Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ತಣ್ಣಗಿನ ನಿರೂಪಣೆಯೊಂದಿಗೆ ಹೊಸತನದ ಅಚ್ಚೊತ್ತುವ `ಅಳಿದು ಉಳಿದವರು’!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ತಣ್ಣಗಿನ ನಿರೂಪಣೆಯೊಂದಿಗೆ ಹೊಸತನದ ಅಚ್ಚೊತ್ತುವ `ಅಳಿದು ಉಳಿದವರು’!

Bengaluru City

ತಣ್ಣಗಿನ ನಿರೂಪಣೆಯೊಂದಿಗೆ ಹೊಸತನದ ಅಚ್ಚೊತ್ತುವ `ಅಳಿದು ಉಳಿದವರು’!

Public TV
Last updated: December 6, 2019 8:36 pm
Public TV
Share
3 Min Read
Alidu Ulidavaru Main
SHARE

ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಅಳಿದು ಉಳಿದವರು ಚಿತ್ರ ತನ್ನ ಶೀರ್ಷಿಕೆಯ ಮೂಲಕವೇ ಹೊಸತನದ ಕಂಪು ಹೊಮ್ಮಿಸುತ್ತಾ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಪೋಸ್ಟರ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದ ಟ್ರೇಲರ್‌ಗಳ  ಹೊರತಾಗಿ ಚಿತ್ರತಂಡ ಯಾವ ಅಬ್ಬರದ ಪ್ರಚಾರದತ್ತಲೂ ಗಮನ ಹರಿಸಿರಲಿಲ್ಲ. ಅಷ್ಟಕ್ಕೂ ಅದು ತಣ್ಣಗೆ ಹೊತ್ತಿಸಿದ್ದ ನಿರೀಕ್ಷೆಗಳ ಕಾವಿನ ಮುಂದೆ ಅದೆಲ್ಲದರ ಅವಶ್ಯಕತೆಯೂ ಬಿದ್ದಿರಲಿಲ್ಲ. ಇದೆಲ್ಲದಕ್ಕೆ ತಕ್ಕುದಾದ ರೀತಿಯಲ್ಲಿಯೇ ನಿರ್ದೇಶಕ ಅರವಿಂದ್ ಶಾಸ್ತ್ರಿ ಈ ಚಿತ್ರವನ್ನು ಕಟ್ಟಿ ಕೊಡುತ್ತದೆ. ಯಾವ ಥರದಲ್ಲಿ ಈ ಸಿನಿಮಾ ಸದ್ದು ಮಾಡಿತ್ತೋ ಅದೇ ತಣ್ಣಗಿನ ಆವೇಗವನ್ನು ಆತ್ಮವಾಗಿಸಿಕೊಂಡಂತಿರುವ ಈ ಚಿತ್ರ ಎಲ್ಲರಿಗೂ ಹಿಡಿಸುವಂತೆ ಮೂಡಿ ಬಂದು ಪ್ರೇಕ್ಷಕರನ್ನು ಮುದಗೊಳಿಸಿದೆ.

Alidu Ulidavaru B

ಇಲ್ಲಿ ನಂಬಿಕೆ ಮತ್ತು ಮೂಢ ನಂಬಿಕೆಗಳನ್ನು ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿ ಅದರ ಘರ್ಷಣೆಯಿಂದ ರೂಪುಗೊಂಡಂತಿರೋ ಕುತೂಹಲಕರವಾದ ಕಥೆಯನ್ನು ಹೇಳಲಾಗಿದೆ. ಒಂದು ಸಿನಿಮಾವನ್ನು ಮಾಮೂಲಿ ಜಾಡಿಗಿಂತ ಭಿನ್ನವಾಗಿ ರೂಪಿಸಬೇಕೆಂಬ ತುಡಿತ ಇದ್ದರೆ ಅಂಥಾ ಚಿತ್ರಗಳು ಎಲ್ಲ ರೀತಿಯಿಂದಲೂ ಡಿಫರೆಂಟೆಂಬಂತೆ ಮೂಡಿ ಬರುತ್ತವೆ. ಇಲ್ಲಿ ಪ್ರೀತಿ ಸೇರಿದಂತೆ ನಾನಾ ಛಾಯೆಯ ಕಥೆಯಿದೆ. ಆದರೆ ಎಲ್ಲಿಯೂ ಕೂಡಾ ಥ್ರಿಲ್ಲರ್ ಅಂಶಗಳನ್ನು ಬಿಟ್ಟುಕೊಡದಂಥಾ ಕಲೆಗಾರಿಕೆಯನ್ನು ನಿರ್ದೇಶಕ ಅರವಿಂದ ಶಾಸ್ತ್ರಿ ಪ್ರದರ್ಶಿಸಿದ್ದಾರೆ. ಹಾಗಂತ ಇಲ್ಲಿ ಬಿಲ್ಡಪ್ಪುಗಳಿಲ್ಲ. ಅದಿಲ್ಲದೆಯೂ ಒಂದು ದೃಷ್ಯವನ್ನು ಕಳೆಗಟ್ಟಿಸೋದು, ನೋಡುಗರನ್ನು ಕುತೂಹಲದ ಶಿಖರವೇರಿಕೊಳ್ಳುವಂತೆ ಮಾಡುವುದೆಲ್ಲ ಒಂದು ಕಲೆ. ನಿರ್ದೇಶಕರಿಲ್ಲಿ ಅದನ್ನು ಧಾರಾಳವಾಗಿಯೇ ಪ್ರದರ್ಶಿಸಿದ್ದಾರೆ. ಅಳಿದು ಉಳಿದವರ ಅಸಲಿ ಹೆಚ್ಚುಗಾರಿಕೆಯೇ ಅದು!

