ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ (Harshika Poonacha) ಕಾಲನಾಗಿಣಿಯಾಗಿ (Kaalanaagini) ಮಿಂಚಲು ರೆಡಿಯಾಗಿದ್ದಾರೆ. ಇದೀಗ ಹರ್ಷಿಕಾ ಪಾತ್ರದ ಪೋಸ್ಟರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸೆಟ್ಟೇರಿತು ಶಿವಣ್ಣನ ‘A for ಆನಂದ್’ ಸಿನಿಮಾ
View this post on Instagram
ಮೇ 1ರಂದು ಹರ್ಷಿಕಾ ಪೂಣಚ್ಚ ಹುಟ್ಟುಹಬ್ಬದ ಹಿನ್ನೆಲೆ ‘ಕಾಲನಾಗಿಣಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ರಿಲೀಸ್ ಮಾಡಿ ಚಿತ್ರತಂಡಕ್ಕೆ ಬೆಂಬಲಿಸಿದ್ದಾರೆ. ಇದನ್ನೂ ಓದಿ:ಕನ್ನಡ.. ಕನ್ನಡ ಇದಕ್ಕೇನೇ ಭಯೋತ್ಪಾದಕ ದಾಳಿ ನಡೆದಿದ್ದು – ವಿವಾದ ಮೈಮೇಲೆಳೆದುಕೊಂಡ ಸೋನು ನಿಗಮ್
‘ಕಾಲನಾಗಿಣಿ’ ಸಿನಿಮಾದಲ್ಲಿ ನಾಗಿಣಿ ಮತ್ತು ರಾಣಿ ಎರಡು ರೀತಿಯ ಶೇಡ್‌ನಲ್ಲಿ ಹರ್ಷಿಕಾ ನಟಿಸಲಿದ್ದಾರೆ. ಈ ಸಿನಿಮಾಗೆ ವಿಶ್ರುತ್ ನಾಯಕ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಮಧುರಾ ಮೂವೀಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣ ಆಗ್ತಿದೆ.
ಹರ್ಷಿಕಾ ಜೊತೆ ಅರ್ಜುನ್ ವೇದಾಂತ್, ಅವಿನಾಶ್, ಶರತ್ ಲೋಹಿತಾಶ್ವ, ಉಗ್ರಂ ಮಂಜು, ವಿಜಯ್ ಚೆಂಡೂರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.