ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಕಡೆಗೂ ತಮ್ಮನ್ನು ಕೆಣಕಿದ ಸಚಿವರೊಬ್ಬರ ವಿರುದ್ಧ ವಿಧಾನಸಭೆ (Vidhanasabha) ಯಲ್ಲಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath Narayan) ಅವರು ಡಿಸಿಎಂ ಆಗಿದ್ದ ಸಂದರ್ಭದಲ್ಲಿ ಬಿಎಂಎಸ್ ಸಾರ್ವಜನಿಕ ಟ್ರಸ್ಟ್ ಅನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸಿದ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಯಾವ ತನಿಖೆ ಮಾಡಿಸ್ತೀರಿ ಎಂದು ಹೇಳಬೇಕು. ಈ ಕೂಡ್ಲೇ ಅಶ್ವಥ್ ನಾರಾಯಣ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: PayCM ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ – ನಳಿನ್ ಕುಮಾರ್ ಕಟೀಲ್ ತಿರುಗೇಟು
Advertisement
Advertisement
ಇದಕ್ಕೆ ಏರುದನಿಯಲ್ಲಿ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಎಜಿ ಸಲಹೆ ಪಡೆದೆ ಈ ವಿಚಾರದಲ್ಲಿ ಮುಂದುವರಿದಿದ್ದು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಗುಡುಗಿದ್ದಾರೆ. ಇದು 5000 ಕೋಟಿ, 10ಸಾವಿರ ಕೋಟಿ ಮೌಲ್ಯ ಅಂತಾರೆ. ಇದೆಲ್ಲ ಎಜುಕೇಶನ್ ಟ್ರಸ್ಟ್ ನ ಆಸ್ತಿ, ಈ ದುಡ್ಡಲ್ಲಿ ಯಾವ ಮಾಲ್ ಕಟ್ಟೋಕು ಆಗಲ್ಲ. ಶೋಕಿ ಮಾಡೋಕು ಆಗಲ್ಲ. ನಾವು ಕುಟುಂಬ ರಾಜಕೀಯ ಮಾಡ್ತಿಲ್ಲ. ಮನೆ ಹಾಳು ಮಾಡೋರಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದವರ ಬಂಧನವೇಕಿಲ್ಲ?: ದಿನೇಶ್ ಗುಂಡೂರಾವ್
Advertisement
Advertisement
ಈ ಸಂದರ್ಭದಲ್ಲಿ ಇಬ್ಬರ ನಡ್ವೆ ಯೋಗ್ಯತೆ ಕುರಿತಾಗಿ ಜೋರು ವಾಗ್ವಾದ ನಡೆದಿದೆ. ಅಶ್ವಥ್ ನಾರಾಯಣ್ ರಾಜೀನಾಮೆಗೆ ಒತ್ತಾಯಿಸಿ ಜೆಡಿಎಸ್ (JDS) ಶಾಸಕರು ಗದ್ದಲ ಎಬ್ಬಿಸಿದ್ದಾರೆ. ಪ್ರಕರಣವನ್ನು ತನಿಖೆಗೆ ವಹಿಸುವಂತೆ ಆಗ್ರಹಿಸಿ ಆಹೋರಾತ್ರಿ ಧರಣಿಗೆ ಜೆಡಿಎಸ್ ಶಾಸಕರು ಮುಂದಾಗಿದ್ದಾರೆ.