ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾದ ಇಬ್ಬರು ಓಮಿಕ್ರಾನ್ ಸೋಂಕಿತರನ್ನು ಮತ್ತು ಅವರ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಿರನ್ನು ಐಸೋಲೇಟ್ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪತ್ತೆಯಾದ ಎರಡು ಓಮಿಕ್ರಾನ್ ಪ್ರಕರಣದ ಇಬ್ಬರು ಸೋಂಕಿತರು ಮತ್ತು ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಿತರನ್ನು ಐಸೋಲೇಟ್ ಮಾಡಲಾಗಿದೆ. ಜಿನೋಮ್ ಸೀಕ್ವೆನ್ಸ್ ಕಳುಹಿಸಲಾಗಿತ್ತು ಆಗ ಓಮಿಕ್ರಾನ್ ಪತ್ತೆಯಾಗಿದೆ. ಈ ವೈರಸ್ ಹೇಗೆ ಬರಲಿದೆ ಅಂತ ಅಧ್ಯಯನ ಮಾಡಲಾಗಿದೆ. ಜೀವಕ್ಕೆ ಅಪಾಯವಿಲ್ಲ. ಬೇರೆ ಬೇರೆ ದೇಶದಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಕೇವಲ ದೈಹಿಕವಾಗಿ ಸೋರ್‌ನೆಸ್, ಮಾಂಸ ಕಂಡ ನೋವು ಕಾಣಿಸಿಕೊಳ್ಳಲಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಕ್ರಮ ತೆಗೆದುಕೊಂಡಿದ್ದೇವೆ. ವೇಗವಾಗಿ ಹರಡುತ್ತದೆ, ಆದರೆ ಜೀವಕ್ಕೆ ಅಪಾಯ ಇಲ್ಲ. ಹರಡೋ ಪ್ರಮಾಣ ವೇಗವಾಗಿದೆ. ಸರ್ಕಾರ ಕಟ್ಟೆಚ್ಚರ ವಹಿಸಿದೆ. ಬೇರೆ ಬೇರೆ ದೇಶಕ್ಕೆ ಹರಡೋದನ್ನು ತಡೆಗಟ್ಟೋ ಕೆಲಸ ಆಗುತ್ತಿದೆ. ಕಡ್ಡಾಯವಾಗಿ ತಪಾಸಣೆ ಆಗಿದ್ರೂ, ರಿಪೋರ್ಟ್ ಬರೋವರೆಗೂ ತಪಾಸಣೆಗೊಳಪಟ್ಟವರನ್ನು ಅವರನ್ನು ಕಳುಹಿಸುವುದಿಲ್ಲ. ನೆಗೆಟೀವ್ ರಿಪೋರ್ಟ್ ಬಂದ ಬಳಿಕ ಕಳುಹಿಸಲಾಗಿವುದು. ಮಹಾರಾಷ್ಟ್ರದಿಂದ ಬರ್ತಿರೋರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ. ನೆಗೆಟೀವ್ ಬಂದವರಿಗೆ ಮಾತ್ರ ಒಳಗೆ ಬಿಟ್ಟುಕೊಳ್ಳಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟ ಡೆಡ್ಲಿ ವೈರಸ್- ಬೆಂಗಳೂರಿನ ಇಬ್ಬರಲ್ಲಿ ಓಮಿಕ್ರಾನ್ ಪತ್ತೆ!
Advertisement
ಓಮಿಕ್ರಾನ್ ಬಗ್ಗೆ ಹೆಚ್ಚಿನ ಭಯ ಭೀತರಾಗಿ ಇರಬೇಡಿ. ಮೊದಲ ಕೆಲಸ ವ್ಯಾಕ್ಸಿನ್ ಪಡೆಯೋದು. ಕೋವಿಶೀಲ್ಡ್, ಕೋ ವ್ಯಾಕ್ಸಿನ್ ಪಡೆಯಿರಿ. ಒಂದೋ ಲಸಿಕೆ ಪಡೆಯದವರು ಒಂದಾದರೂ ಲಸಿಕೆ ಪಡೆಯಿರಿ. ಸರ್ಕಾರ ಎಲ್ಲೆಡೆ ಕೆಲಸ ಮಾಡುವ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಕಡ್ಡಾಯ. ಮುಂದಿನ ದಿನ ಮಾಲ್, ಥಿಯೇಟರ್‌ಗೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಿದ್ದೇವೆ. ಸಿನಿಮಾ, ಥಿಯೇಟರ್ ನಡೆಸಲು ಅನುಮತಿ ಇದೆ. ಸಿನಿಮಾ, ರೆಸ್ಟೋರೆಂಟ್, ಎಲ್ಲವೂ ನಡೆಯಲಿದೆ. ಆದರೆ ಮಾಸ್ಕ್ ಕಡ್ಡಾಯ. ಎಲ್ಲರ ಜೀವನ, ಜೀವಾಂಶ ಉಳಿಸೋ ಕೆಲಸ ಮಾಡೋಣ. ಯಾವುದೇ ಬಂದ್ ಆಗೋದಿಲ್ಲ ಎಂದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾಗುವ ಸಾಧ್ಯತೆ?
Advertisement
Advertisement