ. ಇದನ್ನೂ ಓದಿ: ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕದಲ್ಲಿ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ
ಪೊಲೀಸರು ಮೆಸ್ ಬಂದ್ ಮಾಡುವಂತೆ ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸೈನಿಕ ಆರೋಪಿಸಿದ್ದಾರೆ. ಇದೀಗ ಪೊಲೀಸರು ನೀಡಿದ ದೂರಿನಾಧಾರ ಮಾಜಿ ಸೈನಿಕ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

