– ಬಿಎಸ್‍ವೈ ಬೇಗ ಸಿಎಂ ಆಗಲಿ ಎಂದು ಹಾರೈಕೆ
ಮೈಸೂರು: ನಾನು ಲಿಂಗಾಯತ ಜಾತಿಯಲ್ಲಿ ಹುಟ್ಟಿದ ಪರಿಣಾಮ ನೈಸ್ ಪ್ರಾಜೆಕ್ಟ್ ಪೂರ್ಣಗೊಳಿಸಲು ಆಗಲಿಲ್ಲ. ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿವರೆಗೂ ನೈಸ್ ಪ್ರಾಜೆಕ್ಟ್ ಸಿಗುತಿತ್ತು ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷದ ವರಿಷ್ಠರ ಬಗ್ಗೆ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೈಸ್ ಪ್ರಾಜೆಕ್ಟ್ ನಾನು ಲಿಂಗಾಯುತ ಆದ ಕಾರಣ ಪೂರ್ಣಗೊಳಿಸಲಾಗಲಿಲ್ಲ. ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೇನೆ. ನಾನೇನಾದರೂ ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿವರೆಗೆ ನೈಸ್ ಪ್ರಾಜೆಕ್ಟ್ ಆಗುತ್ತಿತ್ತು ಎಂದು ಹೇಳಿದ್ದಾರೆ.
Advertisement
Advertisement
ಸಭೆಯಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತಸ ತಂದಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಬಹು ದಿನಗಳ ಬಳಿಕ ನಗು ಮುಖದಿಂದ ನೋಡುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕೂಡ ಅವರು ಬೇಗ ಸಿಎಂ ಆಗಲಿ ಎಂದು ಹಾರೈಕೆ ಮಾಡುತ್ತೇನೆ ಎಂದರು.
Advertisement
ಜನರು ನನ್ನನ್ನು ಸೋಲಿಸಿದ ವೇಳೆ ನಾನು ಶ್ರೀಗಳ ಸಲಹೆ ಪಡೆದು ಸಂತನಾಗಿದ್ದೆ. ಈಗ ಜನರಿಗೆ ತಿಳಿಯುತ್ತಿದೆ ಯಾರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಸಿದರು. ತಮ್ಮ ಭಾಷಣದಲ್ಲಿ ಲಿಂಗಾಯುತ ಪದ ಬಳಸಿ ಸ್ಪಷ್ಟನೆ ನೀಡಿದ ಅವರು, ಈಗ ಲಿಂಗಾಯತ ಎಂದರೆ ಬೈತಾರೆ, ವೀರಶೈವ ಲಿಂಗಾಯುತ ಎನ್ನಬೇಕು ಎಂದರು. ಅಲ್ಲದೇ ನಮಗೆ ವಿಭೂತಿಯೇ ಎಲ್ಲಕ್ಕಿಂತ ಹೆಚ್ಚಿನ ಮೇಕಪ್ ಎಂದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv