ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ

Public TV
1 Min Read
r ashwin

ರಾಜ್‌ಕೋಟ್‌: ಸ್ಪಿನ್ನರ್‌ ಆರ್‌ ಅಶ್ವಿನ್‌ ( R Ashwin) ಈಗ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಿಂದ (Test Match) ದಿಢೀರ್‌ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಇಂಗ್ಲೆಂಡ್‌ (England) ವಿರುದ್ಧದ ಪಂದ್ಯದಲ್ಲಿ 10 ಆಟಗಾರರೊಂದಿಗೆ ಭಾರತ (Team India) ಪಂದ್ಯ ಆಡುತ್ತಿದೆ.

ಅಶ್ವಿನ್‌ ಬದಲು ಫೀಲ್ಡಿಂಗ್‌ನಲ್ಲಿ ಬದಲಿ ಆಟಗಾರನನ್ನು ಮಾತ್ರವೇ ಭಾರತ ಆಡಿಸಲು ಅವಕಾಶವಿದೆ. ಇಂಗ್ಲೆಂಡ್‌ ವಿರುದ್ಧ ನಡೆಯತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಮುಂದಿನ ಭಾಗದಲ್ಲಿ ಅಶ್ವಿನ್‌ ಅವರ ಸೇವೆ ತಂಡಕ್ಕೆ ಸಿಗುವುದಿಲ್ಲ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದ ಕಾರಣಕ್ಕೆ ಅವರು ತಂಡವನ್ನು ತೊರೆದಿದ್ದಾರೆ ಬಿಸಿಸಿಐ (BCCI) ಹೇಳಿಕೆ ನೀಡಿದೆ.  ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ – ಇತಿಹಾಸ ಬರೆದ ಸ್ಪಿನ್‌ ಮಾಂತ್ರಿಕ ಅಶ್ವಿನ್‌

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಕಾರಣ ತಿಳಿಸಿದ್ದಾರೆ. ಅಶ್ವಿನ್‌ ಅವರ ತಾಯಿ (Mother) ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ರಾಜ್‌ಕೋಟ್‌ ತೊರೆದು ಶೀಘ್ರವೇ ತಾಯಿಯನ್ನು ನೋಡಲು ಚೆನ್ನೈಗೆ ತೆರಳಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ 5 ರನ್‌ ದಂಡ!

ಚಾಂಪಿಯನ್ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಸಿಸಿಐ ಅಗತ್ಯ ಬೆಂಬಲ ನೀಡುತ್ತದೆ. ಆಟಗಾರರು ಮತ್ತು ಅವರ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಅಶ್ವಿನ್ ಮತ್ತು ಅವರ ಕುಟುಂಬದವರು ಈ ಸವಾಲಿನ ಸಮಯದಲ್ಲಿ ಅವರ ಖಾಸಗಿತನವನ್ನು ಮಂಡಳಿ ಗೌರವಿಸುತ್ತದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 445 ರನ್‌ಗಳಿಗೆ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 207 ರನ್‌ ಹೊಡೆದಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 37 ರನ್ ಹೊಡೆದಿದ್ದರೆ ಬೌಲಿಂಗ್‌ನಲ್ಲಿ 7 ಓವರ್‌ ಎಸೆದು 37 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು.

Share This Article