ಹುಬ್ಬಳ್ಳಿ: ಶಿಕ್ಷಕರು ಅನಕ್ಷರಸ್ಥ ಬಾಳಲ್ಲಿ ಅಕ್ಷರ ಬೆಳಕು ಮೂಡಿಸುವ ಕೆಲಸ ಮಾಡಬೇಕು ಎಂದು ಶಿಕ್ಷಣಾಧಿಕಾರಿ ಅಶೋಕ್ ಸಿಂದಗಿ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮ ಪಂಚಾಯತಿಯ ಅನಕ್ಷರಸ್ಥರನ್ನು ಗುರುತಿಸುವ ಒಂದು ದಿನದ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರದ ಸಮೀಕ್ಷೆ ಕಾರ್ಯಕ್ರಮವನ್ನು ಅಶೋಕ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕಿರೇಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರು ಸರ್ವೇ ಕಾರ್ಯ ನಿರ್ವಹಿಸಬೇಕು. ಧಾರವಾಡ ಜಿಲ್ಲೆ ಶೇ.100 ರಷ್ಟು ಸಾಕ್ಷರತೆ ಸಾಧಿಸಲು ಎಲ್ಲರೂ ಶ್ರಮ ಪಡಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಅಂಗಡಿಯವರನ್ನೇ ಕಟ್ಟಿ ಹಾಕಿ 26 ಲಕ್ಷ ರೂ. ಕದ್ದ ಕಳ್ಳರು
Advertisement
Advertisement
ಕಲಿಕಾರ್ಥಿಗಳ ಮನವೋಲಿಸಿ ಶ್ರದ್ಧೆಯಿಂದ, ನಿಷ್ಠೆಯಿಂದ ಕಲಿಸುವುದರೊಂದಿಗೆ ಅನಕ್ಷರಸ್ಥರ ಬಾಳಲ್ಲಿ ಅಕ್ಷರ ಬೆಳಕು ಮೂಡಿಸಿರಿ. ಸಾಕ್ಷರತಾ ಕೇಂದ್ರಗಳು ಉತ್ತಮವಾಗಿ ನಡೆಯಲಿ. ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ವಿದ್ಯಾವಂತ ವಿದ್ಯಾರ್ಥಿಗಳು, ಸಾಕ್ಷರತಾ ಪ್ರೇರಕರು, ಮಹಿಳಾ ಸಂಘಗಳ ಸದಸ್ಯರ ಸಹಕಾರ ಪಡೆದು ಕಲಿಕಾ ಕೇಂದ್ರಗಳನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಬೇಕು. ಈ ಮೂಲಕ ಸಂಪೂರ್ಣ ಸಾಕ್ಷರತಾ ಗ್ರಾಮವಾಗಿ ಮಾಡಲು ಎಲ್ಲರೂ ಶ್ರಮಿಶೋಣ ಎಂದರು.
Advertisement
Advertisement
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಶಿಕ್ಷಕ ಎಸ್.ಸಿ.ಶಾನವಾಡ ಸಮೀಕ್ಷೆ ಕಾರ್ಯಗಾರ ತರಬೇತಿ ನೀಡಿದರು. ಮುಖ್ಯ ಶಿಕ್ಷಕಿ ಸುಮನ್ ತೇಲಂಗ್, ಶಿಕ್ಷಣ ಸಂಯೋಜಕ ಆರ್.ಬಿ.ಪಾಟೀಲ್, ಆರ್.ಎ.ವಿಜಾಪೂರ, ಜೆ.ಎಸ್.ಯಾವಗಲ್ಲ, ಬಿ.ಎನ್.ದಾಸ್, ಆರ್.ಜೆ.ಹೊಂಬಳ, ಎ.ವಾಯ್, ದಾಟನಾಳ, ಮಂಗಳಾ, ಜಯಶ್ರೀ.ಎಮ್, ಎಸ್.ಬಿ.ಪೂಜಾರ ಇಲ್ಲಿ ತರಬೇತಿ ಪಡೆದರು. ಇದನ್ನೂ ಓದಿ: ಎಂಜಿನಿಯರ್ ಮನೆಯಲ್ಲಿ 4 ಗಂಟೆ ದಾಳಿ ನಂತರ 60 ಲಕ್ಷ ರೂ. ಪತ್ತೆ