Bengaluru CityDistrictsKarnatakaLatestMain Post

ಎಲ್ಲಿದ್ದೀಯಪ್ಪಾ ಕುಮಾರಸ್ವಾಮಿ?: ಸಚಿವ ಅಶ್ವಥ್‍ನಾರಾಯಣ್ ಲೇವಡಿ

ಬೆಂಗಳೂರು: ಅಧಿವೇಶನ ಇದ್ದಾಗಲೇ ಕುಮಾರಸ್ವಾಮಿ ಸದನಕ್ಕೆ ಬರುವುದಿಲ್ಲ. ಎಲ್ಲಿದ್ದೀಯಪ್ಪ ಕುಮಾರಸ್ವಾಮಿ ಎಂದು ಅವರನ್ನು ಹುಡುಕಬೇಕು ಎಂದು ಸಚಿವ ಅಶ್ವಥ್‍ನಾರಾಯಣ್ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುವ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಸದನ ಕರೀರಿ ಅನ್ನೋದು. ಆಮೇಲೆ ಬಾರದೆ ಇರೋದು. ಸಿದ್ದರಾಮಯ್ಯ ಮಾತಿನಂತೆ ಇವರು ಮಾತಾನಾಡುತ್ತಿದ್ದಾರೆ. ಬಾಯಿಗೆ ಬಂದಂತೆ ದಿಕ್ಕು ಇಲ್ಲದಂತೆ ಗುಂಡು ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಮನಗರ ಜಿಲ್ಲೆಯಲ್ಲಿ ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಪಕ್ಷ ನಮ್ಮ ಸರ್ಕಾರ ಜನರ ಪರವಾಗಿರುವ ಸರ್ಕಾರವಾಗಿದೆ. ಇದು ಯಾವುದೋ ಕಾಂಗ್ರೆಸ್, ಜೆಡಿಎಸ್‍ನಂತೆ ಪ್ರೈವೇಟ್‌ ಕಂಪನಿ ಥರಾ ಅಲ್ಲ. ನಮ್ಮಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಕುಟುಂಬಕ್ಕಷ್ಟೇ ಅಧಿಕಾರವಿರುತ್ತದೆ. ಸೋನಿಯಾ ಗಾಂಧಿ ಕಂಪನಿ, ರಾಹುಲ್ ಗಾಂಧಿ ಕಂಪನಿ, ಪ್ರಿಯಾಂಕಾ ಗಾಂಧಿ ಕಂಪನಿಯಿದೆ. ರಾಮನಗರದಲ್ಲಿ ಒಂದು ಕುಮಾರಸ್ವಾಮಿ ಒಂದು ಕಂಪನಿಯಿದೆ. ಈ ಸಮಾಜದಲ್ಲಿ ಯಾವುದಾದರೂ ಅರ್ಥ ಇಲ್ಲದೆ ಇರುವ ಪಕ್ಷಗಳು ಅಂದರೆ ಇವುಗಳೇ ಆಗಿವೆ ಎಂದು ಟೀಕಿಸಿದರು. ಇದನ್ನೂ ಓದಿ: ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ

ಬರುವ ಚುನಾವಣೆಯಲ್ಲಿ ರಾಮನಗರದಲ್ಲಿ ನಾವು ಮೆಜಾರಿಟಿನೇ ತೆಗೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಲ್ಲಿ ಎಲ್ಲ ಥರ ಇದ್ದಾರೆ, ಬಂಡೆ ಜೊತೆ ಕುಮಾರಸ್ವಾಮಿನೂ ಇದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ

Live Tv 

Leave a Reply

Your email address will not be published.

Back to top button