ವಿಷ ಸೇವಿಸಿ ಎಎಸ್ಐ ಆತ್ಮಹತ್ಯೆ

Public TV
1 Min Read
ASI Suicide

ಹುಬ್ಬಳ್ಳಿ: ವಿಷ ಸೇವಿಸಿ ಎಎಸ್‌ಐ (ASI) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ (Dharawada) ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುಡಿಗೇರಿಯಲ್ಲಿ ಘಟನೆ ನಡೆದಿದೆ.

ಗುಡಿಗೇರಿ ಪೊಲೀಸ್ ಠಾಣೆಯ ಎಎಸ್‌ಐ ಬಸವರಾಜ ಶಾಂತವೀರಪ್ಪ ಪಾಯಣ್ಣವರ (54) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಪಾಳಿ ಕೆಲಸ ಮುಗಿಸಿ ವಸತಿ ಗೃಹಕ್ಕೆ ಹೋಗಿದ್ದರು. ವಸತಿ ಗೃಹದ ಆವರಣದಲ್ಲಿ ದೇಗುಲದ ಬಳಿ ಮಲಗಿದ್ದರು. ಇದನ್ನೂ ಓದಿ: ವಿವಾಹಿತೆಯಿಂದ ಹನಿಟ್ರ್ಯಾಪ್ – ಡೆತ್‍ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ

ಕುಟುಂಬಸ್ಥರು ಊಟಕ್ಕೆ ಎಬ್ಬಿಸಲು ಹೋದಾಗ ಎದ್ದೇಳಲಿಲ್ಲ. ಆಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಮೃತ ಎಎಸ್‌ಐ ಕೆಲವು ದಿನಗಳಿಂದ ಕಾಲುನೋವಿನಿಂದ ಬಳಲುತ್ತಿದ್ದರು. ಅದೇ ಆತ್ಮಹತ್ಯೆಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ. ಮೃತ ಬಸವರಾಜ ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಢ ಸಮೀಪದ ಶಾಂತಗಿರಿ ಗ್ರಾಮದವರು. ಇದನ್ನೂ ಓದಿ: ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ತಗ್ಲಾಕ್ಕೊಂಡ ಪ್ರಯಾಣಿಕ

ಬಸವರಾಜ ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದರು. ಗುಡುಗೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article