ಬೆಂಗಳೂರು: ಜಯನಗರ 4ನೇ ಬ್ಲಾಕ್‌ನಲ್ಲಿ ಗಂಧದಗುಡಿ ಹಬ್ಬದ (Gandhadagudi Festival) ಆಚರಣೆ ಪ್ರಯುಕ್ತ ಗಂಧದಗುಡಿ ಉದ್ಯಾನವನ್ನು (Gandhadagudi Park) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಉದ್ಘಾಟನೆ ಮಾಡಿದರು.
ಪಾರ್ಕ್‌ನಲ್ಲಿ 101 ಸಸಿ ನೆಡುವ ಕಾರ್ಯಕ್ರಮ, ಹಸಿ ಕಸದ ಗೊಬ್ಬರ ತಯಾರಿಕೆ ಕೇಂದ್ರ, ಕಟ್ಲರಿ ಬ್ಯಾಂಕ್ ಉದ್ಘಾಟನೆ ಮತ್ತು ಪರಿಸರ ಕುರಿತು ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮವನ್ನು ಶಾಸಕಿ ಸೌಮ್ಯಾ ರೆಡ್ಡಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಮಾಜಿ ಆಡಳಿತ ಪಕ್ಷದ ನಾಯಕ ಎನ್ ನಾಗರಾಜು ಲೋಕಾರ್ಪಣೆ ಮಾಡಿದರು.
Advertisement
Advertisement
ಗಂಧದಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಹಾಗೂ ಗಂಧದಗುಡಿ ಚಲನಚಿತ್ರ ತಂಡದವರು ಸಹ ದೀಪ ಬೆಳಗಿಸಿ, ಗಂಧದಗುಡಿ ಹಬ್ಬಕ್ಕೆ ಚಾಲನೆ ನೀಡಿದರು.
Advertisement
Advertisement
ಈ ವೇಳೆ ಸೌಮ್ಯಾ ರೆಡ್ಡಿ ಮಾತನಾಡಿ, ಪರಿಸರ ಉಳಿದರೆ ಮನುಷ್ಯ ಜೀವಿಸಲು ಸಾಧ್ಯ. ಅಭಿವೃದ್ಧಿ ಹೆಸರಿನಲ್ಲಿ ಗಿಡ, ಮರಗಳನ್ನು ಕಡಿದು ಕಾಂಕ್ರೀಟ್ ನಾಡುಗಳಾಗಿ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಜನಾಂಗ ಆಮ್ಲಜನಕ ಕೊರತೆಯಿಂದ ಉಸಿರಾಟದ ತೊಂದರೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮನೆಯಿಂದಲೇ ಪರಿಸರ ಅಭಿಯಾನ ಆರಂಭವಾಗಬೇಕು. ಪ್ಲಾಸ್ಟಿಕ್ ಮುಕ್ತ, ಪರಿಸರಯುತ ವಾತಾವರಣ ನಿರ್ಮಿಸಲು ನಿತ್ಯ ಅಂದೋಲವಾಗಬೇಕು ಎಂದು ಹೇಳಿದರು. ಇದನ್ನೂ ಓದಿ: ಪೊಲೀಸ್ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ರ‍್ಯಾಪರ್‌ನನ್ನು ತಳ್ಳಿ ಬೀಳಿಸಿದ ಫ್ಯಾನ್
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮರ್ ಮಾತನಾಡಿ, ಕನ್ನಡಿಗರ ಮನಗೆದ್ದ ಮೇರುನಟ ಡಾ. ರಾಜ್‌ಕುಮಾರ್ ಅವರು ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಹುತೇಕ ಚಲನಚಿತ್ರಗಳಲ್ಲಿ ಪರಿಸರ ಕುರಿತು ಹೆಚ್ಚಿನ ವಿಷಯಗಳು ಇರುತ್ತಿತ್ತು. ನಮ್ಮ ಮನೆ, ನನ್ನ ಕುಟುಂಬ ಎಂಬ ಅಭಿಮಾನದಂತೆ ನಮ್ಮ ತಾಯಿ ನಾಡು, ನಮ್ಮ ಮರ, ಗಿಡ ಪರಿಸರ ಎಂಬ ಅಭಿಮಾನ ಬೆಳಸಿಕೊಳ್ಳಬೇಕು. ಪರಿಸರ ನಾಶವಾದರೆ ಹಣ ಕೊಟ್ಟರು ಬರುವುದಿಲ್ಲ. ಆದ್ದರಿಂದ ಎಲ್ಲರೂ ಸಸಿ ನೆಟ್ಟು ಪರಿಸರ ಉಳಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಮಿತ್ ಶಾ ಭೇಟಿ ಬಳಿಕ ಬೆಳಗಾವಿ ಬಿಜೆಪಿ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k