ಮಂಡ್ಯ: ಡಿ.ಕೆ.ಶಿವಕುಮಾರ್‌ಗಿಂತ (D.K.Shivakumar) ಫೈಟರ್ ರವಿ (Fighter Ravi) ಹೆಚ್ಚಾ? ಕಮ್ಮಿನಾ ಜಾಸ್ತಿನಾ ಎಂದು ಪ್ರಶ್ನಿಸುವ ಮೂಲಕ ಡಿಕೆಶಿಗೆ ಸಚಿವ ಅಶ್ವಥ್ ನಾರಾಯಣ್ (Ashwath Narayan) ಟಾಂಗ್ ಕೊಟ್ಟರು. ಆ ಮೂಲಕ ರೌಡಿಶೀಟರ್‌ಗೆ ಮೋದಿ (Narendra Modi) ನಮಸ್ಕರಿಸಿದ್ದನ್ನು ಸಮರ್ಥಿಸಿಕೊಂಡರು.
ಮಂಡ್ಯದ (Mandya) ಕೆ.ಆರ್.ಪೇಟೆಯಲ್ಲಿ (K.R.Pet) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಚರ್ಚೆಗಳು ಬೇಡ. ಕೆಲವು ಸಂದರ್ಭದಲ್ಲಿ ತಪ್ಪು ಆಗಿರುತ್ತದೆ. ಇವತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ತಿದ್ದಾರೆ. ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಅವಕಾಶ ಇದೆ. ಸಮಾಜ, ಕಾನೂನು, ಸಂವಿಧಾನದಲ್ಲಿ ಅವಕಾಶ ಇದೆ. ಅವರ ಜೀವನ ಸಂಪೂರ್ಣ ಸುಧಾರಣೆ ಆಗಿದೆ. ಒಮ್ಮೆ ಮಾಡಿದ ತಪ್ಪನ್ನೇ ಜೀವನ ಪೂರ್ತಿ ಹೇಳುತ್ತಿದ್ದರೆ ಪರಿವರ್ತನೆ ಸಾಧ್ಯವಿಲ್ಲ. ಮತ್ತೆ ಮತ್ತೆ ಆತ ಬದುಕಲು ಯೋಗ್ಯವಿಲ್ಲ ಅನ್ನೋ ರೀತಿಯಲ್ಲಿ ಬಿಂಬಿಸಬಾರದು ಎಂದು ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಆಜಾನ್ ಹೇಳಿಕೆ ವಿರುದ್ಧ ಎಷ್ಟೇ ಪ್ರತಿರೋಧ ಬಂದ್ರೂ ನಾನು ಜನ ಸಾಮಾನ್ಯನ ನೋವು ಹೇಳೋನೆ: ಈಶ್ವರಪ್ಪ
Advertisement
Advertisement
ಇತಿಹಾಸದಲ್ಲಿ ಉರಿಗೌಡ, ನಂಜೇಗೌಡರು ಇದ್ದರು ಎಂಬ ಸಂಪೂರ್ಣ ನಂಬಿಕೆ ನಮ್ಮದು. ಹೀಗಾಗಿ ನಮಗೆ ಉರಿಗೌಡ, ನಂಜೇಗೌಡರ ಮೇಲೆ ಅಭಿಮಾನವಿದೆ. ಅವರಿಬ್ಬರೂ ನರಹಂತಕ, ಮತಾಂಧನಾಗಿದ್ದ ಟಿಪ್ಪುವಿನಿಂದ (Tipu Sultan) ಮೈಸೂರು (Mysuru) ಪ್ರಾಂತ್ಯದ ಜನರನ್ನು ರಕ್ಷಣೆ ಮಾಡಿರುವುದು ನಮಗೆ ಹೆಮ್ಮೆ. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಅವರ ರಕ್ಷಣೆಯಲ್ಲಿ ಇವರಿದ್ದರು. ಹೀಗಾಗಿ ನಾವು ಇವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್‌ನವರಿಗೆ ಈ ಬಗ್ಗೆ ಅಭ್ಯಂತರವಿದ್ದರೆ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪ್ರಧಾನಿ ಉದ್ಘಾಟಿಸಿದ ಮೈಸೂರು-ಬೆಂಗಳೂರು ಹೈವೇ ಈಗಾಗ್ಲೇ ಕಿತ್ತು ಹೋಗಿದೆ: ಬಿ.ಕೆ ಹರಿಪ್ರಸಾದ್
