‘ಬೊಂಬೆ ಹೇಳುತೈತೆ’ ಸಾಂಗ್ ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು

Public TV
1 Min Read
yuva rajkumar 4

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಅವರು ‘ಯುವ’ (Yuva) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಮಾರ್ಚ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಮಾ.23ರಂದು ಹೊಸಪೇಟೆಯಲ್ಲಿ ಯುವ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ವೇಳೆ, ಬೊಂಬೆ ಹೇಳುತೈತೆ ಸಾಂಗ್ ಕೇಳಿ ಪುನೀತ್ ಪತ್ನಿ ಅಶ್ವಿನಿ ಕಣ್ಣೀರಿಟ್ಟಿದ್ದಾರೆ.

yuva 8ಗಾಯಕ ವಿಜಯ್ ಪ್ರಕಾಶ್ ಅವರು ‘ರಾಜಕುಮಾರ’ ಸಿನಿಮಾದ ‘ಬೊಂಬೆ ಹೇಳುತೈತೆ’ ಹಾಡು ಹಾಡುತ್ತಿದ್ದ ವೇಳೆ ವೇದಿಕೆ ಎದುರಿಗೆ ಕೂತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಬಳಿಕ ವೇದಿಕೆಯಲ್ಲಿ ಅವರು ಮಾತು ಆರಂಭಿಸುತ್ತಿದ್ದಂತೆಯೇ ಅಭಿಮಾನಿಗಳ ಅಪ್ಪು ಜಯಘೋಷ ಮುಗಿಲು ಮುಟ್ಟಿದೆ. ನಂತರ ಮಾತನಾಡಿದ ಅಶ್ವಿನಿ (Ashwini Puneethrajkumar) ಅವರು, ‘ಯುವ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. ಯುವ ಹೊಸ ಜರ್ನಿಗೆ ಶುಭಹಾರೈಸಿದ್ದಾರೆ.

yuva rajkumar 3ಇನ್ನೂ ಇದೇ ವೇಳೆ, ಯುವ ಸಿನಿಮಾ ಶುರುವಾಗಿದ್ದು ಹೇಗೆ ಎಂದು ನಿರ್ದೇಶಕ ಸಂತೋಷ್ ಆನಂದ್‌ರಾಮ್ ರಿವೀಲ್ ಮಾಡಿದ್ದಾರೆ. ಅಶ್ವಿನಿ ಅವರು ಯುವನನ್ನು ವಿಜಯ್ ಕಿರಗಂದೂರು ಲಾಂಚ್ ಮಾಡಬೇಕು ಎಂದು ಹೇಳುತ್ತಾರೆ. ಆ ನಂತರ ವಿಜಯ್ ಅವರು ನನಗೆ ತಿಳಿಸಿದ್ದರು. ನೀನು ಯುವನನ್ನು ಲಾಂಚ್ ಮಾಡಬೇಕು ಅಂತ. ಅಂದಿನ ಒಂದು ಫೋನ್ ಕರೆ ಇವತ್ತು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ವಿಜಯ್ ಕಿರಗಂದೂರು ಸರ್ ಕೂಡ ಒಂದೇ ಮಾತು ಹೇಳಿದ್ದು, ಗುರು (ಯುವ) ಲಾಂಚ್ ಮಾಡುವುದು ಒಂದು ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು. ನಾವು ಸಿನಿಮಾವನ್ನು ನಿಲ್ಲಿಸಬೇಕು ಅಂತ ಹೇಳಿರೋದನ್ನು ಸ್ಮರಿಸಿದ್ದರು. ಇದನ್ನೂ ಓದಿ:ಬಾಲಿವುಡ್‌ನಲ್ಲಿ ರಿಮೇಕ್ ಆಗಲಿದೆ ‘ಉಪ್ಪೇನಾ’ ಚಿತ್ರ- ನಾಯಕಿ ಯಾರು?

ಅಂದಹಾಗೆ, ಯುವಗೆ ಜೋಡಿಯಾಗಿ ಸಪ್ತಮಿ ಗೌಡ (Sapthami Gowda) ನಟಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಯುವ ಚಿತ್ರದ ಹಾಡು, ಟ್ರೈಲರ್ ಸಿಕ್ಕಾಪಟ್ಟೆ ಮೋಡಿ ಮಾಡಿದೆ. ರಿಲೀಸ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article