Alidu Ulidavaru A

ಈ ಚಿತ್ರದ ನಾಯಕನಾಗಿ ಅಶು ಬೆದ್ರ ಶೀಲಂ ಎಂಬ ನಿರೂಪಕನ ಪಾತ್ರದಲ್ಲಿ ನಟಿಸಿದ್ದಾರೆ. ಈತ ಎಲ್ಲರಿಗಿಂತಲೂ ತುಸು ಭಿನ್ನವಾದ ನಿರೂಪಕ. ಶೀಲಂ ನಂಬಿಕೆ ಮತ್ತು ಮೂಢನಂಬಿಕೆಗಳನ್ನೇ ಬೇಸ್ ಆಗಿಸಿಕೊಂಡಿರೋ ಕಾರಣ..? ಎಂಬೊಂದು ಕಾರ್ಯಕ್ರಮವನ್ನು ನಡೆಸುತ್ತಿರುತ್ತಾನೆ. ಪ್ರತೀ ಎಪಿಸೋಡಿನಲ್ಲಿಯೂ ವಿಷಯವೊಂದರ ಪಾತಾಳಗರಡಿಯಂಥಾ ವಿವರಗಳನ್ನು ಕಲೆ ಹಾಕುತ್ತಾ ಪ್ರತೀ ಎಪಿಸೋಡುಗಳಲ್ಲಿಯೂ ಆತ ದೆವ್ವ ಎಂಬುದಿಲ್ಲ ಎಂಬುದನ್ನೇ ಸಾಬೀತುಪಡಿಸುತ್ತಾ ಸಾಗುತ್ತಾನೆ. ಇದೇ ಥರದಲ್ಲಿ ತೊಬತ್ತೊಂಬತ್ತು ಎಪಿಸೋಡುಗಳನ್ನು ಪೈರೈಸಿಕೊಳ್ಳುವ ಆತನ ಮುಂದೆ ನೂರನೇ ಎಪಿಸೋಡನ್ನು ಎಲ್ಲಕ್ಕಿಂತ ವಿಶೇಷವಾಗಿ ರೂಪಿಸಬೇಕೆಂಬ ಸವಾಲು ಮೂಡಿಕೊಳ್ಳುತ್ತದೆ.

Alidu Ulidavaru 1

ಹಾಗೆ ಹುಡುಕಿ ಹೊರಡೋ ಶೀಲಂಗೆ ಪವನ್ ಕುಮಾರ್ ನಿರ್ವಹಿಸಿರುವ ಪಾತ್ರ ಎದುರಾಗುತ್ತೆ. ಆ ಪಾತ್ರ ತನ್ನ ಸೇಲಾಗದೇ ಉಳಿದ ಮನೆಯಲ್ಲಿ ದೆವ್ವವಿಲ್ಲ ಅಂತ ನಿರೂಪಿಸುವಂತೆ ಶೀಲಂಗೆ ಸವಾಲೊಡ್ಡುತ್ತೆ. ಅದನ್ನು ಸ್ವೀಕರಿಸಿ ಆ ಮನೆಗೆ ಶೀಲಂ ಕಾಲಿಡುತ್ತಲೇ ಕಥೆ ಮತ್ತಷ್ಟು ರೋಚಕ ಆಯಾಮ ಪಡೆದುಕೊಳ್ಳುತ್ತದೆ. ಅಲ್ಲಿ ಶೀಲಂಗೆ ನಿಜವಾಗಿಯೂ ದೆವ್ವದ ದರ್ಶನವಾಗುತ್ತದಾ ಎಂಬುದರಿಂದ ಹಿಡಿದು ಎಲ್ಲರನ್ನು ಕಾಡ ಬಹುದಾದ ಪ್ರತೀ ಪ್ರಶ್ನೆಇಗಳಿಗೂ ಇಲ್ಲಿ ರೋಚಕ ಉತ್ತರವಿದೆ. ವಿಶೇಷವೆಂದರೆ ಇಲ್ಲಿ ಮೂಢ ನಂಬಿಕೆಯ ವಿರುದ್ಧದ ಅಂಶಗಳನ್ನೇ ನಿರ್ದೇಶಕರು ಪ್ರಧಾನವಾಗಿಸಿಕೊಂಡಿದ್ದಾರೆ. ಇದರೊಂದಿಗೆ ನಾನಾ ಛಾಯೆಗಳಿರೋ ಗಟ್ಟಿ ಕಥೆಯನ್ನೇ ಕಟ್ಟಿ ಕೊಟ್ಟಿದ್ದಾರೆ.

