ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಕೀಳುವ ಮೂಲಕ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವದಾಖಲೆ ಬರೆದಿದ್ದಾರೆ.
ಅತಿ ಕಡಿಮೆ ಪಂದ್ಯದಲ್ಲಿ 300 ವಿಕೆಟ್ ಕಿತ್ತ ಬೌಲರ್ ಎನ್ನುವ ಹೆಗ್ಗಳಿಕೆಗೆ ಆರ್ ಅಶ್ವಿನ್ ಈಗ ಪಾತ್ರವಾಗಿದ್ದಾರೆ. ಅಶ್ವಿನ್ 54 ಪಂದ್ಯಗಳ 101 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.
Advertisement
ಈ ಹಿಂದೆ ಆಸ್ಟ್ರೇಲಿಯಾ ಡೆನ್ನಿಸ್ ಲಿಲ್ಲಿ 56 ಪಂದ್ಯ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 58 ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡಿನ ರಿಚರ್ಡ್ ಹ್ಯಾಡ್ಲಿ, ವೆಸ್ಟ್ ಇಂಡೀಸ್ ನ ಮ್ಯಾಲ್ಕಂ ಮಾರ್ಶಲ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ 61ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪಡೆದಿದ್ದರು.
Advertisement
Congratulations India on a comprehensive victory. Many congratulations to @ashwinravi99 on becoming the fastest to reach 300 Test Wickets.
— VVS Laxman (@VVSLaxman281) November 27, 2017
Advertisement
300th test wicket at the Jamtha (Nagpur) ,a memorable day. Thank you all????@imVkohli look forward to the next 18 months. pic.twitter.com/hjtdVXndSI
— Ashwin ???????? (@ashwinravi99) November 27, 2017
Advertisement
ಮೊದಲ ಇನ್ನಿಂಗ್ಸ್ ನಲ್ಲಿ 67 ರನ್ ನೀಡಿ 4 ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೇ ಇನ್ನಿಂಗ್ಸ್ ನಲ್ಲಿ 63 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರು.
54 ಪಂದ್ಯಗಳಲ್ಲಿ ಅಶ್ವಿನ್ ಇದೂವರೆಗೆ 15,636 ಎಸೆತಗಳನ್ನು ಹಾಕಿ 7520 ರನ್ ನೀಡಿದ್ದಾರೆ. ಒಂದು ಇನ್ನಿಂಗ್ಸ್ ನಲ್ಲಿ 59 ರನ್ ನೀಡಿ 7 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ ಆಗಿದ್ದು, ಎರಡು ಇನ್ನಿಂಗ್ಸ್ ನಲ್ಲಿ 140 ರನ್ ನೀಡಿ 13 ವಿಕೆಟ್ ಪಡೆದಿರುವುದು ಅಶ್ವಿನ್ ಶ್ರೇಷ್ಠ ಸಾಧನೆಯಾಗಿದೆ.
November 27, 1981 v Pakistan (Brisbane): Dennis Lillee becomes the quickest to reach 300 Test wickets (56 Tests)
November 27, 2017 v SL (Nagpur): Ravichandran @ashwinravi99 anna becomes the quickest to reach 300 Test wickets (54 Tests)#INDvSL#AshwinPride pic.twitter.com/yXGFWeHtxv
— Kala Mani (@kalamani22) November 27, 2017