ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಪಿ.ಆರ್.ಕೆ ಪ್ರೊಡಕ್ಷನ್ ಕಡಿಮೆ ಸಮಯದಲ್ಲೇ ಹತ್ತು ಚಿತ್ರಗಳನ್ನು ಪೂರೈಸಿದೆ. ಈ ಸಂಭ್ರಮಕ್ಕಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾವನ್ನು ಘೋಷಿಸಿದ್ದು, ಈ ಬಾರಿ ಅವರು ಮಹಿಳಾ ನಿರ್ದೇಶಕಿಗೆ ಅವಕಾಶ ನೀಡಿದ್ದಾರೆ. ಇದನ್ನೂ ಓದಿ : ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು
ಪಿ.ಆರ್.ಕೆ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ 10ನೇ ಚಿತ್ರಕ್ಕೆ ‘ಆಚಾರ್ ಅಂಡ್ ಕೋ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಸಿಂಧು ಶ್ರೀನಿವಾಸ್ ಎಂಬ ನವ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಿ.ಆರ್.ಕೆ ಬ್ಯಾನರ್ ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ದೇಶಕರ ಚೊಚ್ಚಲು ಸಿನಿಮಾ ಇದಾಗಿದೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ
ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ನಾನಾ ವಿಭಾಗಗಳಲ್ಲಿ ಬಹುತೇಕ ಮಹಿಳೆಯರೇ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಿಂದುಮಾಲಿನಿ ಅವರ ಸಂಗೀತ ಸಂಯೋಜನೆ ಇದ್ದರೆ, ಕ್ರಿಯೇಟಿವ್ ಪ್ರೊಡ್ಯುಸರ್ ಡಾನ್ನಿಲಾ ಕೊರ್ರೆಯಾ, ಸ್ಟೈಲಿಸ್ಟ್ ಇಂಚರಾ ಸುರೇಶ್ ಇವರನ್ನೊಳಗೊಂಡಿದೆ ಚಿತ್ರತಂಡ. ಇದನ್ನೂ ಓದಿ : ನೀನಾಸಂ ಸತೀಶ್ ಫಸ್ಟ್ ಫೋಟೋ ಶೂಟ್ ಸ್ಟೋರಿ ವಿತ್ ಫೋಟೋ ಆಲ್ಬಂ
ಸಿನಿಮಾಗಾಗಿ ವಿಶೇಷ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದು, 60ರ ದಶಕದಲ್ಲಿ ನಡೆದ ಘಟನೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ 60ರ ದಶಕದ ಬೆಂಗಳೂರನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡಬಹುದಾಗಿದೆ. ಈ ಕುರಿತು ಟ್ವಿಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ‘ಆಚಾರ್ ಅಂಡ್ ಕೋ ಪಿ.ಆರ್.ಕೆ ಪ್ರೊಡಕ್ಷನ್ನ 10ನೇ ಚಿತ್ರ. 60ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಮುಂಚೂಣಿಯಲ್ಲಿ ಹಲವಾರು ಮಹಿಳೆಯರನ್ನು ಇದು ಒಳಗೊಂಡಿದೆ’ ಎಂದು ಟ್ವಿಟ್ ಮಾಡಿದ್ದಾರೆ. ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ, ಅತೀ ಶೀಘ್ರದಲ್ಲೇ ಹೆಚ್ಚಿನ ವಿವರವನ್ನು ಕೊಡಲಿದೆ ಪಿ.ಆರ್.ಕೆ ಪ್ರೊಡಕ್ಷನ್.