ಬಾಗ್ದಾದ್: ಐಸಿಸ್ ಒತ್ತೆಯಾಳಾಗಿದ್ದ ಸಂತ್ರಸ್ತೆ ಮಾಧ್ಯಮವೊಂದರ ಸಂದರ್ಶನದಲ್ಲಿ ಐಸಿಸ್ ರೇಪಿಸ್ಟ್ ಹುಮಾನ್‍ಗೆ ಖಡಕ್ ಪ್ರಶ್ನೆ ಮಾಡಿದ್ದು, ಆಕೆಯ ಪ್ರಶ್ನೆಗೆ ಉತ್ತರಿಸಲಾಗದೆ ಉಗ್ರ ತಲೆತಗ್ಗಿಸಿ ನಿಂತಿದ್ದ ಘಟನೆ ಇರಾಕ್‍ನಲ್ಲಿ ನಡೆದಿದೆ.
ನಿಮಗೇನಾದರೂ ಭಾವೆನಗಳು ಇದೆಯಾ? ನೈತಿಕತೆ ಅನ್ನೋದು ಇದೆಯಾ ಎಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಪ್ರಶ್ನಿಸಿದಾಗ ಉತ್ತರಿಸಲಾಗದೇ ಐಸಿಸ್ ರೇಪಿಸ್ಟ್ ಹುಮಾನ್ ತಲೆ ತಗ್ಗಿಸಿ ನಿಂತಿದ್ದನು. ಇರಾಕ್‍ನಲ್ಲಿ ಐಸಿಸ್ ಒತ್ತೆಯಾಳಾಗಿದ್ದ ಸಂತ್ರಸ್ತೆ ಅಶ್ವಾಖ್ ಹಾಜೀ ಹಮೀದ್ ತನ್ನನ್ನು ಅತ್ಯಾಚಾರಗೈದ ಹುಮಾನ್ ಮುಂದೆ ನಿಂತು ಖಡಕ್ ಪ್ರಶ್ನೆ ಮಾಡಿದ್ದಾಳೆ.
Advertisement
Advertisement
ತಾನು 14 ವಯಸ್ಸಿನಲ್ಲಿದ್ದಾಗ ನನ್ನ ಮೇಲೆ ನೀನು ಅತ್ಯಾಚಾರಗೈದೆ. ಆಗ ನನ್ನಲ್ಲಿ ಏನು ಕಂಡು ನೀನು ವಿಕೃತಿ ಮೆರೆದೆ. ನನ್ನ ಜೀವನವನ್ನೇ ನೀನು ಹಾಳು ಮಾಡಿದೆ. ನನ್ನ ಕನಸ್ಸನ್ನು ದರೋಡೆಮಾಡಿ ಕತ್ತಲ ಕೂಪಕ್ಕೆ ತಳ್ಳಿದೆ. ನಿನಗೇನಾದ್ರೂ ಭಾವನೆಗಳು ಇದೆಯಾ? ನೈತಿಕತೆ ಅನ್ನೋದು ಇದೆಯಾ ಎಂದು ಪ್ರಶ್ನಿಸಿ ಕಣ್ಣಿರಿಟ್ಟಿದ್ದಾಳೆ.
Advertisement
ಅಶ್ವಾಖ್ 14 ವರ್ಷದವಳಾಗಿದ್ದಾಗ ಆಕೆಯನ್ನು ಐಸಿಸ್ ಉಗ್ರರು ಕುಟುಂಬದಿಂದ ದೂರಮಾಡಿ 100 ಡಾಲರ್‍ಗೆ ಆಕೆಯನ್ನು ಮಾರಾಟ ಮಾಡಿ ಒತ್ತೆಯಾಳಾಗಿ ಇರಿಸಿದ್ದರು. ಕೆಲ ವರ್ಷದ ಬಳಿಕ 2015ರಲ್ಲಿ ಅಶ್ವಾಖ್ ತಪ್ಪಿಸಿಕೊಂಡು ಜರ್ಮನಿಗೆ ಹೋಗಿದ್ದಳು. ಇದೀಗ ಮತ್ತೆ ಇರಾಕ್‍ಗೆ ವಾಪಸ್ ಆಗಿದ್ದು, ಸಂದರ್ಶವೊಂದರಲ್ಲಿ ಐಸಿಸ್ ರೇಪಿಸ್ಟ್ ಹುಮಾನ್ ಮುಂದೆ ನಿಂತು ಖಡಕ್ ಪ್ರಶ್ನೆ ಕೇಳಿದ್ದಾಳೆ. ಸಂತ್ರಸ್ತೆಯ ಪ್ರಶ್ನೆಗಳಿಗೆ ಐಸಿಸ್ ಉಗ್ರ ತತ್ತರಿಸಿದ್ದು, ತಲೆ ತಗ್ಗಿಸಿ ನಿಂತಿದ್ದನು. ಕೊನೆಗೆ ಅಶ್ವಾಖ್ ಭಾವುಕಳಾಗಿ ಪ್ರಜ್ಞೆ ತಪ್ಪಿ ಬೀಳುವ ದೃಶ್ಯಾವಳಿ ವಿಡಿಯೋದಲ್ಲಿ ಸೆರೆಯಾಗಿದೆ.
