ಬಿಗ್‌ಬಾಸ್ ಮನೆಯ ರೆಬೆಲ್ ಕಂಟೆಸ್ಟೆಂಟ್ ಅಶ್ವಿನಿ ಗೌಡ (Ashwini Gowda) ಗಳಗಳನೆ ಅತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವಮಾನ ಆಗ್ತಿದೆ. ಅದನ್ನ ಮರೆಯೋಕೆ ಸಾಧ್ಯವಿಲ್ಲ, ಮರೆತು ಮುಂದೆ ಹೋಗೋಕೂ ಸಾಧ್ಯವಿಲ್ಲ ಎಂದು ಬಿಕ್ಕಿದ್ದಾರೆ.
ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ತಿರಸ್ಕಾರ ಭಾವನೆ ಅನುಭವಿಸಿದ್ದಕ್ಕೆ ಬೇಸರದಿಂದ ಅತ್ತು ಕರೆದು ಗೋಳಾಡಿದ್ದಾರೆ.
ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ನಡೆಯೋದಕ್ಕೆ ಘೋಷಣೆಯಾಗಿತ್ತು. ಆದರೆ ಈ ಟಾಸ್ಕ್‌ನಿಂದ ಒಬ್ಬ ಕಂಟೆಸ್ಟೆಂಟ್‌ನ್ನು ಕೈಬಿಡಲು ಸೂಚಿಸುವ ಅಧಿಕಾರವನ್ನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿರೋ ಕಂಟೆಸ್ಟೆಂಟ್‌ಗಳಿಗೆ ನೀಡಲಾಗಿತ್ತು. ರಿಶಾ ಗೌಡ, ಸೂರಜ್ ಸಿಂಗ್ ಹಾಗೂ ಮ್ಯೂಟಂಟ್ ರಘು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅಶ್ವಿನಿ ಗೌಡರನ್ನ ಟಾರ್ಗೆಟ್ ಮಾಡಿದ್ದಾರೆ.
ʻಈಗಲೇ ಸರ್ವಾಧಿಕಾರಿ ಧೋರಣೆ ತೋರಿಸುತ್ತಿರುವ ಅಶ್ವಿನಿ ಗೌಡ ಕ್ಯಾಪ್ಟನ್ ಆಗ್ಬಿಟ್ರೆ ಉಳಿದ ಕಂಟೆಸ್ಟೆಂಟ್‌ಗಳಿಗೆ ಕಷ್ಟ ಆಗಬಹುದುʼ ಎಂಬ ಕಾರಣ ಕೊಟ್ಟು ಕ್ಯಾಪ್ಟೆನ್ಸಿ ಟಾಸ್ಕ್‌ನಕಿಂದ ಹೊರಗಿಟ್ಟಿದ್ದಾರೆ. ಈ ವಿರೋಧದಿಂದ ತೀವ್ರವಾಗಿ ಅಸಮಾಧಾನಗೊಂಡ ಅಶ್ವಿನಿ ನೊಂದು ಬಿಕ್ಕಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ದೂರ ಉಳಿಯುವಂತೆ ಮಾಡಿದ್ದಕ್ಕೆ ʻಬಿಗ್‌ಬಾಸ್ ಮನೆಯಲ್ಲಿ ತಮಗೆ ಅವಮಾನ ಆಗುತ್ತಿದೆ. ಇದನ್ನ ಯಾವತ್ತೂ ಮರೆಯೋಕಾಗಲ್ಲ. ರೇಸ್‌ಗೆ ಬಿಡದಿದ್ದರೆ ಯಾವ್ ಕುದುರೆ ಸ್ಟ್ರಾಂಗ್ ಅಂತ ಹೇಗೆ ಡಿಸೈಡ್ ಮಾಡೋದುʼ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಅಶ್ವಿನಿ.
ಇದು ಮೊದಲ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಆಗಿದ್ದು ಇಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋದು ಅಶ್ವಿನಿ ಆಸೆಯಾಗಿತ್ತು. ಇದ್ರಿಂದ ಬೇಸರವಾಗಿ ತಿರಸ್ಕಾರವನ್ನ ಮನಸ್ಸಿಗೆ ತೆಗೆದುಕೊಂಡು ಅಶ್ವಿನಿ ಗೌಡ ಗಳಗಳನೆ ಅತ್ತಿದ್ದಾರೆ.