ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ `ಗಂಧದಗುಡಿ’ (Gandadagudi) ಸಾಕ್ಷ್ಯ ಚಿತ್ರ ತೆರೆಗೆ ಬರಲು ಕೌಂಟ್ ಡೌನ್ ಶುರುವಾಗಿದೆ. ಈ ಚಿತ್ರದ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಈ ಅಂಗವಾಗಿ `ಪುನೀತ ಪರ್ವ’ (Puneeth Parva) ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಅವರಿಗೆ ಡಾ.ರಾಜ್ ಕುಟುಂಬ ಆಹ್ವಾನ ನೀಡಿದ್ದಾರೆ.
Advertisement
ಅಪ್ಪು ಅವರ ಕನಸಿನ ಪ್ರಾಜೆಕ್ಟ್ `ಗಂಧದ ಗುಡಿ'(Gandadagudi) ಹಾಗಾಗಿ ರಾಜ್ ಕುಟುಂಬದವರು ತುಂಬಾ ಕಾಳಜಿ ವಹಿಸಿ ಇದನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾದ ರೀತಿ ಚಿತ್ರಮಂದಿರದಲ್ಲೇ ಇದು ಬಿಡುಗಡೆ ಆಗಲಿದೆ. `ಗಂಧದಗುಡಿ’ ಟ್ರೈಲರ್ ಬಿಡುಗಡೆ ಆದ ಬಳಿಕ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕನ್ನಡದ ಸ್ಟಾರ್ಸ್ ಜೊತೆ ದಕ್ಷಿಣದ ಸ್ಟಾರ್ಸ್ ಹಲವರು ಈ ಬಗ್ಗೆ ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅ.21ರಂದು ನಡೆಯಲಿರುವ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini PuneethRajkumar) ಅವರು ವಿನಂತಿಸಿಕೊಂಡಿದ್ದಾರೆ. ಇನ್ನೂ ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಮತ್ತು ಯುವ ರಾಜ್‌ಕುಮಾರ್ (Yuva Rajkumar) ಕೂಡ ಸಾಥ್ ನೀಡಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು `ಪುನೀತ ಪರ್ವ’ ಎಂದು ಕರೆಯಲಾಗುತ್ತಿದೆ. ಅದಕ್ಕೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಹಲವರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಕರುನಾಡಿನ ಅರಣ್ಯ ಸಂಪತ್ತು, ವನ್ಯಜೀವಿಗಳ ಜಗತ್ತು, ಕಾಡಿನ ಜನರ ಬದುಕು ಸೇರಿದಂತೆ ಅನೇಕ ವಿಚಾರಗಳ ಮೇಲೆ ʻಗಂಧದ ಗುಡಿʼ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿರೋದು ವಿಶೇಷ. ಇದನ್ನೂ ಓದಿ:ಮಿಡ್‌ನೈಟ್‌ನಲ್ಲಿ ಸಾನ್ಯ -ರೂಪೇಶ್ ಲವ್ವಿ ಡವ್ವಿ
Advertisement
ಇನ್ನೂ `ಪುನೀತ ಪರ್ವ'(Puneeth Parva) ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಿಶೇಷವಾಗಿದ್ದು, ಗಂಧದಿಂದ ಪುನೀತ್ ಪುತ್ಥಳಿ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಎಂದು ಬರೆದಿರುವ ಹಸ್ತಾಕ್ಷರವಿದೆ. ಒಟ್ನಲ್ಲಿ ʻಪುನೀತ ಪರ್ವʼ ಕಾರ್ಯಕ್ರಮಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.