ಬೆಂಗಳೂರು: ತುಳು ಭಾಷೆಯನ್ನು (Tulu language) 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ ಎಂದು ಕಾಂಗ್ರೆಸ್ ಶಾಸಕ ಅಶೋಕ್ ರೈ ವಿಧಾನಸಭೆಯಲ್ಲಿ ಒತ್ತಾಯಿಸಿದರು. ತುಳುವಿನಲ್ಲೇ ಮಾತನಾಡಿ ಅಶೋಕ್ ರೈ (Ashok Kumar Rai) ಮನವಿ ಮಾಡಿದರು. ಅತ್ತ ಸ್ಪೀಕರ್ ಯು.ಟಿ ಖಾದರ್ (UT Khader) ಸಹ ತುಳುವಿನಲ್ಲೇ ಸ್ಪಷ್ಟನೆ ನೀಡಿದರು.
Advertisement
ಈ ವೇಳೆ ನೀವಿಬ್ಬರೇ ಮಾತನಾಡಿದ್ರೆ ಹೇಗೆ? ನಮಗೆ ನಿಮ್ಮ ಭಾಷೆ ಹೇಗೆ ಗೊತ್ತಾಗಬೇಕು? ಅಂತ ಹಲವು ಶಾಸಕರು ತಮಾಷೆಗೆಳೆದ ಪ್ರಸಂಗವೂ ಸದನದಲ್ಲಿ ನಡೆಯಿತು. ನೀವು ಏನು ಹೇಳಿದ್ರಿ ನಮಗೆ ಗೊತ್ತಾಗಲಿಲ್ಲ. ನಾವೇನು ಮಂಗಳೂರಿನ (Mangaluru) ಅಧಿವೇಶನದಲ್ಲಿ ಇದ್ದೇವಾ? ಅಂತಾ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ಜೋರಾಗಿ ನಕ್ಕು, ಕನ್ನಡದಲ್ಲಿ ಮಾತನಾಡಿ ಎಂದರು.
Advertisement
Advertisement
ಈ ವೇಳೆ ವೇದವ್ಯಾಸ ಕಾಮತ್ ರಿಂದಲೂ (Veda Vyasa Kamath) ತುಳು ಸಂಭಾಷಣೆ ನಡೆಯಿತು. ಶಾಸಕ ಅಶೋಕ್ ರೈ ಹೇಳಿದಂತೆ 2ನೇ ಅಧಿಕೃತ ಭಾಷೆ ಮಾಡಿ ಎಂದು ಸದನದಲ್ಲಿ ಕೈಮುಗಿದು ಮನವಿ ಮಾಡಿದರು. ಇದನ್ನೂ ಓದಿ: ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್ ಮ್ಯಾನ್ʼ ಜೀವನ ಕಥೆಯೇ ರೋಚಕ!
Advertisement
ಇದರಿಂದ ತಂಗಡಗಿ ಅನುಪಸ್ಥಿತಿಯಲ್ಲಿ ಪ್ರಿಯಾಂಕ್ ಖರ್ಗೆ ಉತ್ತರ ನೀಡಿ, ಬೇರೆ ರಾಜ್ಯಗಳಲ್ಲಿ ಎರಡು ಭಾಷೆಗಳಿವೆ. ಬಿಹಾರದಲ್ಲೂ ಎರಡು ಭಾಷೆಗಳಿವೆ, ಸ್ವಂತ ಖರ್ಚಿನಲ್ಲಿ ಅಧ್ಯಯನ ಮಾಡಿ ತಂದಿದ್ದಾರೆ. ತುಳು ಭಾಷೆಯ ಪ್ರಾಚೀನತೆ ಇತಿಹಾಸ ಗಮನಕ್ಕಿದೆ. ನನ್ನ ಬಾಲ್ಯ ಸ್ನೇಹಿತ ಶ್ರವಣ್ ಅನ್ನುವವರಿದ್ದರು. ಅವರಿಗೆ ಅವರ ತಾಯಿ ತುಳುವಿನಲ್ಲೇ ಬೈಯ್ಯುತ್ತಿದ್ರು. ಹಾಗಾಗಿ ನೀವೇನು ಹೇಳಿದ್ರಿ ನನಗೂ ಅರ್ಥವಾಗಿದೆ. ನಾನು ಇದರ ಪರವಾಗಿದ್ದೇನೆ. ನಾಳೆಯೇ ಸಚಿವರ ಗಮನಕ್ಕೆ ತರುತ್ತೇನೆ. ಸಭೆ ಮಾಡಿ ನಿರ್ಧಾರ ಮಾಡ್ತೇವೆ, ಅಂತ ಸದನಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದರು.
ಈ ವೇಳೆ ಲಂಬಾಣಿಯನ್ನೂ ಸೇರಿಸುವಂತೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮನವಿ ಮಾಡಿದರು. 8ನೇ ಪರಿಚ್ಚೇದಕ್ಕೆ ಸೇರಿಸಲು ಮನವಿ ಮಾಡಿದರು. ಇದನ್ನೂ ಓದಿ: ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