Alidu Ulidavaru 2

ಸಾಮಾನ್ಯವಾಗಿ ಮನುಷ್ಯನಿಗೆ ಕಾಣಿಸೋದರ ಮೇಲಿರೋ ಕುತೂಹಲಕ್ಕಿಂತ ಕಾಣಿಸದಿರುವುದರ ಬಗ್ಗೆಯೇ ಆಸಕ್ತಿ ಹೆಚ್ಚು. ಅದುವೇ ಭ್ರಮೆಯ ರೂಪ ಧರಿಸಿ ಅದರ ಚಿಪ್ಪೊಳಗೆ ದೆವ್ವ ಭೂತಗಳಂಥವುಗಳು ನರ್ತನ ಶುರುವಿಟ್ಟುಕೊಳ್ಳುತ್ತವೆ. ಈ ಭೂಮಿಕೆಯಲ್ಲಿ ಸಿದ್ಧಗೊಂಡಿರೋ ಅಳಿದು ಉಳಿದವರು ಭರ್ಜರಿ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಇಲ್ಲಿ ಹಾಡುಗಳ ಆಡಂಬರವಿಲ್ಲ, ಸಂತದ ಅಬ್ಬರವೂ ಇಲ್ಲ. ಆದರೆ ಕಥೆಯೇ ಅದೆಲ್ಲದರ ಸ್ಥಾನವನ್ನು ಆಕ್ರಮಿಸಿಕೊಂಡು ತಣ್ಣಗೆ ವಿಜೃಂಭಿಸುತ್ತದೆ. ಅಶು ಬೆದ್ರ ನಾಯಕನಾಗಿ ಮೊದಲ ಪ್ರಯತ್ನದಲ್ಲಿಯೇ ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆ. ಸಂಗೀತಾ ಭಟ್ ಕೂಡಾ ಅದಕ್ಕೆ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಅತುಲ್ ಕುಲಕರ್ಣಿ, ಪವನ್ ಕುಮಾರ್, ಬಿ ಸುರೇಶ್ ಅವರ ಪಾತ್ರಗಳೂ ಕಾಡುವಂತಿವೆ. ಅಂತೂ ಅತ್ಯಂತ ವಿಶಿಷ್ಟವಾದ ಚಿತ್ರವಾಗಿ ದಾಖಲಾಗುವಂತೆ ಅಳಿದು ಉಳಿದವರು ಚಿತ್ರ ಮೂಡಿ ಬಂದಿದೆ.

ರೇಟಿಂಗ್: 3.5/5

TAGGED:Alidu UlidavaruArvind SastryAshu BedraAtul KulkarniKannada moviePawan KumarPublic TVreviewಅರವಿಂದ್ ಶಾಸ್ತ್ರಿಅಶು ಬೆದ್ರಅಳಿದು ಉಳಿದವರುರೇಟಿಂಗ್
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

PBKS
Cricket

ಮಳೆಯಿಂದ ಕೋಲ್ಕತ್ತಾ vs ಪಂಜಾಬ್‌ ಪಂದ್ಯ ರದ್ದು – ಆರ್‌ಸಿಬಿ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಜಿಗಿದ ಶ್ರೇಯಸ್‌ ಪಡೆ

Public TV
By Public TV
4 hours ago
Donald Trump 1
Latest

ಒಂದೇ ರಾತ್ರಿಯಲ್ಲಿ ಇಡೀ ಇರಾನ್‌ನ ಸರ್ವನಾಶ ಮಾಡಬಹುದು, ಅದು ಮಂಗಳವಾರ ಇರಬಹುದು: ಟ್ರಂಪ್‌ ಮತ್ತೆ ಎಚ್ಚರಿಕೆ

Public TV
By Public TV
4 hours ago
udupi rescue
Latest

ಬಾವಿಗೆ ಬಿದ್ದ ವೃದ್ಧ ಮೂರು ದಿನ ಸಾವು-ಬದುಕಿನ ಮಧ್ಯೆ ಹೋರಾಟ; ಪ್ರಾಣ ಉಳಿಸಿದ ಗ್ಯಾಸ್ ಸಿಲಿಂಡರ್ ಒಟಿಪಿ

Public TV
By Public TV
5 hours ago
Delhi Assembly Masked man arrested
Latest

ದೆಹಲಿ ವಿಧಾನಸೌಧದಲ್ಲಿ ಹೂಗುಚ್ಛ ಇಟ್ಟು, ಸ್ಪೀಕರ್ ಕಾರಿನ ಮೇಲೆ ಇಂಕ್ ಎರಚಿದ್ದವ 2 ಗಂಟೆಯಲ್ಲೇ ಅರೆಸ್ಟ್‌

Public TV
By Public TV
5 hours ago
01 5
Big Bulletin

ಬಿಗ್‌ ಬುಲೆಟಿನ್‌ 06 April 2026 ಭಾಗ-1

Public TV
By Public TV
5 hours ago
02 5
Big Bulletin

ಬಿಗ್‌ ಬುಲೆಟಿನ್‌ 06 April 2026 ಭಾಗ-2

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?