ಬೆಂಗಳೂರು: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಪ್ರಾದೇಶಿಕ ಆಯುಕ್ತರಿಗೆ ಬರೆದಿರುವ ಪತ್ರವನ್ನ ಬಿಜೆಪಿ (BJP) ಬಿಡುಗಡೆ ಮಾಡಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಪತ್ರ ಬಿಡುಗಡೆ ಮಾಡಿದ್ದು, ರಾಜ್ಯಮಟ್ಟದ ವಕ್ಫ್ (Waqf) ಆಸ್ತಿಗಳ ಕಾರ್ಯಪಡೆ ಪ್ರಗತಿ ಸಭೆಗಳ ಅನುಪಾಲನಾ ವರದಿ ಕೇಳಿರುವ ಪತ್ರ ಇದಾಗಿದೆ.
ವಕ್ಫ್ ಆಸ್ತಿ ಸಂಬಂಧಿತ 21,767 ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ವಹಿಸುವ ಅನುಪಾಲನಾ ವರದಿ ಕೇಳಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಬೆಂಗಳೂರು, ಮೈಸೂರು ಕಲಬುರಗಿ, ಧಾರವಾಡ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನವೆಂಬರ್ 7ರಂದು ಬರೆದಿರುವ ಪತ್ರವನ್ನ ಅಶೋಕ್ ಬಿಡುಗಡೆ ಮಾಡಿದ್ದಾರೆ. ಸರ್ಕಾರ ನೋಟಿಸ್‌ಗಳನ್ನು ವಾಪಸ್ ಪಡೆದ ಬಳಿಕವೂ ಪತ್ರ ಬರೆದಿರುವ ಕಂದಾಯ ಇಲಾಖೆ ನಡೆ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಯೋಗ ಶಿಕ್ಷಕಿ ಕಿಡ್ನ್ಯಾಪ್ ಕೇಸ್: ಘಟನೆ ಬಳಿಕ ಟೆಂಪಲ್ ರನ್ ನಡೆಸಿದ್ದ ಆರೋಪಿಗಳು ಅರೆಸ್ಟ್
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಕ್ಫ್ ಬೋರ್ಡ್ ಹಗರಣ ಕ್ಯಾನ್ಸರ್ ರೀತಿ ಹಬ್ಬುತ್ತಿದೆ. ವಕ್ಫ್ ಆಸ್ತಿಗಳ ನೋಟಿಸ್ ವಾಪಸ್‌ಗೆ ಸೂಚಿಸಿದ್ದೇನೆ ಎಂದು ಸಿಎಂ ಹೇಳಿದ್ದರು. ಈಗ ಸರ್ಕಾರಕ್ಕೆ ಏನಾದರೂ ಮಾನ ಮರ್ಯಾದೆ ಇದ್ಯಾ? ಕಂದಾಯ ಇಲಾಖೆ ವಕ್ಫ್ ಕಾರ್ಯಪಡೆ ಸಭೆ ಪ್ರಗತಿ ಸಾಧನೆ ಬಗ್ಗೆ ಪತ್ರ ಕಳುಹಿಸಿದೆ. 21,767 ಪ್ರಕರಣಗಳಲ್ಲಿ ಅಗತ್ಯ ಕ್ರಮವಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದಿದೆ. ವಕ್ಫ್ ಖಾತೆ ಬದಲಾವಣೆ ಬಗ್ಗೆ ಮತ್ತೊಮ್ಮೆ ವರದಿ ಸಲ್ಲಿಸಿ ಎಂದು ಪತ್ರ ಬರೆದಿದ್ದಾರೆ. ಸಿಎಂ ಹೇಳಿದ ಮೇಲೂ ಪತ್ರ ಬರೆದಿದ್ದಾರೆ. ಕಳೆದ ನವೆಂಬರ್ 7 ರಂದು ಈ ಪತ್ರವನ್ನ ಬರೆಯಲಾಗಿದೆ. ಕಂದಾಯ ಇಲಾಖೆ ಪತ್ರ ಹೊರಡಿಸಿದ್ದು ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಚೀನಾದಿಂದ ಪಿಪಿಇ ಕಿಟ್ ತರಿಸಿ ಸಾವಿರಾರು ಕೋಟಿ ಲೂಟಿ – ರಾಮುಲು, ಬಿಎಸ್‌ವೈ ವಿರುದ್ಧ ಸಿಎಂ ಬಾಂಬ್
ಸರ್ಕಾರದ ಯೂಟರ್ನ್ ಇದು. ಮೂರು ಬೈಎಲೆಕ್ಷನ್ ಇದೆ. ಇದು ಪರಿಣಾಮ ಬೀರುತ್ತೆ ಎಂದು ಹೇಳಿ ಈಗ ಮತ್ತೆ ನೋಟಿಸ್ ಕೊಡುತ್ತಾರೆ. ಸಿದ್ದರಾಮಯ್ಯ ಸುಳ್ಳುರಾಮಯ್ಯನವರು. ಏನು ಮಾಡಲ್ಲ ಎಂದು ಮತ್ತೆ ಆದೇಶ ಹೊರಡಿಸುತ್ತಾರೆ. ಇದು ತುಘಲಕ್ ಸರ್ಕಾರ ಎಂದು ಹರಿಹಾಯ್ದರು. ಇದನ್ನೂ ಓದಿ: ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ‘ಲಕ್ಕಿ’ ಕಾರ್ ಸಮಾಧಿ – ಅಂತ್ಯಸಂಸ್ಕಾರಕ್ಕೆ 4 ಲಕ್ಷ ಖರ್ಚು, 1,500 ಮಂದಿ ಭಾಗಿ