ಬೆಂಗಳೂರು: ದೇಶದಾದ್ಯಂತ ಸಂಚಲನ ಹುಟ್ಟಿಸಿರುವ `ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಇಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೂಡಿ ಒರಾಯನ್ ಮಾಲ್‍ನಲ್ಲಿ ವೀಕ್ಷಿಸಿದರು.
Advertisement
ಚಿತ್ರ ವೀಕ್ಷಣೆಯ ನಂತರ ಮಾತನಾಡಿದ ಅವರು, `ಈ ಸಿನಿಮಾ ಇದುವರೆಗೂ ಹುದುಗಿಸಿಟ್ಟಿದ್ದ ಅನೇಕ ಸತ್ಯಗಳನ್ನು ಅನಾವರಣಗೊಳಿಸಿದೆ. ಈ ಮೂಲಕ ಕಾಶ್ಮೀರದಲ್ಲಿ ಧರ್ಮದ ಹೆಸರಿನಲ್ಲಿ ನಡೆಸಿದ ಭಯೋತ್ಪಾದನೆಯ ಕರಾಳತೆ ಜಗತ್ತಿಗೆ ಗೊತ್ತಾಗಿದೆ ಎಂದರು. ಇದನ್ನೂ ಓದಿ: ಗುಜರಾತ್ ಹತ್ಯಾಕಾಂಡದ ಸಿನಿಮಾ ಬಂದ್ರೆ ಸಿದ್ದರಾಮಯ್ಯ ಊರು ಬಿಟ್ಟು ಓಡಬೇಕಾಗುತ್ತದೆ: ಕಲ್ಲಡ್ಕ ಪ್ರಭಾಕರ ಭಟ್
Advertisement
Advertisement
ನೋಡುಗರ ಎದೆ ಝಲ್ಲೆನಿಸುವಂತಹ ಇಂತಹ ಒಂದು ಸಿನಿಮಾವನ್ನು ಮಾಡುವುದು ತುಂಬಾ ಸಾಹಸದ ಕೆಲಸವಾಗಿದೆ. ವಿವೇಕ್ ಅಗ್ನಿಹೋತ್ರಿ ಮತ್ತು ಅನುಪಮ್ ಖೇರ್ ತಂಡದವರು ಇಂಥದೊಂದು ಚಿತ್ರವನ್ನು ಕೊಡುವ ಮೂಲಕ, ಇತಿಹಾಸದ ಕತ್ತಲಿನಲ್ಲಿದ್ದ ಅಪ್ರಿಯ ಸತ್ಯಗಳನ್ನು ಹೊರತಂದಿದ್ದಾರೆ. ಈ ಸಿನಿಮಾ ವಿರುದ್ಧ ಚಿತ್ರರಂಗದಲ್ಲಿ ಸಂಚುಗಳು ನಡೆದವು. ಆದರೆ, ಸಿನಿಮಾ ಮಾತ್ರ ಎಲ್ಲರ ನಿರೀಕ್ಷೆಯನ್ನೂ ತಲೆಕೆಳಗಾಗಿಸಿ 100 ಕೋಟಿ ರೂ. ಕ್ಲಬ್ ಸೇರಿದೆ. ಜೊತೆಗೆ, ಇಡೀ ಜಗತ್ತಿನ ಗಮನ ಸೆಳೆದಿದ್ದು, ಮನರಂಜನೆಯ ಜೊತೆಗೆ ಅರಿವನ್ನೂ ಹೇಗೆ ವಿಸ್ತರಿಸಬಹುದು ಎನ್ನುವುದಕ್ಕೆ ಈ ಚಿತ್ರ ಒಳ್ಳೆಯ ನಿದರ್ಶನವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಫ್ರೀ ಲಿಂಕ್ ಬಗ್ಗೆ ಇರಲಿ ಎಚ್ಚರ – ಮಂಗಳೂರಿನಲ್ಲೂ ಸೈಬರ್ ವಂಚನೆ ಬೆಳಕಿಗೆ
Advertisement
ಚಿತ್ರ ವೀಕ್ಷಣೆಯಲ್ಲಿ ಮಲ್ಲೇಶ್ವರಂ ಮಂಡಲ ಬಿಜೆಪಿ ಮುಖಂಡರಾದ ಕಾವೇರಿ ಕೇದಾರನಾಥ್ ಮುಂತಾದವರಿದ್ದರು.