ಚಿಕ್ಕೋಡಿ: `ಕುಲಪತಿ (Vice Chancellor) ಹುದ್ದೆಗಳಿಗೆ ಕೋಟಿ ಕೋಟಿ ಹಣ ಕೊಡಬೇಕಾಗಿದೆ’ ಎನ್ನುವ ಸಂಸದ ಪ್ರತಾಪ್‌ಸಿಂಹ (Pratap Simha) ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (CN Ashwath Narayan) ಅವರು, ಆರೋಪವನ್ನು ಕಾಂಗ್ರೆಸ್ (Congress) ಕಡೆಗೆ ಹೊರಿಸಿದ್ದಾರೆ.
Advertisement
ಬೆಳಗಾವಿಯಲ್ಲಿ (Belagavi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಲಪತಿ ಹುದ್ದೆಗೆ ಹಣ ನೀಡಬೇಕು ಎಂದು ಪ್ರತಾಪ್‌ಸಿಂಹ ಹೇಳಿರೋದು ಕಾಂಗ್ರೆಸ್ ಕಾಲದ ಬಗ್ಗೆ. ಭ್ರಷ್ಟಾಚಾರದ ಬಗ್ಗೆ ಕೆಪಿಸಿಸಿ (KPCC) ಅಧ್ಯಕ್ಷರೇ ಮಾತನಾಡಿದ್ದಾರಲ್ಲ, ಅದೇ ಖುಷಿಯ ವಿಚಾರ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯನ್ನ ಕಾಂಗ್ರೆಸ್ ನಂಬಬೇಕು – ಪ್ರಹ್ಲಾದ್ ಜೋಶಿ
Advertisement
Advertisement
ಕಾಂಗ್ರೆಸ್ ಪಕ್ಷ ಅಂದ್ರೆ ಅದು ಭ್ರಷ್ಟಾಚಾರದ ಪಕ್ಷ. ಆದ್ರೆ ನಮ್ಮ ಪಕ್ಷ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವ ಪ್ರಮೇಯವೇ ಇಲ್ಲ. ಆಧಾರ ಇಟ್ಕೊಂಡು ಮಾತಾಡಿ ಜವಾಬ್ದಾರಿಯನ್ನು ಮೆರೆಯಲಿ. ನಾನಾಗಲಿ, ನಮ್ಮ ಇಲಾಖೆಯಾಗಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷ.. ಹಳೇ ವೈರಸ್; ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ – ಭಾರತದ ಕಥೆ ಏನು?
Advertisement
ವಿಪಕ್ಷ ಯಾತ್ರೆಗಳ ವೇಳೆ ಕೋವಿಡ್ ಬರುತ್ತೆ ಅನ್ನೋ ಡಿಕೆಶಿ (DK Shivakumar) ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಇಷ್ಟು ದಿನ ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ರು. ನಾವ್ ಎನಾದ್ರೂ ಕೇಳಿದ್ವಾ? ನಮಗೆ ಕಾನೂನು ಪಾಲನೆ ಮುಖ್ಯ ಅಷ್ಟೆ. ಹಾಗೆಯೇ ಡಿಕೆಶಿ ಅವರು ಹೇಳಿದಂತೆ ಕೋವಿಡ್ ಕಾರಣ ಇಟ್ಟುಕೊಂಡು ಶೀಘ್ರ ಚುನಾವಣೆ ಮಾಡುವ ಉದ್ದೇಶ ಸರ್ಕಾರ ಹೊಂದಿಲ್ಲ. ಅವರೇ ಚುನಾವಣಾ ಆಯೋಗ ಆಗಿದ್ರೆ ಶೀಘ್ರ ದಿನಾಂಕ ಘೋಷಿಸಲು ಹೇಳಿ ಎಂದು ಟಾಂಗ್ ನೀಡಿದ್ದಾರೆ.