ಹುಬ್ಬಳ್ಳಿ: ಕಾಂಗ್ರೆಸ್ ರೈತರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಬಿಜೆಪಿ ಯಾವಾಗಲೂ ರೈತರ ಪರವಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಉತ್ತರ ಪ್ರದೇಶದ ಘಟನೆ ಬಗ್ಗೆ ಅಲ್ಲಿನ ಸರ್ಕಾರ ಸೂಕ್ತ ಕ್ರಮ ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಘಟನೆ ನಡೆಯಬಾರದಿತ್ತು, ಆದರೀಗ ಸರ್ಕಾರ ಎಲ್ಲ ಕ್ರಮವಹಿಸಿ ಎಲ್ಲವನ್ನು ತಿಳಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು. ಇದನ್ನೂ ಓದಿ: ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ
Advertisement
Advertisement
ರೈತರು ಸಬಲೀಕರಣ ಆಗಬಾರದು, ಅವರು ಉನ್ನತಿ ಹೊಂದಬಾರದು, ಬಲಿಷ್ಠರಾಗಬಾರದು, ಅಸಹಾಯಕಾರಾಗಬೇಕು ಎನ್ನುವುದು ಕಾಂಗ್ರೆಸ್ ಅವರ ಕಲ್ಪನೆ. ಅವರು ಕಲ್ಪನೆ ಇಟ್ಟು ರಾಜಕೀಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಅನ್ನದಾತರ ಕುಟುಂಬಕ್ಕೆ ಸೇರಿದವರು, ಅವರ ಶಕ್ತಿ ಹೆಚ್ಚಿಸಲು ಸುಧಾರಣೆಗಳು ರೈತರ ಪೂರಕವಾಗಿವೆ. ಇದೇಲ್ಲಾ ಕುತಂತ್ರ, ತಂತ್ರಗಾರಿಕೆಯನ್ನು, ದಾರಿ ತಪ್ಪಿಸುವ ಪ್ರಯತ್ನವನ್ನು ಪ್ರತಿಪಕ್ಷ ಮತ್ತು ಕೆಲವು ಸಂಘಟನೆಗಳು ಮಾಡುತ್ತಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ಗೆದ್ದು ಬೀಗಿದ ಲೂಸ್ ಮಾದ ಯೋಗಿಯ ‘ಲಂಕೆ’ ಸಿನಿಮಾ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ
Advertisement
ವಿಜಯೇಂದ್ರರನ್ನು ತಡವಾಗಿ ಉಪಚುನಾವಣೆ ಪಟ್ಟಿಗೆ ಸೇರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಪಕ್ಷದವರೇ ಪ್ರತ್ಯೇಕವಾಗಿ, ವಿಶೇಷವಾಗಿ ಬೆಳಕನ್ನು ಚೆಲ್ಲುವುದು ಅಷ್ಟು ಸೂಕ್ತವಲ್ಲ. ಎಲ್ಲರಿಗೂ ಪಕ್ಷದಲ್ಲಿ ಸ್ಥಾನಮಾನವಿದೆ. ಎಲ್ಲರಿಗೂ ಜವಾಬ್ದಾರಿ ಇದೆ. ರಾಜಕೀಯದಲ್ಲಿ ಎಲ್ಲರಿಗೂ ಅವಕಾಶ ಇದ್ದೆ ಇರುತ್ತದೆ. ಅವಕಾಶ ಸಿಕ್ಕೆ ಸಿಗುತ್ತದೆ. ಇದಕ್ಕೆ ವಿಶೇಷ ಬಣ್ಣ, ವ್ಯತ್ಯಾಸವನ್ನು ನಿರ್ಮಾಣ ಮಾಡುವ ಯಾವುದೇ ಅಗತ್ಯ ಇಲ್ಲ ಎಂದರು.
Advertisement
ಇದೇ ವೇಳೆ ಸಿದ್ದರಾಮಯ್ಯ ಸರ್ಕಾರ ಹಾಗೂ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅಧಿಕಾರಕ್ಕೆ ಬರಲ್ಲ, ಕನಸು ಮನಸಲ್ಲು ಅವರು ಬರಲ್ಲ. ಅವರ ಪಕ್ಷ ಈಗಾಗಲೇ ಹರಿದು ಹಂಚಿಹೋಗಿದೆ. ಸಿಎಂ ನಾನಾಗಬೇಕು ಅಂತ ಅವರ ಅವರಲ್ಲೇ ಜಗಳ ಶುರುವಾಗಿದೆ. ಅವರಿಗೆ ಅಧಿಕಾರ ಯಾವಾಗ ಮಾಡಬೇಕೆನ್ನುವುದು ರಾಜಕೀಯವಾಗಿದೆ. ಕೇವಲ ಗೊಂದಲ ನಿರ್ಮಾಣ ಮಾಡಬೇಕು, ಸಮಾಜ ಒಡೆಯಬೇಕು ಇಂತ ಯೋಚನೆಗಳು ಅವರಲ್ಲಿದೆ. ಉತ್ತಮ ಆಡಳಿತ, ಉತ್ತಮ ಸೇವೆ ಕೊಡಬೇಕು ಎನ್ನುವ ಕಲ್ಪನೆ ಇಲ್ಲದ ಪಕ್ಷ ಮತ್ತು ನಾಯಕರಾಗಿದ್ದಾರೆ. ಅವರ ಕಾಲದಲ್ಲಿ ವರದಿ ಬಂದಾಗ ಯಾಕೆ ಸಹಿ ಮಾಡದೇ ಕೂತಿದ್ದರು ಅಂತ ಅವರನ್ನೇ ಕೇಳಬೇಕು. ರಾಜಕೀಯ ಹೀಗೆ ಮಾಡಿಕೊಂಡು ಬಂದಿದ್ದಾರೆ. ಬಣ್ಣ ಬಳೆದುಕೊಂಡು ಕತೆ ಹೇಳಿಕೊಂಡು, ಸುಳ್ಳು ಹೇಳಿಕೊಂಡು, ಮನೆಗೆ ಬೆಂಕಿ ಹಚ್ಚಿ ಅಡುಗೆ ಮಾಡುವವರು ಅವರು ಎಂದು ಕಿಡಿಕಾರಿದರು. ಇದನ್ನೂ ಓದಿ: ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ
ಎಲ್ಲವೂ ಬೆಲೆ ನಿಯಂತ್ರಣದಲ್ಲಿದೆ. ಬೈ ಎಲೆಕ್ಷನ್ ನಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ. ಈಗಾಗಲೇ ಎಲ್ಲೆಲ್ಲಿ ಬೈ ಎಲೆಕ್ಷನ್ ನಡೆದಿದೆ, ಅಲ್ಲಲ್ಲಿ ನಾವು ಗೆದ್ದಿದ್ದೇವೆ ಎಂದರು.