Advertisement
ಇರಾಕಿ ರಾಷ್ಟ್ರೀಯ ಗುಪ್ತಚರ ಸೇವೆ ಈ ಸಂದರ್ಶವನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ಸಂತ್ರಸ್ತೆ ಅಬು ಹುಮಾನ್ ಮುಂದೆ ನಿಂತು, ನನಗೆ ಹೀಗೇಕೆ ಮಾಡಿದಿರಿ? ನಾನು ಯಾಜಿದಿ (ಕುರ್ದಿಷ್) ಅನ್ನೋ ಕಾರಣಕ್ಕಾ? ನಾನು 14 ವರ್ಷದವಳಿದ್ದಾಗ ರೇಪ್ ಮಾಡಿದ್ರಿ, ನಿಮಗೇನಾದರೂ ಭಾವನೆಗಳಿವೆಯಾ? ನಿಮಗೇನಾದರೂ ನೈತಿಕತೆ ಇದೆಯಾ? ನನಗಾಗ 14 ವರ್ಷ ನಿಮ್ಮ ಮಗಳು, ಮಗ, ತಂಗಿಯಷ್ಟು ವಯಸ್ಸು. ನೀವು ನನ್ನ ಬಾಳನ್ನು ಹಾಳು ಮಾಡಿದಿರಿ. ನನ್ನ ಕನಸುಗಳನ್ನ ದರೋಡೆ ಮಾಡಿದ್ದೀರಿ. ನಿಮ್ಮಿಂದ ನಾನು ಹಿಂದೊಮ್ಮೆ ಐಸಿಸ್ ತೆಕ್ಕೆಯಲ್ಲಿದ್ದೆ. ನಾನು ಪಟ್ಟ ನೋವು, ಹಿಂಸೆ, ಒಂಟಿತನ ಈಗ ನೀನು ಜೈಲಿನಲ್ಲಿ ಇರುವಾಗ ಅರ್ಥ ಆಗ್ತಿದೆ ಅಲ್ವಾ? ನಿಮಗೆ ಭಾವನೆಗಳು ಇದ್ದಿದ್ದರೆ ನನ್ನನ್ನು ರೇಪ್ ಮಾಡುತ್ತಿರಲಿಲ್ಲ. ಆಗ ನನ್ನ ವಯಸ್ಸು ನಿನ್ನ ಮಗನಷ್ಟು, ಮಗಳಷ್ಟು ಇತ್ತು ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಮಾಡಿದ್ದಾಳೆ. ಆಕೆಯ ಪ್ರಶ್ನೆಗಳ ಸುರಿಮಳೆಗೆ ಉಗ್ರ ತತ್ತರಿಸಿ ಒಂದೇ ಒಂದು ಮಾತು ಆಡದೆ ತಲೆ ತಗ್ಗಿಸಿ ನಿಂತಿದ್ದನು. ಕೊನೆಗೆ ತಾನು ಪಟ್ಟ ಕಷ್ಟಗಳನ್ನು ಹೇಳುತ್ತಾ ಕಣ್ಣೀರಿಡುತ್ತಾ ಪ್ರಜ್ಞೆ ತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ರೆರ್ಕಾಡ್ ಆಗಿದೆ.
ಐಸಿಸ್ ಉಗ್ರರು ನಮ್ಮನ್ನು ಎಳೆದುಕೊಂಡು ಹೋಗಿದ್ದಾಗ ನಮ್ಮನ್ನು ಜೀವಂತ ಬಿಡುತ್ತಾರೋ, ಹತ್ಯೆಗೈಯ್ಯುತ್ತಾರೋ ಎನ್ನುವ ಬಗ್ಗೆ ನಮಗೆ ಅರಿವಿರಲಿಲ್ಲ. ನಾನೊಬ್ಬಳೆ ಅಲ್ಲ, ನನ್ನ ಜೊತೆ ಇನ್ನೂ 300ರಿಂದ 400 ಮಂದಿ 9 ವರ್ಷಕ್ಕೆ ಮೇಲ್ಪಟ್ಟ ಮಕ್ಕಳು, ಯುವತಿಯರು ಹಾಗೂ ಮಹಿಳೆಯರನ್ನು ಉಗ್ರರು ಎಳೆದುಕೊಂಡು ಹೋಗಿದ್ದರು. ಮೊದಲು ಎಲ್ಲರನ್ನು ಒಟ್ಟಿಗೆ ಇಟ್ಟಿದ್ದರು. ಆದರೆ ಬಳಿಕ ಎಲ್ಲರನ್ನೂ ಹಣಕ್ಕೆ ಮಾರಾಟ ಮಾಡಿ, ಒತ್ತೆಯಾಳುಗಳಾಗಿ ಇರಿಸಿದ್ದರು ಎಂದು ಹೇಳಿದ್ದಾಳೆ.
ನಾನು ಅಬು ಹುಮಾನ್ ಕೈಯಲ್ಲಿ ಸಿಕ್ಕಿಬಿದ್ದೆ. ನನ್ನನ್ನು ಎಳೆದುಕೊಂಡು ಒತ್ತೆಯಾಳಾಗಿ ಉಗ್ರ ಮಧ್ಯೆ ಇರಿಸಿಕೊಂಡನು, ಪ್ರತಿದಿನ ಹುಮಾನ್ ಹಾಗೂ ಹಲವರು ನನ್ನ ಮೇಲೆ ಅತ್ಯಾಚಾರವೆಸಗುತ್ತಿದ್ದರು. ಪ್ರತಿದಿನ ಹೊಡೆದು ಬಡಿದು ಹಿಂಸೆ ನೀಡುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.