DistrictsKarnatakaLatestMain PostRamanagara

ಡಿಕೆ ಸಹೋದರರು ಚಿತ್ರಾನ್ನ ಗಿರಾಕಿಗಳು: ಅಶ್ವಥ್ ನಾರಾಯಣ

Advertisements

ಬೆಂಗಳೂರು: ಡಿಕೆ ಸಹೋದರರು ಚಿತ್ರಾನ್ನ ಗಿರಾಕಿಗಳು ಹಾಗೂ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮವಾಗುವ ಪಕ್ಷವಾಗಲಿದೆ ಎಂದು ಸಚಿವ ಅಶ್ವಥ್ ನಾರಾಯಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಾಗಡಿಯ ಚಿಕ್ಕಕಲ್ಯಾ ಗ್ರಾಮದಲ್ಲಿ ಮಾತನಾಡಿದ ಅವರು, ಅಣ್ಣ, ತಮ್ಮ ಸೂಟ್ ಹೊಲಿಸಿಕೊಂಡು ನಿರಾಸೆಯಾಗಿದ್ದಾರೆ. ಪಾಪ ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಬದುಕುತ್ತಿದ್ದಾರೆ. ಆದರೆ ಜನರಿಗಾಗಿ ನಾವು ಬದುಕಿದ್ದೇವೆ ಎಂದ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದಿದ್ದರು. ಆದರೆ 5 ವರ್ಷ ಅಧಿಕಾರದ ರುಚಿ ನೋಡಿದರು. ಅಷ್ಟೇ ಅಲ್ಲದೇ ಮರಳು ದಂಧೆ ಸೇರಿ ಅನೇಕ ಅಕ್ರಮಗಳನ್ನು ಮಾಡಿದ್ದಾರೆ. ಆದರೂ ಇನ್ನೂ ಅಧಿಕಾರದ ಆಸೆಯಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೂ ಅವಕಾಶ ಇಲ್ಲ. ಒಬ್ಬರೇ ನಾಯಕ ಸಿದ್ದರಾಮಯ್ಯರಾಗಿದ್ದಾರೆ. ಡಿಕೆ ಸಹೋದರರು ಚಿತ್ರಾನ್ನ ಗಿರಾಕಿಗಳು. ಹೀಗೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ, ಎಲ್ಲರೂ ಬಿಟ್ಟುಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಸಹ ಆ ಪಕ್ಷದಲ್ಲಿ ಇರುವುದಿಲ್ಲ ಎಂದರು.

ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಮಾಡಲು ಹುಡುಕುತ್ತಿರುವ ಪರಿಸ್ಥಿತಿಯಿದೆ. ಕಾಂಗ್ರೆಸ್‍ನಲ್ಲಿ ಕೇವಲ ಅವರ, ಅವರ ಮನೆಯವರ ಅಭಿವೃದ್ಧಿ ಮಾತ್ರ ಮುಖ್ಯವಾಗಿದೆ. ಸ್ವಯಂ ಅಭ್ಯರ್ಥಿ ಎಂದರೆ ಕಾಂಗ್ರೆಸ್ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ನಾಯಕರೆಲ್ಲರೂ ಸಿದ್ದರಾಮಯ್ಯ ಕಾರ್ಯಕ್ರಮ ಮಾಡ್ಬೇಕಾ ಬೇಡ್ವಾ. ಪಂಚೆ ಎಳಿಬೇಕಾ, ಕೂರಿಸಬೇಕಾ ಎಂಬ ಚರ್ಚೆಯಲ್ಲೇ ಇದೆ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಖರ್ಗೆ ಹೀಗೆ ಚರ್ಚೆ, ಗುದ್ದಾಟ ಇದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿದ್ದರಾಮೋತ್ಸವದ ನಂತರ ಸಿದ್ದರಾಮಯ್ಯ ಕೇವಲ ಉತ್ಸವಮೂರ್ತಿಯಾಗಿಯೇ ಉಳೀಬೇಕಾಗುತ್ತೆ: ಶ್ರೀರಾಮುಲು

ನಾನು ಅಧಿಕಾರ ಹುಡುಕಿಕೊಂಡು ಹೋಗುವ ವ್ಯಕ್ತಿ ಅಲ್ಲ. ಯಾವುದರ ಹಿಂದೆಯೂ ಓಡಬಾರದು, ಏನು ಕೊಟ್ಟರು ಕೆಲಸ ಮಾಡುತ್ತೇನೆ. ನಾನು ಹಿಂದೆಯಿಂದ ಚೂರಿ, ಚಾಕು ಹಾಕುವ ಕೆಲಸ ಮಾಡುವ ವ್ಯಕ್ತಿ ಅಲ್ಲ. ಅಷ್ಟೇ ಅಲ್ಲದೇ ನಾನು ಸಿಎಂ ಆಗುವ ಆತಂಕ ಕಾಂಗ್ರೆಸ್‍ನವರಿಗಿದ್ದರೆ ನಾನೇನು ಮಾಡೋಕಾಗಲ್ಲ ವ್ಯಂಗ್ಯವಾಡಿದರು. ಇದನ್ನೂ ಓದಿ: ಎರಡು ತಿಂಗಳಲ್ಲಿ 27 ಸಾವಿರ ಟ್ರಾನ್ಸ್‌ ಫಾರ್ಮರ್ ನಿರ್ವಹಣೆ ಮಾಡಿದ ಬೆಸ್ಕಾಂ

Live Tv

Leave a Reply

Your email address will not be published.

Back to top button