ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಕಾರುಣ್ಯ ರಾಮ್ (Karunya Ram) ಸದ್ಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ (Organ Donation) ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಹಾಗೂ ಧ್ರುವ ಸರ್ಜಾ (Dhruva Sarja) ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಟಿ ಕಾರುಣ್ಯ ರಾಮ್, ‘ಅಂಗಾಂಗ ದಾನ ಮಾಡುವುದರಿಂದ ನಾವು ಸತ್ತ ಬಳಿಕವೂ ನಮ್ಮ ಉಪಯೋಗ ಆಗುತ್ತದೆ. ಅಂಗಾಂಗ ದಾನದಿಂದ ಪುಣ್ಯ ಸಿಗುತ್ತೆ, ಎಲ್ಲರೂ ಅಂಗಾಂಗ ದಾನ ಮಾಡಿ’ ಎಂದು ಮನವಿ ಮಾಡಿದರು. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ
ನಂತರ ಮಾತನಾಡಿದ ಧ್ರುವ ಸರ್ಜಾ, ‘ಅನೇಕರಿಗೆ ನಾವು ಯೂಸ್ ಲೆಸ್ ಅಂತ ಹೇಳುತ್ತಿರುತ್ತೇವೆ. ಆದರೆ ಯಾರು ಯೂಸ್ ಲೆಸ್ ಅಲ್ಲ. ಯೂಸ್ಡ್ ಲೆಸ್ ಅಷ್ಟೇ. ಅಂಗಾಂಗ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ. ನಾವು ಸತ್ತ ಮೇಲೂ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ ಎಂದರೆ ಯಾಕೆ ಮಾಡಬಾರದು. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಇಂಥ ಶಿಬಿರಗಳನ್ನು ಎಲ್ಲಾ ಕಡೆ ಮಾಡಬೇಕು, ಹೆಚ್ಚು ಹೆಚ್ಚು ಆಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 700 ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಹೆಲ್ತ್ ಅಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು, ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್ ಭಾಗಿಯಾಗಿತ್ತು. ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ನ ಫೌಂಡರ್ ಸಂತೋಷ್ ಕೂಡ ಭಾಗಿಯಾಗಿದ್ದರು.
Web Stories