ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಡ್ರೀಮ್ ಪಾಜೆಕ್ಟ್ ಸಂಬಂಧಿಸಿದಂತೆ ಪೋಸ್ಟರ್‌ವೊಂದನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಶೇರ್ ಮಾಡಿಕೊಂಡಿದ್ದಾರೆ.
ಪುನೀತ್ ಸಾವಿಗೂ ಮುನ್ನ ಅವರು ಅಭಿನಯಿಸಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಫಿಲ್ಮ್ ಅನ್ನು ದೊಡ್ಡದಾಗಿ ಅಭಿಮಾನಿಗಳ ಮುಂದೆ ಸ್ಕ್ರೀನ್ ಮೇಲೆ ತರುವ ಆಸೆ ಹೊಂದಿದ್ದರು. ಆದರೆ ದುರದೃಷ್ಟವಶಾತ್ ಪುನೀತ್ ಇಂದು ನಮ್ಮೊಂದಿಗೆ ಇಲ್ಲ. ಆದರೂ ಪುನೀತ್ ಆಸೆಯಂತೆ ಗಂಧದ ಗುಡಿ ಡಾಕ್ಯುಮೆಂಟರಿ ತೆರೆಕಾಣಲಿದೆ. ಇನ್ನೂ ಇದರ ಟೀಸರ್ ಡಿಸೆಂಬರ್ 6ರಂದು ರಿಲೀಸ್ ಆಗುತ್ತಿದೆ. ಇದನ್ನೂ ಓದಿ: ಕಡಲೆಕಾಯಿ ಪರಿಷೆಯಲ್ಲಿ ನಕ್ಕುನಲಿದ ವೈಷ್ಣವಿಗೌಡ
ಈ ಕುರಿತಂತೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‍ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಈ ಪೋಸ್ಟರ್‌ನಲ್ಲಿ ದಟ್ಟ ಕಾಡಿನ ಮಧ್ಯೆ ಪುನೀತ್ ಬೆನ್ನ ಹಿಂದೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.
View this post on Instagram
ಪೋಸ್ಟರ್ ಜೊತೆಗೆ ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ ಎಂದು ಅಶ್ವಿನಿ ಪುನೀತ್ ಅವರು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇದೇ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ
View this post on Instagram
ಡಿಸೆಂಬರ್ 1ರಂದು ಪುನೀತ್ ರಾಜ್‍ಕುಮಾರ್ ಮತ್ತು ಅಶ್ವಿನಿ ತಮ್ಮ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕಾಗಿತ್ತು. ಆದರೆ, ದುರ್ವಿಧಿಯ ಲೆಕ್ಕಾಚಾರವೇ ಬೇರೆ ಆಗಿತ್ತು. ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ಪುನೀತ್ ರಾಜ್‍ಕುಮಾರ್ ದಿಢೀರನೆ ತೆರಳಿಬಿಟ್ಟರು.