ಬೆಂಗಳೂರು: ಯಶವಂತಪುರ-ಹುಬ್ಬಳ್ಳಿ ಜೋಡಿ ರೈಲು ಮಾರ್ಗ ಯೋಜನೆಯನ್ನು ಹಂತ-ಹಂತವಾಗಿ ಕಾರ್ಯಗತಗೊಳಿಸಲಾಗುತ್ತದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Advertisement
ರಾಜ್ಯಸಭಾ ಸದಸ್ಯರಾದ ಕೆ. ನಾರಾಯಣ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಯಶವಂತಪುರ-ಹುಬ್ಬಳ್ಳಿ ನಡುವಿನ ಜೋಡಿ ಮಾರ್ಗ ಯೋಜನೆಯ ಪೈಕಿ ಚಿಕ್ಕಜಾಜೂರು-ಅರಸೀಕೆರೆ, ತುಮಕೂರು-ಯಶವಂತರಪುರ ನಡುವೆ ಜೋಡಿ ಮಾರ್ಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ
Advertisement
Advertisement
ಕರ್ನಾಟಕದ ವಿವಿಧ ರೈಲು ಮಾರ್ಗಗಳ ಕಾಮಗಾರಿ ಪ್ರಗತಿಯ ಕುರಿತು ಸಚಿವರು ರಾಜ್ಯಸಭೆಗೆ ಮಾಹಿತಿಯನ್ನು ನೀಡಿದ್ದು, ಯಶವಂತಪುರ-ಚಿಕ್ಕಬಾಣಾವರ-ತುಮಕೂರು ನಡುವಿನ ಮಾರ್ಗದ ವಿದ್ಯುದೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಮೆಮು ರೈಲು ಪ್ರಸ್ತಾವನೆ ಇಲ್ಲ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನ ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಓಡಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್
ಬೆಂಗಳೂರು ಮತ್ತು ತುಮಕೂರು ನಡುವೆ ಪ್ರತಿನಿತ್ಯ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಉಭಯ ನಗರಗಳ ನಡುವೆ ಮೆಮು ರೈಲು ಓಡಿಸಿದರೆ ಸಹಾಯಕವಾಗಲಿದೆ ಎಂಬ ಪ್ರಸ್ತಾವನೆ ಇತ್ತು. ತುಮಕೂರು ರೈಲು ಪ್ರಯಾಣಿಕರ ವೇದಿಕೆ ಸಹ ಮೆಮು ರೈಲು ಓಡಿಸುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಟಾಲಿವುಡ್ ನಟಿ – ಕಾಜಲ್ ಫೋಟೋ ಹೇಳ್ತೀರೋದೇನು?
ಭಾರತೀಯ ರೈಲ್ವೆ ಚಿಕ್ಕಬಣಾವರ-ಹುಬ್ಬಳ್ಳಿ ನಡುವಿನ ಮಾರ್ಗದ ವಿದ್ಯುದೀಕರಣ ಕಾಮಗಾರಿ ಭಾಗವಾಗಿ ಬೆಂಗಳೂರು-ತುಮಕೂರು ನಡುವಿನ 69.47 ಕಿ. ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಿದೆ. ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡು, ಸಿಆರ್‍ಎಸ್ ಪರಿಶೀಲನೆ ಮುಗಿದ ಬಳಿಕ ಯಶವಂತಪುರ-ತುಮಕೂರು ನಡುವೆ ಮೆಮು ರೈಲು ಓಡಿಸುವ ಪ್ರಸ್ತಾವನೆ ಇದೆ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಸಚಿವರು ಮೆಮು ರೈಲು ಓಡಿಸುವ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.