ಪ್ರಪಂಚದಲ್ಲಿ ಎಲ್ಲಾ ಪ್ರೀತಿಗಿಂತ ಹೆತ್ತವರ ಪ್ರೀತಿ ದೊಡ್ಡದು. ಆ ಪ್ರೀತಿಯ ಬಗ್ಗೆ ಎಷ್ಡ ಹೇಳಿದರೂ ಕಡಿಮೆ. ಅದರಲ್ಲೂ ತಾಯಿಗೆ ಮಗನ ಮೇಲೆ, ತಂದೆಗೆ ಮಗಳ ಮೇಲೆ ಮಮತೆ ಹೆಚ್ಚು ಎನ್ನುವುದು ವಾಡಿಕೆ. ವಿಭಿನ್ನ ಕಥಾಹಂದರ ಹೊಂದಿರುವ ‘ಜ್ಯೂಲಿಯೆಟ್ 2’ ಚಿತ್ರಕ್ಕಾಗಿ ಸುಕೀರ್ತ್ ಶೆಟ್ಟಿ ತಂದೆ – ಮಗಳ ಬಾಂಧವ್ಯ ಸಾರುವ ‘ಕರುಳ ಬಳ್ಳಿಯ ನೋವಿನಲಿ ತಾಯಿಯ ಮಮತೆ ಲಾಲಿ ಹಾಡುತ್ತೆ. ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ’ ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಕೋಟಿಜನರು ಈ ಹಾಡನ್ನು ವೀಕ್ಷಿಸಿದ್ದಾರೆ.
Advertisement
ಸಂದೀಪ್ ಆರ್ ಬಲ್ಲಾಳ್ ಸಂಗೀತ ನೀಡಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಮಲ್ಲಿಕಾ ಮಟ್ಟಿ ಈ ಹಾಡನ್ನು ಇಂಪಾಗಿ ಹಾಡಿದ್ದಾರೆ. ಮಗಳ ಪಾತ್ರದಲ್ಲಿ ರಕ್ಷಿತಾ ಬೋಳಾರ್ ಹಾಗೂ ತಂದೆಯ ಪಾತ್ರದಲ್ಲಿ ಲಕ್ಷ್ಮೀಶ್ ಭಟ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ಟೀಸರ್ ಎಲ್ಲರ ಮನ ಗೆದ್ದಿದೆ. ಫೆಬ್ರವರಿ 14 ರಂದು ಟ್ರೇಲರ್ ಬಿಡುಗಡೆಯಾಗಲಿದೆ.
Advertisement
Advertisement
Pl production & Virat motion picture ಲಾಂಛನದಲ್ಲಿ ಲಿಖಿತ್ ಆರ್ ಕೋಟ್ಯಾನ್ ನಿರ್ಮಾಣ ಮಾಡಿರುವ “ಜ್ಯೂಲಿಯೆಟ್ 2” ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. “ಪ್ರೇಮಂ ಪೂಜ್ಯಂ” ಖ್ಯಾತಿಯ ಬೃಂದಾ ಆಚಾರ್ಯ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್, ರಕ್ಷಿತಾ ಬೋಳಾರ್, ಲಕ್ಷ್ಮೀಶ್ ಭಟ್, ಮುಂತಾದವರಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ
Advertisement
ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ರಿಲಯನ್ಸ್ ಎಂಟರ್ಟೈನ್ಮೆಂಟ್ ಮೂಲಕ ಬಿಡುಗಡೆಯಾಗಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k