ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಮೇಲೆ ಪಿಎಸ್‍ಐ ಆಕ್ರಮದ ತೂಗುಗತ್ತಿ ಇದೆ. ಅಶ್ವತ್ಥ ನಾರಾಯಣ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೇಮಕಾತಿಯಲ್ಲಿ 5ನೇ ರ‍್ಯಾಂಕ್ ಪಡೆದಿರುವ ದರ್ಶನ್ ಗೌಡ, 10ನೇ ರ‍್ಯಾಂಕ್ ಪಡೆದಿರುವ ನಾಗೇಶ್ ಗೌಡ ಇಬ್ಬರು ಅಶ್ವತ್ಥ ನಾರಾಯಣ್ ಅವರ ಸಂಬಂಧಿಕರು. ಇದರಲ್ಲಿ ಅಶ್ವತ್ಥ ನಾರಾಯಣ್ ಕೈವಾಡ ಇರೋದು ಸ್ಪಷ್ಟವಾಗಿದೆ ಎಂದು ನೇರವಾಗಿ ಆರೋಪಿಸಿದರು. ಮೈಸೂರಲ್ಲಿ ಪ್ರೊ.ನಾಗರಾಜ್ ಅರೆಸ್ಟ್ ಮಾಡಿದ್ದಾರೆ. ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವರನ್ನು ಕೂಡಲೇ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನಾನು ಧರಣಿ ಕುಳಿತರು ಸ್ಥಳಕ್ಕೆ ಡಿಸಿ ಬರಲಿಲ್ಲ, ನಾನೇನು ದನಕಾಯೋನ: ಹೆಚ್‍ಡಿ.ರೇವಣ್ಣ
Advertisement
Advertisement
ದರ್ಶನ್ ಗೌಡ 5ನೇ ರ‍್ಯಾಂಕ್, ಫಸ್ಟ್ ಪೇಪರ್‌ನಲ್ಲಿ 50 ಮಾರ್ಕ ಗೆ 19 ಬಂದಿದೆ. ಎರಡನೇ ಪೇಪರ್‌ನಲ್ಲಿ ಟಿಕ್ ಮಾಡುವುದರಲ್ಲಿ 150ಕ್ಕೆ 141 ಮಾರ್ಕ್ಸ್ ಬಂದಿದೆ. ನಾಗೇಶ್ ಗೌಡರಿಗೆ 10ನೇ ರ‍್ಯಾಂಕ್, ಮೊದಲ ಪೇಪರ್‌ನಲ್ಲಿ 29.05, ಎರಡನೇಯ ಪೇಪರ್‌ನಲ್ಲಿ 127 ಮಾರ್ಕ್ಸ್ ಬಂದಿದೆ. ಇವರಿಬ್ಬರು ಅಶ್ವತ್ಥ ನಾರಾಯಣ್ ಸಂಬಂಧಿಕರು ಎಂದು ಒತ್ತಿ ಹೇಳಿದರು.
Advertisement
Advertisement
ಸಚಿವರ ಸಹಾಯ ಇಲ್ಲದೆ ಇದೆಲ್ಲ ಆಗುತ್ತಾ? ದರ್ಶನ್ ಗೌಡ, ನಾಗೇಶ್ ಗೌಡ ಇಬ್ಬರನ್ನು ವಿಚಾರಣೆಗೆ ಕರೆದು, ಬಿಟ್ಟು ಕಳುಹಿಸಿದ್ದಾರೆ. ಏಕೆ ಇವರನ್ನು ಅರೆಸ್ಟ್ ಮಾಡಿಲ್ಲ? ಸಾಕ್ಷಿ ಇಲ್ಲದೆ ಹೇಗೆ ನೋಟೀಸ್ ಕೊಟ್ಟರು? ಎಂದು ಖಾರವಾಗಿ ಪ್ರಶ್ನಿಸಿದರು. ಸಾಕ್ಷಿಯನ್ನು ಫೋಟೋ ಹೊಡೆದು ತಂದು ತೋರಿಸಲು ಆಗಲ್ಲ. ಇದರಲ್ಲಿ ಅಶ್ವತ್ಥ ನಾರಾಯಣ್ ಸಂಪೂರ್ಣ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ನುಡಿಸುವುದು ಒಂದು ದಿನದ ವಿಷಯವಲ್ಲ, ಅದು ಮುಂದುವರಿಯಬೇಕು: ರಾಜ್ ಠಾಕ್ರೆ