Advertisement
ಕೇವಲ ಚುನಾವಣೆ ಇಟ್ಟುಕೊಂಡು ಮತಕ್ಕಾಗಿ ಕೀಳು ಮಟ್ಟಕ್ಕೆ ಇಳಿಯುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ, ನಮ್ಮ ಅಭಿಮಾನ. ನಾವು ರಾಜಕೀಯಕ್ಕಾಗಿ ಏನನ್ನೂ ಮಾಡುವುದಿಲ್ಲ. ಜನರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ ಅಥವಾ ಟಿಪ್ಪು ಬೇಕಾ? ಕಾಂಗ್ರೆಸ್ ಪಕ್ಷದವರು ವಿಶ್ವಕಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪು ಮಾಡಿಕೊಳ್ಳಬೇಕು. ಯಾಕೋ ಗೊತ್ತಿಲ್ಲ, ಕಾಂಗ್ರೆಸ್‌ನವರಿಗೆ ಟಿಪ್ಪು ಸುಲ್ತಾನ್ ನೆನಪಾಗುತ್ತಾನೆ. ಮತದಾರ ಪ್ರಭುಗಳು ಜಾಗರೂಕತೆಯಿಂದ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: 2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ: ಕಾರಜೋಳ
Advertisement
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಾವರ್ಕರ್ ನಮ್ಮ ಹೆಮ್ಮೆ. ಅಂತಹ ಪರಿಸ್ಥಿತಿಯಲ್ಲಿ ಈಗಿನ ಒಬ್ಬ ರಾಜಕಾರಣಿ ಒಂದು ದಿನ ಅಂಡಮಾನ್‌ನಲ್ಲಿರಲಿ. ಇವರ ತ್ಯಾಗ, ಬಲಿದಾನ, ಶೌರ್ಯ, ಪರಾಕ್ರಮ, ಸಾಮಾಜಿಕ ಕಾಳಜಿ ಸೇರಿದಂತೆ ಎಲ್ಲಾ ವ್ಯಕ್ತಿತ್ವ ಗೊತ್ತಾಗುತ್ತದೆ. ಮಹಾನ್ ಪುರುಷರ ಬಗ್ಗೆ ಹೇಳುವವನು ತಮ್ಮ ಕಾರ್ಯಗಳ ಬಗ್ಗೆ ನೋಡಬೇಕು. ಸಿದ್ದರಾಮಯ್ಯ ಯಾವತ್ತೂ ತಮ್ಮ ಆಡಳಿತ, ಅಭಿವೃದ್ಧಿಯ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಕೇವಲ ಈ ಭಾಗ್ಯ ಕೊಟ್ಟೆ, ಆ ಭಾಗ್ಯ ಕೊಟ್ಟೆ ಎನ್ನುತ್ತಾರೆ. ಇವರಿಗಿಂತ ಚನ್ನಾಗಿ ನಮ್ಮ ಸರ್ಕಾರದಲ್ಲಿ ಭಾಗ್ಯಗಳನ್ನು ಕೊಟ್ಟಿದ್ದೇವೆ. ಭ್ರಷ್ಟಾಚಾರದಲ್ಲಿ ಇದ್ದವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇನ್ನಿತರರು. ಭ್ರಷ್ಟಾಚಾರದ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಹರಿಹಾಯ್ದರು. ಇದನ್ನೂ ಓದಿ: ರಸ್ತೆ ಮಧ್ಯೆಯೇ ಯಡಿಯೂರಪ್ಪರನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು
ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಮತವಿಲ್ಲ. ಸೋಮಣ್ಣನಾಗಲಿ ಯಾರಾಗಲಿ ಯಾವುದೇ ಭಿನ್ನಮತವಿಲ್ಲ. ಕಾಂಗ್ರೆಸ್‌ನವರು ಅವರಿಗೆ ಅರ್ಜಿ ಹಾಕಿ ರಿಜೆಕ್ಟ್ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಚಿಂತಾಜನಕವಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ನಾಯಕರಿಗೆ ಇಡೀ ದೇಶ ಹಾಗೂ ಕರ್ನಾಟಕದಲ್ಲಿ ಭವಿಷ್ಯವಿಲ್ಲ. ಇವರು ಇನ್ಯಾರಿಗೆ ಭವಿಷ್ಯ ಕೊಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬ್ರಿಟಿಷರಿಂದ ಟಿಪ್ಪು ಮಕ್ಕಳು ಪಿಂಚಣಿ ಪಡೆಯುತ್ತಿದ್ದರು- ಬಿಜೆಪಿ
ಕಾಂಗ್ರೆಸ್ ಪಕ್ಷವನ್ನು ಸಿ.ಡಿ ಪಾರ್ಟಿ ಎಂದೇ ಕರೆಯುವುದು. ಇವರ ಬ್ಲ್ಯಾಕ್‌ಮೇಲ್ ಎಲ್ಲಾ ಇಲ್ಲಿ ವರ್ಕೌಟ್ ಆಗುವುದಿಲ್ಲ. ಜನ ಇವರಿಗೆ 5 ರೂಪಾಯಿಯ ಕಿಮ್ಮತ್ತು ಕೊಡುವುದಿಲ್ಲ. ಅವರು ಏನಾದರು ಇಟ್ಟುಕೊಂಡಿದ್ದರೆ ಅದನ್ನು ರಿಲೀಸ್ ಮಾಡಲಿ. ಪಾಪ ಯಾಕೆ ಸ್ಟಾಕ್ ಇಟ್ಟುಕೊಂಡಿದ್ದಾರೆ? ಈ ಸಿ.ಡಿ ಪಾರ್ಟಿಯ ಬ್ಲ್ಯಾಕ್‌ಮೇಲ್ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೆಲ್ಲಾ ಔಟ್‌ಲೆಟ್ ಎಂದು ಹೇಳಿದರು. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಹೆಣ್ಣಿನ ರೂಪವಷ್ಟೇ, ಅವರ ಗುಣಗಳೇ ಬೇರೆ: ರಮೇಶ್ ಜಾರಕಿಹೊಳಿ
ರಾಮನಗರದಲ್ಲಿ (Ramanagara) ರಾಮಮಂದಿರದ ಭೂಮಿಪೂಜೆ ವಿಚಾರವಾಗಿ ಮಾತನಾಡಿದ ಅವರು, ಭೂಮಿಪೂಜೆ ಮಾಡಬೇಕು ಅಂದುಕೊಂಡಿದ್ದೇವೆ. ಡಿಪಿಆರ್ ಇನ್ನೂ ಸಿದ್ಧವಾಗುತ್ತಿದೆ. ಡಿಪಿಆರ್ ಸಿದ್ಧವಾದ ಕೂಡಲೇ ಭೂಮಿಪೂಜೆ ಮಾಡುವುದೆಂದು ನಿರ್ಧರಿಸಿದೆ. ಚುನಾವಣೆ ನೀತಿ ಸಂಹಿತೆ ಮುಂಚೆಯೇ ಪೂಜೆ ಮಾಡಬೇಕು ಎಂದುಕೊಂಡಿದ್ದೆ. ಭೂಮಿ ಪೂಜೆ ಮಾಡಲು ನಮ್ಮ ಪಕ್ಷ ಉತ್ಸುಕವಾಗಿದೆ. ಭೂಮಿಪೂಜೆ ಕಾರ್ಯಕ್ರಮವನ್ನು ಸಿಎಂ ರೂಪುರೇಷೆ ಮಾಡುತ್ತಾರೆ. ಯಾರನ್ನು ಆಹ್ವಾನ ಮಾಡಬೇಕು ಎಂದು ಅವರು ನಿರ್ಧಾರಿಸುತ್ತಾರೆ. 19 ರಂದು ರಾಮನಗರದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ ಅಷ್ಟೇ. ಇನ್ನೂ ರಾಮಮಂದಿರದ ಭೂಮಿಪೂಜೆ ನಿಗದಿಯಾಗಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಚುನಾವಣೆ ಬಂದ್ರೆ ಕುರುಡುಮಲೆ ವಿನಾಯಕನಿಗೆ ಎಲ್ಲಿಲ್ಲದ ಬೇಡಿಕೆ