ಡಿಕೆಶಿಗೆ ಜೈಲಿಗೆ ಹೋಗುವ ಭಯ ಬಂದಿದೆ, ಅದಕ್ಕೆ ಕೇಸ್ ವಾಪಸ್ ಪಡೆದಿದ್ದಾರೆ: ಅಶ್ವಥ್ ನಾರಾಯಣ

Public TV
1 Min Read
ASHWATH NARAYAN DK SHIVAKUMAR

ಬೆಂಗಳೂರು: ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಜೈಲಿಗೆ ಹೋಗುವ ಭಯ ಬಂದಿದೆ. ಹೀಗಾಗಿ ಸರ್ಕಾರವು ಸಿಬಿಐ (CBI) ಕೇಸ್ ವಾಪಸ್ ಪಡೆದಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ಗೆ ಜೈಲಿಗೆ ಹೋಗೋ ಭಯ ಬಂದಿದೆ. ಅದಕ್ಕೆ ಕೇಸ್ ವಾಪಸ್ ಪಡೆದ್ದಾರೆ. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳೋಕೆ ಕೇಸ್ ವಾಪಸ್ ಪಡೆಯಲಾಗಿದೆ. ಈಗಾಗಲೇ ಸಿಬಿಐ ವಿಚಾರಣೆ ಬಹುತೇಕ ‌ಮುಗಿಸಿದೆ. ಈ ಸಮಯದಲ್ಲಿ ಕೇಸ್ ಯಾಕೆ ವಾಪಸ್ ತೆಗೆದುಕೊಂಡರು. ಇದನ್ನ‌ ಬಿಜೆಪಿ ಖಂಡಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಮುಂದುವರಿಸಲು ಆಗಲ್ಲ: ಪರಮೇಶ್ವರ್

DK SHIVAKUMAR 1 1

ಸದನದ ಒಳಗೆ- ಹೊರಗೆ ಬಿಜೆಪಿ ಹೋರಾಟ‌ ಮಾಡುತ್ತದೆ. ಜನರು 135 ಸೀಟು ಕೊಟ್ಟಿದ್ದಾರೆ ಅಂತ ಇವರು ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ತಪ್ಪು ನಿರ್ಣಯ ಮಾಡಿದ್ದರೆ, ಇವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕಿತ್ತು. ಆದರೆ ಯಾಕೆ ಅವರು ಅದನ್ನ ಮಾಡಿಲ್ಲ. ಡಿ.ಕೆ.ಶಿವಕುಮಾರ್ ತಮ್ಮ ಸ್ವಾರ್ಥಕ್ಕಾಗಿ ಕಾನೂನು, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಡಿ.ಕೆ.ಶಿವಕುಮಾರ್ ಸಿಕ್ಕಿ ಹಾಕಿಕೊಳ್ಳುವ ಕಾಲ ಬಂದಿದೆ. ಇದರಿಂದ ಬಚಾವ್ ಆಗುವುದಕ್ಕೆ ಈಗ ಕೇಸ್ ವಾಪಸ್ ಪಡೆದಿದ್ದಾರೆ. ಈ ಸರ್ಕಾರದಲ್ಲಿ ಇರುವವರೆಲ್ಲ ಸ್ಕ್ಯಾಂಡಲ್‌ನಲ್ಲಿ ‌ಇರೋರೆ. ಒಂದಿಲ್ಲೊಂದು ಹಗರಣದಲ್ಲಿ ಇದ್ದಾರೆ. ಶಿಕ್ಷೆ ಆಗುತ್ತೆ ಅಂತ ಡಿಕೆಶಿಗೆ ಭಯ ಆಗಿದೆ. ನ್ಯಾಯಾಲಯವೇ ಇವರಿಗೆ ತಕ್ಕ ಉತ್ತರ ಕೊಡುವ ಭರವಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಮೇಲಿನ CBI ಕೇಸ್‌ ಅನುಮತಿ ವಾಪಸಿಗೆ ನಿರ್ಧಾರ – ವಿಜಯೇಂದ್ರ ಕಿಡಿ

Share This Article