– ಭ್ರಷ್ಟ ಕಾಂಗ್ರೆಸ್ ಅಭಿವೃದ್ಧಿ ಮಾಡದೇ ಗೆದ್ದಿದೆ
– `ಕೈ’ಗೆ ತಾತ್ಕಾಲಿಕ ಸಂತೋಷ
ಬೆಂಗಳೂರು: ಭ್ರಷ್ಟ ಕಾಂಗ್ರೆಸ್ (Congress) ಅಭಿವೃದ್ಧಿ ಮಾಡದೇ ಉಪಚುನಾವಣೆಯಲ್ಲಿ (By Election) ಗೆದ್ದಿದೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಬೆಂಗಳೂರಿನಲ್ಲಿ `ಪಬ್ಲಿಕ್ ಟಿವಿ’ ಜೊತೆ ಅವರು ಮಾತನಾಡಿದರು. ಈ ವೇಳೆ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರಬಹುದು. ಆದರೆ ಸಂಪೂರ್ಣ ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ ಎಂದಿದ್ದಾರೆ.
Advertisement
ಚನ್ನಪಟ್ಟಣ (Channapatna) ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಸ್ವಂತ ಬಲದಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಯೋಗೇಶ್ವರ್ (C.P Yogeshwar) ಅವರಿಂದ ಕಾಂಗ್ರೆಸ್ ಗೆಲುವು ಕಂಡಿದೆ. ಕಾಂಗ್ರೆಸ್‍ಗೆ ತಾತ್ಕಾಲಿಕ ಸಂತೋಷ ಸಿಕ್ಕಿದೆ. ಅಲ್ಲಿ ಅವರ ಪರವಾದ ಅಲೆ ಇತ್ತು. ನಾವೂ ಸಹ ಯೋಗೇಶ್ವರ್ ಅವರಿಗೆ ಸೀಟು ಕೊಡಿಸುವ ಪ್ರಯತ್ನ ಮಾಡಿದ್ವಿ. ಜೆಡಿಎಸ್‍ನಿಂದಲೂ ಅವರಿಗೆ ಆಹ್ವಾನ ಕೊಟ್ಟಿದ್ದರು. ಕಾಂಗ್ರೆಸ್‍ನಿಂದ ಗೆದ್ದು ಅವರು ಶಾಸಕರಾಗಿರಬಹುದು, ಬಿಜೆಪಿಯಲ್ಲಿ ಇದ್ದಿದ್ದರೆ (BJP) ಲೀಡರ್ ಆಗಿರುತ್ತಿದ್ದರು ಎಂದಿದ್ದಾರೆ.
Advertisement
Advertisement
ನಿಖಿಲ್ ಕುಮಾರಸ್ವಾಮಿಯವರಿಗೆ ಸೋಲಾಗಿದ್ದರೂ ಸಹ ಒಬ್ಬ ನಾಯಕರಾಗಿ ಬೆಳೆದಿದ್ದಾರೆ. ಇನ್ನೂ ಶಿಗ್ಗಾಂವಿಯಲ್ಲಿ ಎಲ್ಲಾ ವಿರೋಧಿ ಬಣಗಳು ಒಂದಾಗಿದ್ದಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ.
ಯೋಗೇಶ್ವರ್ 25,357 ಮತಗಳಿಂದ ಗೆಲುವು ದಾಖಲಿಸಿದ್ದಾರೆ. 20 ಸುತ್ತುಗಳ ಮತ ಎಣಿಕೆಯ ನಂತರ ಯೋಗೇಶ್ವರ್ 1,12,388 ಮತಗಳನ್ನು ಪಡೆದರೆ ನಿಖಿಲ್ ಕುಮಾರಸ್ವಾಮಿ 87,031 ಮತಗಳನ್ನು ಪಡೆದಿದ್ದಾರೆ.