ನವದೆಹಲಿ: 2009 ರಿಂದ 2014ರ ವರೆಗೂ ಯುಪಿಎ ಸರ್ಕಾರ (UPA Government) ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಪ್ರತಿವರ್ಷ ಸರಾಸರಿ 835 ಕೋಟಿ ಬಿಡುಗಡೆ ಮಾಡಿದೆ. ಆದ್ರೆ ಎನ್‌ಡಿಎ ಸರ್ಕಾರ (NDA Government) 2025-26ರ ಅವಧಿಗೆ 7,564 ಕೋಟಿ ರೂ. ಬಿಡುಗಡೆ ಮಾಡಿದ್ದು ಇದು ಯುಪಿಎ ಸರ್ಕಾರಕ್ಕೆ ಹೋಲಿಸಿದ್ರೆ, 9 ಪಟ್ಟು ಅಧಿಕ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2009 ರಿಂದ 2014ರ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 113 ಹೊಸ ಟ್ರ‍್ಯಾಕ್ ನೀಡಲಾಗಿದೆ. 2014 ರಿಂದ 2025 ರಲ್ಲಿ ಪ್ರತಿವರ್ಷ ಸರಾಸರಿ 150 ಹೊಸ ಅಧಿಕ ಟ್ರ‍್ಯಾಕ್‌ಗೆ (Railway Track) ಅನುಮತಿ ನೀಡಿದೆ. ಯುಪಿಎ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 18 ಕಿಮೀ ವಿದ್ಯುದೀಕರಣ ಆಗಿದೆ. 2014 ರಿಂದ 2025ರ ಅವಧಿಯಲ್ಲಿ ಪ್ರತಿ ವರ್ಷ 294 ಕಿಮೀ ವಿದ್ಯುಧೀಕರಣವಾಗಿದೆ. ರಾಜ್ಯದಲ್ಲಿ 96.5% ವಿದ್ಯುಧಿಕರಣ ಕೆಲಸ ಮುಗಿಸಿದೆ ಎಂದು ವಿವರಿಸಿದ್ದಾರೆ.
ಕರ್ನಾಟಕದಲ್ಲಿ 2014 ರಿಂದ 1,652 ಕಿಲೋ ಮೀಟರ್ ಹೊಸ ಟ್ರ‍್ಯಾಕ್ ಹಾಕಿದೆ. ಇದು ಶ್ರೀಲಂಕಾದ ಇಡೀ ರೈಲ್ವೆ ಟ್ರ‍್ಯಾಕ್ ಗಿಂತಲೂ ಅಧಿಕವಾಗಿದೆ. 2014 ರಿಂದ ಈವರೆಗೂ 3,233 ಕಿಲೋ ಮೀಟರ್ ವಿದ್ಯುಧೀಕರಣ ಆಗಿದೆ. ಪ್ರಸುತ್ತ 31 ಯೋಜನೆಗಳ ಅಡಿಯಲ್ಲಿ 3,840 ಕಿಮೀ ಕಾಮಗಾರಿ ನಡೆಯುತ್ತಿದೆ. 47,016 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
1,681 ಕೋಟಿ ವೆಚ್ಚದಲ್ಲಿ 61 ಅಮೃತ್ ಸ್ಟೇಷನ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಆಲಮಟ್ಟಿ, ಅಳ್ನಾವರ, ಅರಸೀಕೆರೆ ಜಂಕ್ಷನ್, ಬಾದಾಮಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಕ್ಯಾಂಟ್, ಬಂಗಾರಪೇಟೆ, ಬಂಟವಾಳ, ಬೆಳಗಾವಿ, ಬೀದರ್, ಬಿಜಾಪುರ, ಚಾಮರಾಜ ನಗರ, ಚನ್ನಪಟ್ಟಣ, ಚನ್ನಸಂದ್ರ, ಚಿಕ್ಕಮಗಳೂರು, ಚಿಕ್ಕೋಡಿ ರಸ್ತೆ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಗಂಗಾಪುರ ರಸ್ತೆ, ಗಂಗಾವತಿ, ಘಟಪ್ರಭಾ, ಗೋಕಾಕ್ ರಸ್ತೆ, ಗುಬ್ಬಿ, ಹರಿಹರ, ಹಾಸನ ಹೊಸಪೇಟೆ, ಕಲಬುರಗಿ (ಗುಲ್ಬರ್ಗ), ಕೆಂಗೇರಿ, ಕೊಪ್ಪಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ಠಾಣೆ), ಕೃಷ್ಣರಾಜಪುರಂ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಮುನಿರಾಬಾದ್, ಮೈಸೂರು ಜಂಕ್ಷನ್ (ಮೈಸೂರು), ರಾಯಬಾಗ, ರಾಯಚೂರು ಜಂಕ್ಷನ್, ರಾಮನಗರ, ರಾಣಿಬೆನ್ನೂರು, ಸಾಗರ್ ಜಂಬಗಾರು, ಸಕಲೇಶಪುರ, ಶಹಾಬಾದ್, ಶಿವಮೊಗ್ಗ ಪಟ್ಟಣ, ಶ್ರವಣಬೆಳಗೊಳ, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜೂ. ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ, ತಿಪಟೂರು, ತುಮಕೂರು, ಉಡುಪಿ, ವಾಡಿ, ವೈಟ್‌ಫೀಲ್ಡ್, ಯಾದಗಿರಿ, ಯಶವಂತಪುರ ರೈಲ್ವೆ ನಿಲ್ದಾಣ ಅಭಿವೃದ್ದಿಯಾಗಿದೆ ಎಂದು ಇಂಚಿಂಚೂ ಮಾಹಿತಿಯನ್ನು ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರ 2014 ರಿಂದ 644 ರೈಲ್ವೆ ಸೇತುವೆಗಳನ್ನ ನಿರ್ಮಾಣ ಮಾಡಿದೆ. 10 ವಂದೇ ಭಾರತ್ ರೈಲು 12 ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ ಒಂದು ಅಮೃತ್ ಭಾರತ್ ಸಂಚಾರ ಮಾಡುತ್ತಿದೆ ಎಂದು ತಿಳಿಸಿದರು.